Advertisement
ನಡೆದಿದ್ದೇನು?ಅಂಬೇಡ್ಕರ್ ಅವರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವಮಾನ ಮಾಡಿದ್ದಾರೆ ಎಂದು ಪರಿಷತ್ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯರು ಪ್ರತಿಭಟನೆಗಿಳಿದಿದ್ದರು. ಈ ವೇಳೆ ತೀವ್ರ ವಾಗ್ವಾದ ನಡೆಯುತ್ತಿತ್ತು. ”ಸಿ.ಟಿ ರವಿ ಅವರು ರಾಹುಲ್ ಗಾಂಧಿ ಡ್ರಗ್ ಅಡಿಕ್ಟ್ ಎಂದಿದ್ದು, ಪ್ರತಿಯಾಗಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಅಮಿತ್ ಶಾ ಕೊಲೆಗಡುಕ ಎನ್ನಬಹುದೇ ಎಂದಿದ್ದಾರೆ. ಕೆರಳಿದ ಸಿ.ಟಿ. ರವಿ ಅವರು Pros**itute ಎಂಬ ಪದ ಬಳಕೆ ಮಾಡಿದ್ದಾರೆ” ಎಂದು ಆರೋಪಿಸಲಾಗಿದೆ.
ಪರಿಷತ್ತಿನಲ್ಲಿ ಭಾರೀ ಗದ್ದಲದ ನಂತರ ಸಭಾಪತಿ ಬಸವರಾಜ್ ಹೊರಟ್ಟಿ ಕಲಾಪ ಮುಂದೂಡಿದ್ದಾರೆ. ಈ ವೇಳೆ ಸಿ.ಟಿ.ರವಿ ಅವರು ನನ್ನ ವಿರುದ್ದ ಅಶ್ಲೀಲ ಪದವನ್ನು ಬಳಸಿದ್ದಾರೆಂದು ಸಚಿವೆ ಹೆಬ್ಬಾಳ್ಕರ್ ಆರೋಪಿಸಿದ್ದಾರೆ. ಸ್ಪಷ್ಟನೆ ನೀಡಿದ ಮಾಜಿ ಸಚಿವ ಸಿ.ಟಿ ರವಿ, ‘ಯಾರು ಏನು ಹೇಳಿದ್ದಾರೆ ಎನ್ನುವುದು ಆನ್ ರೆಕಾರ್ಡ್ ಆಡಿಯೋ ಮತ್ತು ವಿಡಿಯೋದಲ್ಲಿ ಇದೆ. ಯಾರು ಏನೇನು ಮಾತನಾಡಿದರು ಎನ್ನುವುದು ಗೊತ್ತಾಗುತ್ತದೆ. ನಾನು ಕಾಂಗ್ರೆಸ್, ಡಾ.ಅಂಬೇಡ್ಕರ್ ಅವರಿಗೆ ಏನೇನು ಅವಮಾನವನ್ನು ಮಾಡಿದೆ ಎನ್ನುವುದರ ಬಗ್ಗೆ ಮಾತ್ರ ಮಾತನಾಡಿದ್ದೇನೆ” ಎಂದು ಪ್ರತಿಕ್ರಿಯಿಸಿದ್ದಾರೆ.
Related Articles
ಸಚಿವೆ ಹೆಬ್ಬಾಳ್ಕರ್ ಅವರ ಆಕ್ರೋಶಿತ ಬೆಂಬಲಿಗರು, ಕಾಂಗ್ರೆಸ್ ಕಾರ್ಯಕರ್ತರು ಸಿ.ಟಿ ರವಿ ಅವರ ಮುತ್ತಿಗೆಗೆ ಯತ್ನ ಮಾಡಿದರು. ಸ್ಥಳದಲ್ಲಿದ್ದ ಪೊಲೀಸರು ಸಿ.ಟಿ ರವಿ ಅವರನ್ನು ಕರೆದೊಯ್ದು ಪರಿಸ್ಥಿತಿ ನಿಯಂತ್ರಿಸಿದರು. ಕೆಲವರು ಹಲ್ಲೆಗೂ ಮುಂದಾಗಿದ್ದು ಪೊಲೀಸರು ಹಲವರನ್ನು ವಶಕ್ಕೆ ಪಡೆದಿದ್ದಾರೆ.
Advertisement
ನಾನು ಆ ರೀತಿ ಮಾತನಾಡಿಲ್ಲ. ವಿಷಯಾಂತರ ಮಾಡಲು ಈ ರೀತಿ ಹೇಳುತ್ತಿದ್ದಾರೆ. ಹೆಣ್ಣು ಮಕ್ಕಳ ಮೇಲೆ ನನಗೆ ಗೌರವವಿದ್ದು, ನಾನು ನಿನ್ನೆ ಮೊನ್ನೆ ರಾಜಕೀಯಕ್ಕೆ ಬಂದವನಲ್ಲ.ಇದಕ್ಕೆಲ್ಲಾ ನಾನು ಹೆದರುವವನಲ್ಲ” ಎಂದು ಸಿ.ಟಿ.ರವಿ ಪ್ರತಿಕ್ರಿಯೆ ನೀಡಿದ್ದಾರೆ.
ಏಯ್ ನಿನಗೆ ತಾಯಿ , ಹೆಂಡತಿ.. ಮಗಳಿಲ್ವೇನೋ.. ಕೆರಳಿದ ಸಚಿವೆಸಂಜೆ ಪರಿಷತ್ ಕಲಾಪದಲ್ಲಿ ಸಿಟಿ.ರವಿ ವಿರುದ್ಧ ಕೆರಳಿ ಕೆಂಡಾಮಂಡಲವಾದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಏಯ್ ನಿನಗೆ ತಾಯಿ , ಹೆಂಡತಿ.. ಮಗಳಿಲ್ವೇನೋ.. ಎಂದು ಏಕವಚದಲ್ಲೇ ಪ್ರಶ್ನಿಸಿದ್ದಾರೆ. ಭಾರೀ ಗದ್ದಲದ ನಡುವೆ ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿಕೆ ಮಾಡಲಾಯಿತು. ಚಿಕ್ಕಮಗಳೂರಿನಲ್ಲೂ ಪ್ರತಿಭಟನೆ
ಸಿ.ಟಿ.ರವಿ ಅವರ ಚಿಕ್ಕಮಗಳೂರಿನ ನಿವಾಸದ ಎದುರೂ ಕಾಂಗ್ರೆಸ್ ಕಾರ್ಯಕರತರು ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದ್ದಾರೆ. ಬಿಗಿ ಭದ್ರತೆ
ಬೆಳಗಾವಿಯಲ್ಲಿ ಸುವರ್ಣ ಸೌಧದ ಸುತ್ತಮುತ್ತ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ಅವರು ಬೆಳಗಾವಿಯ ಶಾಸಕಿಯಾಗಿದ್ದು ಕಟ್ಟೆಚ್ಚರ ವಹಿಸಲಾಗಿದೆ. ಕಾಂಗ್ರೆಸ್ ನಿಂದ ಆಕ್ರೋಶ
ಕಾಂಗ್ರೆಸ್ ನಾಯಕರು, ಮಾಜಿ ಸಚಿವರು, ಶಾಸಕರು ಸಿ.ಟಿ. ರವಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.