Advertisement

Supreme Court: ನ್ಯಾಯಾಧೀಶರು ಬೋಧನೆ ಮಾಡಬಾರದು!

08:42 PM Dec 08, 2023 | Team Udayavani |

ನವದೆಹಲಿ: ನ್ಯಾಯಮೂರ್ತಿಗಳು ಬೋಧನೆ ಮಾಡುವುದು ಅಥವಾ ತಮ್ಮ ವೈಯಕ್ತಿಕ ಅಭಿಪ್ರಾಯ ತಿಳಿಸುವುದರಿಂದ ಹಿಂದೆ ಸರಿಯಬೇಕು ಎಂದು ಸರ್ವೋಚ್ಚ ನ್ಯಾಯಪೀಠ ಸ್ಪಷ್ಟವಾಗಿ ಹೇಳಿದೆ.

Advertisement

ಕಲ್ಕತ್ತಾ ಉಚ್ಚ ನ್ಯಾಯಾಲಯ ಈ ವರ್ಷ ಅ.18ರಂದು ಪೋಕ್ಸೋ ಪ್ರಕರಣದಲ್ಲಿ ನೀಡಿದ್ದ ತೀರ್ಪನ್ನು ಗಮನದಲ್ಲಿಟ್ಟುಕೊಂಡು, ಸರ್ವೋಚ್ಚ ಪೀಠ ಹೀಗೆಂದು ಹೇಳಿದೆ. ಸಮ್ಮತಿಯ ಸಂಭೋಗ ಪ್ರಕರಣದಲ್ಲಿ ವ್ಯಕ್ತಿಯೊಬ್ಬರನ್ನು ಖುಲಾಸೆ ಮಾಡಿದ್ದ ಕಲ್ಕತ್ತಾ ನ್ಯಾಯಪೀಠ, ಯುವತಿಯರು 2 ನಿಮಿಷದ ಸುಖಕ್ಕಾಗಿ ಮೈಮರೆಯಬಾರದು, ತಮ್ಮ ಲೈಂಗಿಕ ಬಯಕೆಗಳನ್ನು ಅದುಮಿಟ್ಟುಕೊಳ್ಳಬೇಕು ಎಂದು ಸಲಹೆ ನೀಡಿತ್ತು. ಆ ವೇಳೆ ಪೋಕ್ಸೋದ ಕೆಲವು ನ್ಯೂನತೆಗಳನ್ನು ಎತ್ತಿ ತೋರಿಸಿತ್ತು.

ನಿರ್ದಿಷ್ಟ ಪ್ರಕರಣದಲ್ಲಿ ಅಪ್ರಾಪ್ತ ವಯಸ್ಕಳನ್ನು ವ್ಯಕ್ತಿಯೊಬ್ಬರು ಅತ್ಯಾಚಾರಕ್ಕೊಳಪಡಿಸಿದ್ದಾರೆ ಎನ್ನಲಾಗಿತ್ತು. ಆದರೆ ಆಕೆಯೊಂದಿಗೆ ಆತನಿಗೆ ಮುಂಚೆಯಿಂದಲೂ ಪ್ರಣಯ ಸಂಬಂಧವಿತ್ತು ಎಂದು ವಿಚಾರಣೆಯಲ್ಲಿ ತಿಳಿದುಬಂದಿತ್ತು. ಈ ಹಿನ್ನೆಲೆಯಲ್ಲಿ ಸಮ್ಮತಿಯ ಸಂಭೋಗವನ್ನೂ ಈ ಪ್ರಕರಣದ ವ್ಯಾಪ್ತಿಯಲ್ಲಿ ತಂದಿದ್ದಕ್ಕೆ ಕಳಕಳಿ ವ್ಯಕ್ತಪಡಿಸಿತ್ತು. 16 ವರ್ಷ ದಾಟಿದವರು ಸಮ್ಮತಿಯ ಕ್ರಿಯೆಯಲ್ಲಿ ತೊಡಗಿದ್ದರೆ, ಅದನ್ನು ಅಪರಾಧದ ಚೌಕಟ್ಟಿನಿಂದ ಹೊರಗಿಡಬೇಕು ಎಂದು ಹೇಳಿತ್ತು.

Advertisement

Udayavani is now on Telegram. Click here to join our channel and stay updated with the latest news.

Next