ನವದೆಹಲಿ: ಲೋಕಸಭೆ ಮತದಾನದ ಬಳಿಕ ಎಲ್ಲಾ ಮತಗಟ್ಟೆಗಳ ಅಂತಿಮ ಅಂಕಿಅಂಶಗಳನ್ನು ವೆಬ್ ಸೈಟ್ ನಲ್ಲಿ ಪ್ರಕಟಿಸಲು ಚುನಾವಣ ಆಯೋಗಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಲು ಸುಪ್ರೀಂಕೋರ್ಟ್ ಶುಕ್ರವಾರ (ಮೇ 24) ನಿರಾಕರಿಸಿದೆ.
ಇದನ್ನೂ ಓದಿ:Election Commission;ಎಲ್ಲ ಬೂತ್‌ಗಳ ಮಾಹಿತಿ ಪ್ರಕಟ ಅಸಾಧ್ಯ: ಏನಿದು ಫಾರ್ಮ್ 17-ಸಿ?
ಲೋಕಸಭೆ ಚುನಾವಣೆಯ ನಂತರ ಈ ಅರ್ಜಿಯ ವಿಚಾರಣೆ ನಡೆಸುವುದಾಗಿ ಸುಪ್ರೀಂಕೋರ್ಟ್ ಹೇಳಿದೆ. ಜಸ್ಟೀಸ್ ದೀಪಂಕರ್ ದತ್ತಾ ಮತ್ತು ಜಸ್ಟೀಸ್ ಸತೀಶ್ ಚಂದ್ರ ಶರ್ಮಾ ಅವರನ್ನೊಳಗೊಂಡ ರಜಾಕಾಲದ ಪೀಠ, ಚುನಾವಣ ಪ್ರಕ್ರಿಯೆ ಮಧ್ಯೆ ಈ ಮನವಿಯನ್ನು ಕೈಬಿಡಬೇಕಾದ ಅಗತ್ಯವಿದೆ ಎಂದು ಹೇಳಿದೆ.
ನಾಳೆ (ಶನಿವಾರ) ಲೋಕಸಭೆ 6ನೇ ಹಂತದ ಚುನಾವಣೆ ನಡೆಯಲಿದೆ. ಆ ನಿಟ್ಟಿನಲ್ಲಿ ಚುನಾವಣೆಯ ನಂತರ ನಾವು ಈ ಪ್ರಕರಣದ ವಿಚಾರಣೆ ನಡೆಸುತ್ತೇವೆ ಎಂದು ಪೀಠ ಸ್ಪಷ್ಟಪಡಿಸಿದೆ ಎಂದು ವರದಿ ತಿಳಿಸಿದೆ.
ಚುನಾವಣೆ ನಂತರ ಎಲ್ಲಾ ಮತಗಟ್ಟೆಗಳ ಅಂತಿಮ ಅಂಕಿಅಂಶಗಳನ್ನು ವೆಬ್ ಸೈಟ್ ನಲ್ಲಿ ಆಯೋಗ ಪ್ರಕಟಿಸಬೇಕೆಂದು ಕೋರಿ ಎನ್ ಜಿಒ(ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು.