Advertisement

Ban; ಜಿಮ್‌ ಕಾರ್ಬೆಟ್‌ನ ಟೈಗರ್‌ ಸಫಾರಿಗೆ ಸುಪ್ರೀಂ ನಿಷೇಧ

12:40 AM Mar 07, 2024 | Team Udayavani |

ಹೊಸದಿಲ್ಲಿ: ಉತ್ತರಾಖಂಡ ರಾಜ್ಯದ ಜಿಮ್‌ ಕಾರ್ಬೆಟ್‌ ರಾಷ್ಟ್ರೀಯ ಉದ್ಯಾನವನದ ಹೊರ ಅಂಚಿನ ಮತ್ತು ಬಫ‌ರ್‌ ಝೋನ್‌ನಲ್ಲಿ ಮಾತ್ರವೇ ಟೈಗರ್‌ ಸಫಾರಿಗೆ ಅವಕಾಶ ನೀಡ ಬೇಕೆಂದು ಸುಪ್ರೀಂ ಕೋರ್ಟ್‌ ಬುಧವಾರ ಆದೇಶಿಸಿದೆ.

Advertisement

ಇದೇ ವೇಳೆ ಕೋರ್ಟ್‌, ಉತ್ತಾರಖಂಡದ ಮಾಜಿ ಅರಣ್ಯ ಸಚಿವ ಹರಕ್‌ ಸಿಂಗ್‌ ರಾವತ್‌, ಅಂದಿನ ವಿಭಾಗೀಯ ಅರಣ್ಯಾಧಿಕಾರಿ ಚಾಂದ್‌ ಅವರು ಹುಲಿ ಮೀಸಲು ಅರಣ್ಯದಲ್ಲಿ ಅಕ್ರಮ ಕಟ್ಟಡ ನಿರ್ಮಾಣ ಮತ್ತು ಮರಗಳನ್ನು ಕಡಿದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದೆ. ಇಂಥ ಕೃತ್ಯಗಳಿಂದ ಪರಿಸರಕ್ಕೆ ಹಾನಿಯಾಗುತ್ತದೆ. ರಕ್ಷಿತ ಅರಣ್ಯ­ಗಳ ಉಳಿವಿಗೆ ಉತ್ತರದಾಯಿತ್ವವನ್ನು ಪ್ರದರ್ಶಿ­ಸುವುದ ಅಗತ್ಯವಿದೆ ಎಂದು ಕೋರ್ಟ್‌ ಹೇಳಿದೆ. ಮುಂದಿನ 3 ತಿಂಗಳೊಳಗೇ ಆ ಅಕ್ರಮದ ಕುರಿತು ಸಮಗ್ರ ವರದಿ ನೀಡುವಂತೆಯೂ ಕೋರ್ಟ್‌ ಸರಕಾರಕ್ಕೆ ಸೂಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next