Advertisement

ಬಿಜೆಪಿ; ವಿಜೇಂದ್ರ ಅವರದ್ದು ಕಾಂಗ್ರೆಸ್ ಪಕ್ಷದ ಛಾಯಾಚಿತ್ರ: ಮಹೇಶ್ ಮೇಲಿನಕೊಪ್ಪ

08:20 PM Apr 08, 2024 | Team Udayavani |

ತೀರ್ಥಹಳ್ಳಿ : ನಾವು ಮಾಡುತ್ತಿರುವುದು ಪಕ್ಷತರ ಅಲ್ಲ. ನಾವೇನು ಈಗ ಕುಳಿತಿದ್ದೇವೆ ಅದುವೇ ನಿಜವಾದ ಬಿಜೆಪಿ. ನಿಷ್ಠಾವಂತ ಕಾರ್ಯಕರ್ತರು, ಬಿಜೆಪಿ ಹಾಗೂ ಹಿಂದುತ್ವಕ್ಕೆ ಬದುಕು ನೀಡಿದವರಿಗೆ ಅಸಮಾಧಾನ ಇದೆ. ಅವರೆಲ್ಲರಿಗೂ ನ್ಯಾಯ ದೊರಕಿಸಬೇಕು ಎಂಬ ಕಾರಣಕ್ಕೆ ಈ ನಿರ್ಧಾರ ಮಾಡಿದ್ದೇವೆ ಎಂದು ಬಿಜೆಪಿ ಜಿಲ್ಲಾ ಒಬಿಸಿ ಅಧ್ಯಕ್ಷರಾಗಿದ್ದ ಮಹೇಶ್ ಮೇಲಿನಕೊಪ್ಪ ತಿಳಿಸಿದರು.

Advertisement

ಸೋಮವಾರ ಅನ್ನಪೂರ್ಣ ಗ್ರಾಂಡ್ ಸಭಾಂಗಣದಲ್ಲಿ ರಾಷ್ಟ್ರಭಕ್ತರ ಬಳಗ ಎಂಬ ಹೆಸರಿನಲ್ಲಿ ಕೆ.ಎಸ್ ಈಶ್ವರಪ್ಪನವರಿಗೆ ಬೆಂಬಲ ಸೂಚಿಸಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಈಶ್ವರಪ್ಪನವರಿಗೆ ಆಗಿರುವ ಅನ್ಯಾಯದ ವಿರುದ್ಧವಾಗಿ ಈ ತೀರ್ಮಾನ ತೆಗೆದುಕೊಂಡಿದ್ದೇವೆ. ಮೋದಿ ಹಾಗೂ ಅಮಿತ್ ಶಾ ಕೂಡ ಕುಟುಂಬ ರಾಜಕಾರಣವನ್ನು ವಿರೋಧ ಮಾಡುತ್ತ ಬರುತ್ತಿದ್ದಾರೆ. ಯಡಿಯೂರಪ್ಪ ಮತ್ತು ಕುಟುಂಬ ರಾಜ್ಯದಲ್ಲಿ ಎಲ್ಲವನ್ನು ಹಿಡಿತ ಸಾಧಿಸುತ್ತ ಬಂದಿದೆ. ಬೇರೆ ಪಕ್ಷದವರಿಗೆ ಕುಟುಂಬ ರಾಜಕಾರಣ ಮಾಡುತ್ತಾರೆ ಎಂದು ಹೇಳಿದ್ದೇವೆ ಆದರೆ ಇವರು ಮಾಡುತ್ತಿರುವುದು ಸರಿಯಲ್ಲ ಎಂದರು.

ಈಶ್ವರಪ್ಪನವರು ಮಗನಿಗೆ ಟಿಕೆಟ್ ಕೇಳಿದ್ದು ಕುಟುಂಬ ರಾಜಕಾರಣ ಅಲ್ಲ. ಅವರು ಶಿವಮೊಗ್ಗದಲ್ಲಿ ತಮ್ಮ ಮಗನಿಗೆ ತೊಂದರೆ ಆಗಬಾರದು ಎಂದು ಬಿ.ಎಸ್ ಯಡಿಯೂರಪ್ಪ ನವರು ಹಾವೇರಿಯಲ್ಲಿ ಟಿಕೆಟ್ ಕೊಡುವುದಾಗಿ ನಂಬಿಸಿ ಕುತ್ತಿಗೆ ಕುಯ್ಯುವ ಕೆಲಸ ಮಾಡಿದ್ದಾರೆ.
ಹಿಂದುತ್ವದ ನಾಯಕರಾಗಿದ್ದ ಸಿ.ಟಿ ರವಿ, ಪ್ರತಾಪ್ ಸಿಂಹ, ಅನಂತಕುಮಾರ್ ಹೆಗಡೆ ಸೇರಿ ಹಲವರಿಗೆ ಟಿಕೆಟ್ ನೀಡದೆ ಇರುವುದು ಹಾಗೆ ಶೋಭಾ ಕರಂದ್ಲಾಜೆ ಅವರನ್ನು ಗೋ ಬ್ಯಾಕ್ ಎಂದರು ಬೆಂಗಳೂರು ಉತ್ತರಕ್ಕೆ ಟಿಕೆಟ್ ನೀಡಿದ್ದು, ಈ ಎಲ್ಲವನ್ನು ವಿರೋಧಿಸಿ ಶಿವಮೊಗ್ಗದಲ್ಲಿ ಈಶ್ವರಪ್ಪನವರು ಸ್ಪರ್ಧೆ ಮಾಡುತ್ತಿದ್ದಾರೆ. ಈಶ್ವರಪ್ಪನವರ ರಾಷ್ಟ್ರ ಭಕ್ತ ನಿಜವಾದ ಬಿಜೆಪಿ, ವಿಜಯೇಂದ್ರ ಅವರದ್ದು ಕಾಂಗ್ರೆಸ್ ಪಕ್ಷದ ಛಾಯಾಚಿತ್ರ ಹಾಗಾಗಿ ಈಶ್ವರಪ್ಪನವರ ಕೈ ಬಲಪಡಿಸಬೇಕು ಎಂದು ತೀರ್ಮಾನಿಸುತ್ತಿದ್ದೇವೆ ಎಂದರು.

ವಿಧಾನಸಭೆ ಚುನಾವಣೆ ವೇಳೆ ಹಿಂದುತ್ವ ಸರಿಯಾಗಿತ್ತಾ? ಎಂಬ ಪತ್ರಕರ್ತರ ಪ್ರೆಶ್ನೆಗೆ ತೀರ್ಥಹಳ್ಳಿ ತಾಲೂಕಿಗೆ ಗೋಶಾಲೆ ಬೇಕು ಎಂದು ಪ್ರತಿ ಬಾರಿ ಕೂಡ ಕೇಳುತ್ತಿದ್ದೇವೆ. ಆದರೆ ನಾವು ಮಾಡುತ್ತೇವೆ, ನೋಡುತ್ತೇವೆ ಎಂದು ಆಶ್ವಾಸನೆ ನೀಡುವುದು ಮಾತ್ರ ಆಗಿದೆ. ಆರಗ ಜ್ಞಾನೇಂದ್ರ ಅವರನ್ನು ಕೂಡ ನಿಜವಾದ ಬಿಜೆಪಿ ಎಂದು ಗೆಲ್ಲಿಸಿದ್ದೇವೆ ಅದರೆ ಈಗ ಅವರದು ನಿಜವಾದ ಬಿಜೆಪಿ ಅಲ್ಲ,ಈ ಚುವಣೆಯಲ್ಲಿ ನಿಜವಾದ ಬಿಜೆಪಿಗೆ ಸಪೋರ್ಟ್ ಮಾಡಲು ಕೇಳುತ್ತಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಕವಲೇದುರ್ಗ ಗ್ರಾಮಪಂಚಾಯಿತಿ ಸದಸ್ಯ ರಾಘವೇಂದ್ರ, ಗರ್ತಿಕೆರೆ ಗ್ರಾಮಪಂಚಾಯತ್ ಸದಸ್ಯ ಸಚಿನ್ ಗೌಡ, ಮದನ್ ಗೋರ್ಕೋಡು, ಅವಿನಾಶ್, ಶಶಿ ಕುಂದರ್, ಪ್ರದೀಪ್ ಸೇರಿ ಹಲವರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next