Advertisement

ತಿಂಗಳಾದರೂ ಆರಂಭವಾಗದ ಖರೀದಿ ಕೇಂದ್ರ

03:47 PM Jan 18, 2023 | Team Udayavani |

ಮೈಸೂರು: ಜಿಲ್ಲೆಯಲ್ಲಿ ಬೆಂಬಲ ಬೆಲೆ ಯೋಜನೆಯಡಿ ಭತ್ತ ಮತ್ತು ರಾಗಿ ಖರೀದಿಗೆ ನೋಂದಣಿ ಆರಂಭವಾಗಿತಿಂಗಳಾದರೂ ಇನ್ನೂ ಖರೀದಿ ಕೇಂದ್ರ ಆರಂಭವಾಗದೇಇರುವುದು ರೈತರನ್ನು ಅತಂತ್ರ ಸ್ಥಿತಿಗೆ ನೂಕಿದೆ.

Advertisement

ಕೇಂದ್ರ ಸರ್ಕಾರದಿಂದ 2022-23ನೇ ಸಾಲಿಗೆ ರೈತರಿಂದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ ಮತ್ತು ರಾಗಿ ಖರೀದಿ ಮಾಡುವ ಸಲುವಾಗಿ ಡಿ.15ರಿಂದ ನೋಂದಣಿ ಪ್ರಕ್ರಿಯೆ ಆರಂಭಿಸಿ, ಮುಕ್ತಾಯವೂ ಆಗಿದೆ. ಜತೆಗೆ ಜ.1ರಿಂದ ಖರೀದಿ ಕೇಂದ್ರ ಆರಂಭಿಸಲಾಗುವುದು ಎಂದು ಜಿಲ್ಲಾಡಳಿತ ಹೇಳಿದ್ದರೂ ಈವರೆಗೆ ಖರೀದಿ ಕೇಂದ್ರಗಳು ಆರಂಭವಾಗಿಲ್ಲ. ಪರಿಣಾಮ ತಾವು ಬೆಳೆದ ಫ‌ಸಲನ್ನು ಸಂಗ್ರಹ ಮಾಡಿಕೊಳ್ಳಲು ಸ್ಥಳಾವಕಾಶದ ಕೊರತೆಯಿಂದ ಹಾಗೂ ಸಾಲಗಾರರ ಹಾವಳಿಯಿಂದ ದಲ್ಲಾಳಿಗಳಿಗೆ ಕಡಿಮೆ ಬೆಲೆಗೆ ಮಾರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಪ್ರಸಕ್ತ ಸಾಲಿನಲ್ಲಿ ಮೈಸೂರು ಜಿಲ್ಲೆಯಲ್ಲಿ 43,55,040 ಕ್ವಿಂಟಲ್‌ ಭತ್ತ ಉತ್ಪಾದನೆಯಾಗಿದ್ದರೆ, 9,58,400ಕ್ವಿಂಟಲ್‌ ರಾಗಿಯನ್ನು ಬೆಳೆಯಲಾಗಿದೆ. ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ ಮತ್ತು ರಾಗಿ ಖರೀದಿಗಾಗಿ ಭತ್ತ ಪ್ರತಿ ಕ್ವಿಂಟಲ್‌ಗೆ 2040 ರೂ. ಹಾಗೂ ರಾಗಿಗೆ 3578 ರೂ ನಿಗದಿಪಡಿಸಲಾಗಿದೆ. ಜಿಲ್ಲೆಯ 14 ಕಡೆಯಲ್ಲಿ ಖರೀದಿ ಕೇಂದ್ರ ತೆರೆಯಲು ಉದ್ದೇಶಿಸಲಾಗಿದೆ. ಹೀಗಿದ್ದರೂ ಖರೀದಿ ಕೇಂದ್ರ ತೆರೆಯುವಲ್ಲಿ ವಿಳಂಬವಾಗಿರುವುದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಮಸ್ಯೆಯಲ್ಲಿ ರೈತರು: ಬಡ್ಡಿ ಸಾಲ ಮಾಡಿ ಹತ್ತಾರು ಎಕರೆಯಲ್ಲಿ ಭತ್ತ, ರಾಗಿ ಬೆಳೆದ ರೈತರು ಈಗಾಗಲೇ ಕಟಾವು ಮಾಡಿ ತಿಂಗಳಾಗಿದೆ. ನೂರಾರು ಕ್ವಿಂಟಲ್‌ಗಟ್ಟಲೆ ಬೆಳೆದ ರೈತರು ಫ‌ಸಲನ್ನು ಸಂಗ್ರಹಿಸಿಟ್ಟಿಕೊಳ್ಳಲು ಗೋಡೌನ್‌ ಸೌಲಭ್ಯ ಇಲ್ಲದೇ ಇರುವುದು ಹಾಗೂ ಸಾಲಗಾರರ ಬಾಧೆಯಿಂದ ಕಡಿಮೆ ಬೆಲೆಗೆ ದಲ್ಲಾಳಿಗಳಿಗೆ ಮಾರಾಟ ಮಾಡುತ್ತಿರುವುದು ಹೆಚ್ಚಾಗಿದೆ. ಪರಿಣಾಮ ಜಿಲ್ಲೆಯಲ್ಲಿ ಶೇ.50ರಷ್ಟು ರೈತರು ಭತ್ತವನ್ನು ಈಗಾಗಲೇ ದಲ್ಲಾಳಿಗಳಿಗೆ ಮಾರಾಟ ಮಾಡಿರುವುದು ಕಂಡುಬಂದಿದೆ.

ದಲ್ಲಾಳಿಗಳಿಗೆ ವರದಾನ: ಸರ್ಕಾರ ಇನ್ನೂ ಖರೀದಿ ಕೇಂದ್ರ ಆರಂಭಿಸದೇ ಇರುವುದರು ದಲ್ಲಾಳಿಗಳಿಗೆ ವರದಾನವಾಗಿದೆ. ಭತ್ತ ಮತ್ತು ರಾಗಿ ಖರೀದಿ ಕೇಂದ್ರ ತೆರೆಯದೇ ಇರುವುದರಿಂದ ರೈತರು ದಲ್ಲಾಳಿಗಳತ್ತ ಮುಖ ಮಾಡುತ್ತಿದ್ದಾರೆ. ಇದನ್ನೇ ಬಂಡವಳಾ ಮಾಡಿಕೊಂಡಿರುವ ದಲ್ಲಾಳಿಗಳುಸಾವಿರಾರು ಕ್ವಿಂಟಲ್‌ ಭತ್ತ ಮತ್ತು ರಾಗಿಯನ್ನು ಕಡಿಮೆಬೆಲೆಗೆ ಖರೀದಿಸಿ ಸಂಗ್ರಹಿಸಿಟ್ಟುಕೊಂಡಿದ್ದಾರೆ. ಜತೆಗೆರೈತರ ಪಾಣಿ ಪಡೆದು ಅವರ ಹೆಸರಿನಲ್ಲಿ ಕನಿಷ್ಠ ಬೆಂಬಲಬೆಲೆ ಯೋಜನೆಯಡಿ ಭತ್ತ ಮತ್ತು ರಾಗಿಯನ್ನುಮಾರಾಟ ಮಾಡಿ ಹೆಚ್ಚು ಹಣ ಪಡೆದುಕೊಳ್ಳುತ್ತಿದ್ದಾರೆ ಎಂದು ರೈತ ಮುಖಂಡರು ಆರೋಪಿಸಿದ್ದಾರೆ.

Advertisement

ಬೆಂಬಲ ಬೆಲೆ ಯೋಜನೆಯಡಿ ಪ್ರತಿ ಕ್ವಿಂಟಲ್‌ ಭತ್ತಕ್ಕೆ 2040ರಿಂದ 2060 ರೂ. ಇದ್ದರೆ ದಲ್ಲಾಳಿಗಳು ರೈತರಿಂದ ಕೇವಲ 1600ರಿಂದ 1700 ರೂ.ಗೆ ಖರೀದಿಸುತ್ತಿದ್ದಾರೆ.ಹಾಗೆಯೇ ರಾಗಿಗೆ 3578 ರೂ. ನಿಗದಿ ಮಾಡಿದ್ದರೆ, ದಲ್ಲಾಳಿಗಳು 2100ರಿಂದ 2300 ರೂ. ಖರೀದಿಸುತ್ತಿದ್ದಾರೆ.ಬಳಿಕ ತಮಗೆ ಪರಿಚಯಸ್ಥ ರೈತರ ಪಾಣಿ ಪಡೆದು ಅವರಹೆಸರಿನಲ್ಲಿ ರಾಗಿ ಮತ್ತು ಭತ್ತವನ್ನು ಮಾರಾಟ ಮಾಡಿಹೆಚ್ಚು ಹಣ ಪಡೆದುಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಎಲ್ಲಡೆ ರಾಗಿ ಮತ್ತು ಭತ್ತ ಕಟಾವು ಕಾರ್ಯ ಪೂರ್ಣಗೊಂಡಿರುವುದಲ್ಲದೇ ಒಕ್ಕಣೆ ಕೆಸವೂ ಮುಗಿದಿದೆ. ಹೊಲ, ಗದ್ದೆಗಳಿಂದ ಫ‌ಸಲನ್ನು ಮನೆಗೆ ಕೊಂಡೊಯ್ದು ತಿಂಗಳಾದರೂ ಸರ್ಕಾರದಿಂದ ಖರೀದಿ ಕೇಂದ್ರ ಮಾತ್ರ ಆರಂಭವಾಗಿಲ್ಲ. ಪರಿಣಾಮ ಫ‌ಸಲನ್ನು ಸಂಗ್ರಹಿಸಿಡಲು ಜಾಗದ ಕೊರತೆ, ಸಾಲಗಾರರ ಹಾವಳಿಯಿಂದ ರೈತರು ಕಡಿಮೆ ಬೆಲೆಗೆ ಮಾರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಿದ್ದರೂ ಅಧಿಕಾರಿಗಳು ಮಾತ್ರ ಕಂಡು ಕಾಣಿಸದಂತೆ ವರ್ತಿಸುತ್ತಿದ್ದಾರೆ. ಅತ್ತಹಳ್ಳಿ ದೇವರಾಜ, ರೈತ ಮುಖಂಡ

ಸತೀಶ್‌ ದೇಪುರ

Advertisement

Udayavani is now on Telegram. Click here to join our channel and stay updated with the latest news.

Next