ನವದೆಹಲಿ: ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಸುಪ್ರೀಂ ಕೋರ್ಟ್ ಕೊಲಿಜಿಯಂ ಮಂಗಳವಾರ ಏಳು ನ್ಯಾಯಾಂಗ ಅಧಿಕಾರಿಗಳು ಮತ್ತು ಇಬ್ಬರು ವಕೀಲರನ್ನು ವಿವಿಧ ಹೈಕೋರ್ಟ್‌ಗಳ ನ್ಯಾಯಮೂರ್ತಿಗಳಾಗಿ ಬಡ್ತಿ ನೀಡಲು ಶಿಫಾರಸು ಮಾಡಿದೆ.
ಕೊಲಿಜಿಯಂ ತನ್ನ ಸಭೆಯಲ್ಲಿ ನ್ಯಾಯಾಂಗ ಅಧಿಕಾರಿಗಳಾದ ರಾಮಚಂದ್ರ ದತ್ತಾತ್ರೇ ಹುದ್ದಾರ್ ಮತ್ತು ವೆಂಕಟೇಶ್ ನಾಯ್ಕ್ ಥಾವರ್ಯನಾಯ್ಕ್ ಅವರನ್ನು ಕರ್ನಾಟಕ ಹೈಕೋರ್ಟ್ ನಲ್ಲಿ ನ್ಯಾಯಾಧೀಶರನ್ನಾಗಿ ಮಾಡುವ ಪ್ರಸ್ತಾವನೆಯನ್ನು ಅನುಮೋದಿಸಿತು.
“ಜನವರಿ 10 ರಂದು ನಡೆದ ತನ್ನ ಸಭೆಯಲ್ಲಿ ಸುಪ್ರೀಂ ಕೋರ್ಟ್ ಕೊಲಿಜಿಯಂ, ಮರುಪರಿಶೀಲನೆಯ ಮೇಲೆ, ವಕೀಲರಾದ ನಾಗೇಂದ್ರ ರಾಮಚಂದ್ರ ನಾಯ್ಕ್ ಅವರನ್ನು ಕರ್ನಾಟಕ ಹೈಕೋರ್ಟ್‌ನಲ್ಲಿ ನ್ಯಾಯಾಧೀಶರನ್ನಾಗಿ ಮಾಡುವ ತನ್ನ ಹಿಂದಿನ ಶಿಫಾರಸನ್ನು ಪುನರುಚ್ಚರಿಸಲು ನಿರ್ಧರಿಸಿದೆ” ಎಂದು ನಿರ್ಣಯದಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ:ಲಂಕಾ ಏಕದಿನ: ರನ್ ಮೇಲಾಟದಲ್ಲಿ ಹೃದಯ ಗೆದ್ದ ರೋಹಿತ್; ವಿಡಿಯೋ
ಮತ್ತೊಂದು ನಿರ್ಣಯದಲ್ಲಿ ಕೊಲಿಜಿಯಂ, ಬಾಂಬೆ ಹೈಕೋರ್ಟ್ ನ ನ್ಯಾಯಾಧೀಶರಾಗಿ ವಕೀಲೆ ನೀಲಾ ಕೇದಾರ್ ಗೋಖಲೆ ಅವರನ್ನು ಮೇಲ್ದರ್ಜೆಗೆ ಏರಿಸುವ ಪ್ರಸ್ತಾಪವನ್ನು ಅನುಮೋದಿಸಿತು. ನ್ಯಾಯಾಂಗ ಅಧಿಕಾರಿ ಮೃದುಲ್ ಕುಮಾರ್ ಕಲಿತಾ ಅವರನ್ನು ಗುವಾಹಟಿ ಹೈಕೋರ್ಟ್ ನ ನ್ಯಾಯಾಧೀಶರಾಗಿ ಶಿಫಾರಸ್ಸು ಮಾಡಿದರು.