Advertisement

ನಮ್ಮ ‘ಐಮೆಕ್‌’ ಪ್ರಾಜೆಕ್ಟ್ ಗೆ ಜಿ7 ನಾಯಕರ ಬೆಂಬಲ!

01:03 AM Jun 17, 2024 | Team Udayavani |

ಬರಿ(ಇಟಲಿ): ಚೀನ ಸರಕಾರ ಕೈಗೊಂಡಿರುವ ಬೆಲ್ಟ್ ಆ್ಯಂಡ್‌ ರೋಡ್‌ ಇನಿಶಿಯೇಟಿವ್‌(ಬಿಆರ್‌ಐ)ಗೆ ಪ್ರತಿ ಯಾಗಿ ಭಾರತ-ಮಧ್ಯಪ್ರಾಚ್ಯ-ಯೂರೋಪ್‌ ಆರ್ಥಿಕ ಕಾರಿಡಾರ್‌(ಐಮೆಕ್‌) ಯೋಜನೆಗೆ ಜಿ-7 ಶೃಂಗದಲ್ಲಿ ಬೆಂಬಲ ವ್ಯಕ್ತವಾಗಿದೆ.

Advertisement

ಟಲಿಯ ಬರಿಯಲ್ಲಿ ಶುಕ್ರವಾರ ಮುಕ್ತಾಯವಾದ ಜಿ7 ರಾಷ್ಟ್ರಗಳ ಸಮ್ಮೇಳನದಲ್ಲಿ ಈ ಐಮೆಕ್‌ ಯೋಜನೆ ಬಗ್ಗೆ ಸಮ್ಮತಿ ಸೂಚಿಸಲಾಗಿದೆ.ಯೋಜನೆ ಯಿಂದ ಭಾರತ, ಸೌದಿ ಅರೇಬಿಯಾ, ಅಮೆರಿಕ ಹಾಗೂ ಯುರೋಪ್‌ ನಡುವೆ ಬೃಹತ್‌ ರಸ್ತೆ, ರೈಲು ಹಾಗೂ ಜಲಮಾರ್ಗಗಳ ಮೂಲಕ ಏಷ್ಯಾ, ಮಧ್ಯಪ್ರಾಚ್ಯ ಹಾಗೂ ಪಶ್ಚಿಮ ರಾಷ್ಟ್ರಗಳನ್ನು ಸಂಪರ್ಕ ಕಲ್ಪಿಸಲಾಗುತ್ತದೆ. ವಿಶೇಷವಾಗಿ ಸರಕು ಸಾಗಣೆಗೆ ಅದನ್ನು ವಿಶೇಷವಾಗಿ ಬಳಕೆ ಮಾಡುವ ಇರಾದೆಯನ್ನು ಜಿ7 ರಾಷ್ಟ್ರಗಳು ಹೊಂದಿವೆ. ಕಳೆದ ವರ್ಷ ಹೊಸದಿಲ್ಲಿಯಲ್ಲಿ ನಡೆದಿದ್ದ ಜಿ20 ರಾಷ್ಟ್ರಗಳ ಸಮ್ಮೇಳನದಲ್ಲಿಯೂ ಇದೇ ಸಂಪರ್ಕ ವ್ಯವಸ್ಥೆಯ ಬಗ್ಗೆಯೂ ಘೋಷಣೆ ಮಾಡಲಾಗಿತ್ತು. ಜತೆಗೆ ಆ ಬಗ್ಗೆ ಸಹಮತವನ್ನೂ ಹೊಂದÇಾಗಿತ್ತು. ಇಂಡೋ-ಪೆಸಿಫಿಕ್‌ ಪ್ರದೇಶದಲ್ಲಿ ಮುಕ್ತ ಹಾಗೂ ನ್ಯಾಯ ಸಮ್ಮತ ವಾತಾವರಣ ಕಲ್ಪಿಸಲೂ ಸಮ್ಮೇಳನದಲ್ಲಿ ತೀರ್ಮಾನಿಸ ಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next