Advertisement

ಸಮಗ್ರ ನೀರಾವರಿ ಸೌಲಭ್ಯಕ್ಕೆ ಜೆಡಿಎಸ್‌ ಬೆಂಬಲಿಸಿ

03:02 PM Apr 24, 2022 | Team Udayavani |

ಮಾನ್ವಿ: ಮಾಜಿ ಮುಖ್ಯಮಂತ್ರಿ ಎಚ್‌ .ಡಿ. ಕುಮಾರಸ್ವಾಮಿ ರೈತರಿಗಾಗಿ ಅನೇಕ ಕಾರ್ಯಕ್ರಮ ಹಾಕಿಕೊಳ್ಳುವ ಮೂಲಕ ರಾಜ್ಯದಲ್ಲಿ ರೈತರ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಸಮಗ್ರ ನೀರಾವರಿ ಸೌಲಭ್ಯಕ್ಕಾಗಿ ಮತ್ತು ರೈತರ ಏಳ್ಗೆಗಾಗಿ ರಾಜ್ಯದಲ್ಲಿ ಜೆಡಿಎಸ್‌ ಪಕ್ಷವನ್ನು ಸಂಪೂರ್ಣ ಬಹುಮತದಿಂದ ಅಧಿಕಾರಕ್ಕೆ ತರಬೇಕು ಎಂದು ಶಾಸಕ ರಾಜಾ ವೆಂಕಟಪ್ಪನಾಯಕ ತಿಳಿಸಿದರು.

Advertisement

ತಾಲೂಕಿನ ಹಿರೇಕೊಟೆ°ಕಲ್‌ ಗ್ರಾಮದಲ್ಲಿ ನಡೆದ ಜನತಾ ಜಲಧಾರೆ ಎರಡನೇ ದಿನದ ರಥಯಾತ್ರೆಯಲ್ಲಿ ಮಾತನಾಡಿದ ಅವರು, ಈ ಭಾಗದ ಯಡಿವಾಳ ಏತ ನೀರಾವರಿ ಯೋಜನೆ ಜಾರಿಗೆ ತರುವ ಮೂಲಕ ಈ ಭಾಗದ 10 ಸಾವಿರ ಎಕರೆ ಕೃಷಿ ಭೂಮಿಗೆ ನೀರಾವರಿ ಕಲ್ಪಿಸಲಾಗುವುದು, 76 ಮೈಲ ಕಾಲುವೆ ಮುಖಾಂತರ ಕೃಷಿ ಜಮೀನುಗಳಿಗೆ ನೀರು ಒದಗಿಸುವುದು ನನ್ನ ಜವಾಬ್ದಾರಿ ಆಗಿದೆ ಎಂದು ತಿಳಿಸಿದರು.

ಜಿಪಂ ಮಾಜಿ ಸದಸ್ಯರಾದ ಮಹಾಂತೇಶ ಪಾಟೀಲ್‌ ಅತ್ತನೂರು, ರಾಜ್ಯ ಜೆಡಿಎಸ್‌ ಯುವ ಘಟಕದ ಉಪಾಧ್ಯಕ್ಷರಾದ ರಾಜಾ ರಾಮಚಂದ್ರ ನಾಯಕ, ಜಿಲ್ಲಾ ಹಿಂದುಳಿದ ಜೆಡಿಎಸ್‌ ಪಕ್ಷದ ಅಧ್ಯಕ್ಷರಾದ ಜಂಬುನಾಥ ಯಾದವ, ನಾಗರಾಜ ಭೋಗವತಿ, ಪಿ.ರವಿಕುಮಾರ್‌, ಶರಣಪ್ಪ ಗೌಡ ಮದ್ಲಾಪೂರ, ರಾಮನಗೌಡ ಭೋಗವತಿ, ಬಸನಗೌಡ, ಪಂಪನಗೌಡ, ಪಂಪಣ್ಣ ದೊರೆ, ಪ್ರಭು ಸ್ವಾಮಿ, ವಿಜಯ ನಾಯಕ, ಬಜ್ಜಯ್ಯ ನಾಯಕ, ಗುರುರಾಜ ಕುಲಕರ್ಣಿ, ಲಕ್ಷ್ಮಣ ಯಾದವ, ಅಮರೇಶ ನಾಯಕ ಬ್ಯಾಗವಾಟ, ಗೋಪಾಲ ನಾಯಕ ಹರವಿ,ಯಲಪ್ಪ ನಾಯಕ, ಸಂತೋಷ ಹೂಗಾರ, ತಾಲೂಕು ಮಹಿಳಾ ಘಟಕದ ಅಧ್ಯಕ್ಷರಾದ ವಿಜಯಲಕ್ಷ್ಮೀ, ಮಹಿಳಾ ಘಟಕದ ಉಪಾಧ್ಯಕ್ಷರಾದ ನೀಲಮ್ಮ, ಸೇರಿದಂತೆ ನೂರಾರು ಪಕ್ಷದ ಕಾರ್ಯಕರ್ತರು ಇದ್ದರು. ಭೋಗಾವತಿ, ಅಡವಿ ಅಮರೇಶ್ವರ ಸೇರಿದಂತೆ ಇತರ ಗ್ರಾಮಗಳಲ್ಲಿ ಜನತಾ ಜಲಧಾರೆ ರಥಯಾತ್ರೆ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next