Advertisement

ಸುರಪುರ ನಿಲ್ದಾಣ ದನಗಳ ತಾಣ

03:33 PM Jul 13, 2018 | |

ಸುರಪುರ: ಪ್ರಯಾಣಿಕರಿಗೆ ಸುರಕ್ಷತೆ ಕಲ್ಪಿಸಬೇಕಿದ್ದ ಇಲ್ಲಿಯ ಬಸ್‌ ನಿಲ್ದಾಣ ದನಗಳ ತಾಣವಾಗಿ ಮಾರ್ಪಟ್ಟಿದ್ದು, ಸದಾ ದನಗಳಿಂದ ತುಂಬಿರುವ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಮಾತ್ರ ಸುರಕ್ಷತೆ ಇಲ್ಲದಂತಾಗಿದೆ.

Advertisement

ಪ್ರತಿ ನಿತ್ಯ ಬಸ್‌ ನಿಲ್ದಾಣ ಮಧ್ಯ ಭಾಗದಲ್ಲಿ ಮತ್ತು ನಿಲ್ದಾಣದ ಒಳ ಆವರಣದಲ್ಲಿ ದನಗಳು ಸಂಜೆ ವೇಳೆ ಮಲಗುತ್ತಿದ್ದು. ಇದರಿಂದ ಬಸ್‌ ಸಂಚಾರಕ್ಕೆ ಅಡೆತಡೆ ಉಂಟಾಗಿ ಚಾಲಕರು ಬಸ್‌ನಿಂದ ಕೆಳಗೆ ಇಳಿದು ಮಲಗಿರುವ ದನಗಳನ್ನು ಓಡಿಸುವಂತ ಸ್ಥಿತಿ ನಿರ್ಮಾಣವಾಗಿದೆ.

ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ನೂರಾರು ಕೋಟಿ ರೂ. ಖರ್ಚು ಮಾಡಿ ಬಸ್‌ ನಿಲ್ದಾಣ ನಿರ್ಮಿಸಲಾಗಿದೆ. ಆದರೆ ದನಗಳು ಮಾತ್ರ ನಿಲ್ದಾಣ ತುಂಬ ಮೂತ್ರ ವಿಸರ್ಜನೆ, ಸೆಗಣಿ ಹಾಕಿ ಗಲೀಜು ಮಾಡುತ್ತಿದ್ದು, ಪ್ರಯಾಣಿಕರಿಗೆ ಸಮಸ್ಯೆ ಆಗಿದೆ. ದನ ಬಸ್‌ ನಿಲ್ದಾಣದಲ್ಲಿ ಬಾರದಂತೆ ತಡೆಯುವಲ್ಲಿ ನಗರಸಭೆ ನಿರ್ಲಕ್ಷé ವಹಿಸಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

ಆಟೋ, ಟಂಟಂ, ಕ್ರೂಸರ್‌ ಸೇರಿದಂತೆ ವಿವಿಧ ವಾಹನ ರಾಜಾರೋಷವಾಗಿ ಬಸ್‌ ನಿಲ್ದಾಣದಲ್ಲಿಯೇ ಬಂದು ಪ್ರಯಾಣಿಕರನ್ನು ತುಂಬುತ್ತಾರೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಕ್ರಮಕ್ಕೆ ಮುಂದಾಗಬೇಕಿದ್ದು, ಅವ್ಯವಸ್ಥೆಯ ಆಗರ ಆಗಿರುವ ನಿಲ್ದಾಣದಲ್ಲಿ ಸಕಲ ಸೌಲಭ್ಯ ಒದಗಿಸುವವರೇ ಎಂದು ಕಾಯ್ದು ನೋಡಬೇಕಿದೆ 
ಪ್ರಯಾಣಿಕರಿಗೆ ಸಾರಿಗೆ ಇಲಾಖೆ ಸಕಲ ಸೌಲಭ್ಯ ಕಲ್ಪಿಸಬೇಕು. ಆದರೆ ಈ ಬಗ್ಗೆ ಸಾರಿಗೆ ಇಲಾಖೆ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ. ಸುರಕ್ಷತೆ ದೃಷ್ಟಿಯಿಂದ ಬಸ್‌ ನಿಲ್ದಾಣಕ್ಕೆ ಗಾರ್ಡ್‌ಗಳನ್ನು ನೇಮಿಸಬೇಕು. ನಿರ್ಲಕ್ಷ್ಯ ವಹಿಸಿದ್ದಲ್ಲಿ ಹೋರಾಟ ಮಾಡುವುದು ಖಚಿತ.  
ಮಲ್ಲಿಕಾರ್ಜುನ ಕ್ರಾಂತಿ, ಕ.ರಾ. ದಸಂಸ ಜಿಲ್ಲಾ ಸಂಚಾಲಕ

ದನಗಳು ಬಸ್‌ ನಿಲ್ದಾಣದಲ್ಲಿ ಬರದಂತೆ ತಡೆಯುವದು ನಗರಸಭೆ ಕೆಲಸ. ಆದರೆ ಈ ಕುರಿತ ನಗರಸಭೆಗೆ
ಸಾಕಷ್ಟು ಬಾರಿ ಪತ್ರ ಬರೆದು ಸಾಕಾಗಿದೆ. ಕರ್ತವ್ಯ ಬಿಟ್ಟು ದನ ಓಡಿಸುವುದೇ ದಿನನಿತ್ಯದ ಕೆಲಸವಾಗಿದೆ. ಗಾರ್ಡ್‌
ನೇಮಿಸುವಂತೆ ಸಾರಿಗೆ ಇಲಾಖೆ ವಿಭಾಗೀಯ ವ್ಯವಸ್ಥಾಪಕರಿಗೆ ಮನವಿ ಮಾಡಿದ್ದೇವೆ. ಶಾಸಕರ ಗಮನಕ್ಕೂ
ತಂದಿದ್ದೇವೆ. ಆದರೂ ಪ್ರಯೋಜನವಾಗಿಲ್ಲ.
 ಗೋಪಾಲ ನಾಯಕ,ಕಂಟ್ರೋಲರ್‌ 

Advertisement

„ಸಿದ್ದಯ್ಯ ಪಾಟೀಲ

Advertisement

Udayavani is now on Telegram. Click here to join our channel and stay updated with the latest news.

Next