ಮುಂಬೈ: ಹಿರಿಯ ನಾಯಕ ಶರದ್ ಪವಾರ್ ಅವರು ಶನಿವಾರ ಪುತ್ರಿ ಸುಪ್ರಿಯಾ ಸುಳೆ ಅವರನ್ನು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷರಾಗಿ ನೇಮಿಸಿದ್ದರು. ಇದಾದ ಬಳಿಕ ಸುಪ್ರಿಯಾ ಸುಳೆ ಅವರು ಸ್ವಜನಪಕ್ಷಪಾತದ ಆರೋಪಗಳನ್ನು ಎದುರಿಸಿದರು.
“ಯಾವ ಪಕ್ಷದಲ್ಲಿ ಸ್ವಜನಪಕ್ಷಪಾತವಿಲ್ಲ? ನೀವು ಬೇಕಂತಲೇ ಸ್ವಜನಪಕ್ಷಪಾತವನ್ನು ಮಾಡುವಂತಿಲ್ಲ” ಎಂದು ಸುದ್ದಿಗಾರರ ಪ್ರಶ್ನೆಗೆ ಸುಳೆ ಹೇಳಿದರು.
“ನಾವು ಸ್ವಜನಪಕ್ಷಪಾತದ ಬಗ್ಗೆ ಮಾತನಾಡುವಾಗ ಕಾರ್ಯಕ್ಷಮತೆಯ ಬಗ್ಗೆ ಏಕೆ ಮಾತನಾಡಬಾರದು? ನನ್ನ ಸಂಸತ್ತಿನ ಡೇಟಾವನ್ನು ನೋಡಿ. ಸಂಸತ್ತನ್ನು ನನ್ನ ತಂದೆ ಅಥವಾ ಚಿಕ್ಕಪ್ಪ ಅಥವಾ ನನ್ನ ತಾಯಿ ನಡೆಸುತ್ತಿಲ್ಲ. ಲೋಕಸಭೆಯ ಅಂಕಿಅಂಶಗಳ ಪ್ರಕಾರ ನಾನು ಚಾರ್ಟ್ ನಲ್ಲಿ ಅಗ್ರಸ್ಥಾನದಲ್ಲಿದ್ದೇನೆ. ಸ್ವಜನಪಕ್ಷಪಾತವಿಲ್ಲ. . ಅದು ಅರ್ಹತೆ,” ಎಂದು ಅವರು ಹೇಳಿದರು.
ಇದನ್ನೂ ಓದಿ:WTC Final ಓವಲ್ ಓಟದಲ್ಲಿ ಸೋತ ಟೀಂ ಇಂಡಿಯಾ: ಆಸ್ಟ್ರೇಲಿಯಾ ನೂತನ ಟೆಸ್ಟ್ ಚಾಂಪಿಯನ್
ಶನಿವಾರ ಸುಪ್ರಿಯಾ ಸುಳೆ ಮತ್ತು ಪ್ರಫುಲ್ ಪಟೇಲ್ ಅವರನ್ನು ಎನ್ ಸಿಪಿ ಪಕ್ಷದ ಕಾರ್ಯಾಧ್ಯಕ್ಷರನ್ನಾಗಿ ಶರದ್ ಪವಾರ್ ನೇಮಿಸಿದ್ದರು. ಪಕ್ಷದ 25ನೇ ವರ್ಷದ ಕಾರ್ಯಕ್ರಮದಲ್ಲಿ ಈ ಘೋಷಣೆ ಮಾಡಿದ್ದರು.