ನೀಡುವ ಪ್ರಕ್ರಿಯೆಯನ್ನು ಮಾ.15ರೊಳಗೆ ಪೂರ್ಣಗೊಳಿಸುವಂತೆ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ಆದೇಶ ನೀಡಿದೆ.
Advertisement
ಈ ಮೊದಲು ತಾನು ನೀಡಿರುವ ಆದೇಶಕ್ಕೆ ಪರ್ಯಾಯವಾಗಿ ಯಾವುದೇ ಕಾನೂನು ರೂಪಿಸಿದರೂ ಅದು ಅನ್ವಯವಾಗಲ್ಲ ಎಂದು ಕೋರ್ಟ್ ಸ್ಪಷ್ಟವಾಗಿ ಹೇಳಿದೆ.ಬಿ.ಕೆ. ಪವಿತ್ರ ವರ್ಸಸ್ ಕರ್ನಾಟಕ ಸರ್ಕಾರದ ಪ್ರಕರಣದಲ್ಲಿ ನ್ಯಾ. ಆದರ್ಶ ಕುಮಾರ್ ಗೋಯಲ್ ಮತ್ತು ನ್ಯಾ.ಉದಯ್ ಲಲಿತ್ ನೇತೃತ್ವದ ದ್ವಿ ಸದಸ್ಯ ಪೀಠ ಈ ಆದೇಶ ನೀಡಿದೆ. ಹೀಗಾಗಿ ವಿಧಾನಸಭೆ ಚುನಾವಣೆಗೂ ಮುನ್ನವೇ ಸುಪ್ರೀಂನ ಆದೇಶ ಜಾರಿ ಮಾಡುವ ಅನಿವಾರ್ಯತೆಗೆ ರಾಜ್ಯ ಸರ್ಕಾರ ಸಿಲುಕಿದ್ದು, ಎಸ್ಸಿ ಎಸ್ಟಿ ನೌಕರರ ಹಿತ ಕಾಪಾಡಲು ತಂದಿದ್ದ ವಿಧೇಯಕಕ್ಕೆ ಹಿನ್ನೆಡೆಯಾದಂತಾಗಿದೆ.
ಕೋರ್ಟ್ ನೀಡಿರುವ ಆದೇಶ ಪಾಲನೆ ಮಾಡಲು ಸಿದಟಛಿತೆ ನಡೆಸುತ್ತಿದ್ದೇವೆ ಎಂದ ಅವರು, ಸಿದ್ಧಪಡಿಸಲಾಗಿರುವ ಇಲಾಖಾವಾರು ಹಿರಿತನ ಸೇರಿದಂತೆ ಕೆಲವು ಇಲಾಖೆಗಳ ಪಟ್ಟಿಯನ್ನು ಕೋರ್ಟ್‌ಗೆ ಸಲ್ಲಿಸಿದರು. ಈ ವಾದ ಆಲಿಸಿದ ಕೋರ್ಟ್,ಮಾ. 15ರೊಳಗೆ ತನ್ನ ಆದೇಶ ಪಾಲಿಸುವಂತೆ ಸೂಚಿಸಿ, ಅಂದೇ ಮತ್ತೆ ವಿಚಾರಣೆ ನಡೆಸುವುದಾಗಿ ತಿಳಿಸಿತು. ಎಸ್‌ಸಿ-ಎಸ್ಟಿ ನೌಕರರಿಗೆ ಹಿಂಬಡ್ತಿ ನೀಡುವುದನ್ನು ತಪ್ಪಿಸುವ ಸಲುವಾಗಿ ತಾನು ಸಿದಟಛಿಪಡಿಸಿರುವ ವಿಧೇಯಕದ ಬಗ್ಗೆಯೂ ರಾಜ್ಯ ಸರ್ಕಾರ ಕೋರ್ಟ್ ಮುಂದೆ ಪ್ರಸ್ತಾಪ ಮಾಡಿತು. ಆದರೆ, ಇದಕ್ಕೆ ಆಕ್ಷೇಪಿಸಿದ ಕೋರ್ಟ್, ಯಾವುದೇ
ಕಾನೂನಿನಿಂದಲೂ ತನ್ನ ಹಿಂದಿನ ಆದೇಶ ಜಾರಿ ತಡೆಯಲು ಸಾಧ್ಯವಿಲ್ಲ. ಜತೆಗೆ ಯಾವುದೇ ಕಾನೂನು ಜಾರಿಗೆ ತಂದರೂ ಈಗಾಗಲೇ ತಾನು ನೀಡಿರುವ ಆದೇಶದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.
Related Articles
Advertisement
ಪ್ರಕರಣದ ಹಿನ್ನೆಲೆ: 1978 ರಲ್ಲಿ ರಾಜ್ಯ ಸರ್ಕಾರ ಎಸ್ಸಿ ಎಸ್ಟಿ ನೌಕರರಿಗೆ ಬಡ್ತಿಯಲ್ಲಿ ಮೀಸಲಾತಿ ನೀಡಲು ತೀರ್ಮಾನಿಸಿ, 2002 ಅದಕ್ಕೆ ವಿಶೇಷ ಕಾಯ್ದೆ ಜಾರಿಗೆ ತಂದು ಎಲ್ಲ ಇಲಾಖೆಗಳಲ್ಲಿಯೂ ಎಸ್ಸಿ ಎಸ್ಟಿ ನೌಕರರಿಗೆ ಸಾಂದರ್ಭಿಕ ಸೇವಾ ಹಿರಿತನದ ಆಧಾರದ ಮೇಲೆ ಬಡ್ತಿ ನೀಡಲು ತೀರ್ಮಾನಿಸಲಾಯಿತು.
ರಾಜ್ಯ ಸರರ್ಕಾರದ ಈ ತೀರ್ಮಾನವನ್ನು ಪ್ರಶ್ನಿಸಿ 2011 ರಲ್ಲಿ ಬಿ.ಕೆ. ಪವಿತ್ರ ಎನ್ನುವವರು ಕೋರ್ಟ್ ಮೆಟ್ಟಿಲೇರಿದ್ದರು. ಆ ಪ್ರಕರಣಕ್ಕೆ ಸಂಬಂಧಿಸಿದಂತೆ 2017 ರ ಫೆಬ್ರವರಿ 9 ರಂದು ಸುಪ್ರೀಂ ಕೋರ್ಟ್ ಆದೇಶ ನೀಡಿ, ರಾಜ್ಯ ಸರ್ಕಾರ ಎಸ್ಸಿ ಎಸ್ಟಿ ನೌಕರರಿಗೆ ನೀಡುತ್ತಿದ್ದ ಸಾಂದರ್ಭಿಕ ಬಡ್ತಿ ಹಿಂಪಡೆದು ಹಿರಿತನದ ಆಧಾರದ ಮೇಲೆ ಬಡ್ತಿ ನೀಡುವಂತೆ ಆದೇಶ ನೀಡಿತ್ತು. ಸುಪ್ರೀಂ ಆದೇಶ ಪಾಲನೆಯಿಂದ ಪಾರಾಗಲು ರಾಜ್ಯ ಸರ್ಕಾರ ಎಸ್ಸಿ ಎಸ್ಟಿ ನೌಕರರಿಗೆ ನೀಡಿರುವ ಬಡ್ತಿಯನ್ನು ಯಥಾ ಸ್ಥಿತಿ ಕಾಯ್ದುಕೊಳ್ಳಲು ವಿಧೇಯಕ ರೂಪಿಸಿದ್ದು, ಎರಡೂ ಸದನಗಳಲ್ಲಿ ಅಂಗೀಕರಿಸಿದೆ.ರಾಜ್ಯ ಸರ್ಕಾರದ ವಿಧೇಯಕ ಅಂಗೀಕರಿಸಲು ರಾಜ್ಯಪಾಲರು ರಾಷ್ಟ್ರಪತಿಗೆ ಕಳುಹಿಸಿಕೊಟ್ಟಿದ್ದು, ಕೇಂದ್ರ ಗೃಹ ಇಲಾಖೆಯಲ್ಲಿ ರಾಜ್ಯ ಸರ್ಕಾರದ ವಿಧೇಯಕ ಉಳಿದುಕೊಂಡಿದೆ. ಸುಪ್ರೀಂ ನೀಡಿರುವ ಆದೇಶದ ವಿರುದ್ಧ ಪುನರ್ ಪರಿಶೀಲನೆ ಅರ್ಜಿ ಸಲ್ಲಿಸಲು ಅವಕಾಶ ಇದೆ. ಇದೇ ರೀತಿಯ ಬಡ್ತಿ ಪ್ರಕರಣಕ್ಕೆ ಸಂಬಂಧಿಸಿದ ಇನ್ನೊಂದು ಪ್ರಕರಣವನ್ನು ಸಂವಿಧಾನ ಪೀಠಕ್ಕೆ ವರ್ಗಾವಣೆ ಮಾಡಲಾಗಿದೆ. ಸಂವಿಧಾನ ಪೀಠ ರಚನೆ ಆದ ನಂತರ ಅಲ್ಲಿಯೂ ರಾಜ್ಯ ಸರ್ಕಾರ ಈ ಆದೇಶವನ್ನು ಪ್ರಶ್ನಿಸಲು ಅವಕಾಶ ಇದೆ.
– ಸಿ.ಎಸ್. ದ್ವಾರಕಾನಾಥ್,
ಹಿರಿಯ ವಕೀಲ