Advertisement

ಕಬ್ಬು ಬೆಂಬಲ ಬೆಲೆ 15 ರೂ. ಏರಿಕೆಗೆ ಕೇಂದ್ರ ಸರ್ಕಾರ ನಿರ್ಧಾರ

08:05 PM Aug 03, 2022 | Team Udayavani |

ನವದೆಹಲಿ: ಪ್ರತಿ ಕ್ವಿಂಟಲ್‌ ಕಬ್ಬಿಗೆ 15 ರೂ. ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸುವ ಬಗ್ಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

Advertisement

ಇದರಿಂದಾಗಿ ಅಕ್ಟೋಬರ್‌ನಿಂದ ಶುರುವಾಗುವ 2022-23ನೇ ಸಾಲಿಗಾಗಿ ಬೆಂಬಲ ಬೆಲೆ ಹಾಲಿ 305 ರೂ.ಗಳಿಂದ 315 ರೂ.ಗಳಿಗೆ ಏರಿಕೆಯಾದಂತಾಗಿದೆ.

ಶೇ.10.25ರ ದರದಲ್ಲಿ ಅದನ್ನು ನೀಡಲಾಗುತ್ತದೆ. ಇದಲ್ಲದೆ ಶೇ.0.1 ದರದಲ್ಲಿ ಪ್ರತಿ ಕ್ವಿಂಟಲ್‌ಗೆ 3.05 ರೂ. ಪ್ರೀಮಿಯಂ ಅನ್ನೂ ನೀಡಲಾಗುತ್ತದೆ.

ಆರ್ಥಿಕ ವ್ಯವಹಾರಗಳಿಗಾಗಿನ ಕೇಂದ್ರ ಸಂಪುಟ ಸಮಿತಿ ಸಭೆಯಲ್ಲಿ ದರ ಪರಿಷ್ಕರಣೆ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ನಿರ್ಧಾರದಿಂದಾಗಿ ಕರ್ನಾಟಕ ಸೇರಿದಂತೆ ದೇಶದಲ್ಲಿರುವ 5 ಕೋಟಿ ಕಬ್ಬು ಬೆಳೆಗಾರರಿಗೆ ಅನುಕೂಲವಾಗಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next