Advertisement

ಗೋರಕ್ಷಣೆಗೆ ಬೆಂಬಲವಿದೆ; ಕಾನೂನು ಉಲ್ಲಂಘನೆಗಲ್ಲ ಎಂದ ಸಚಿವ ಗಡ್ಕರಿ

11:56 AM May 22, 2017 | Team Udayavani |

ಹೊಸದಿಲ್ಲಿ: “ಗೋರಕ್ಷಣೆ ಬೆಂಬಲಿಸುತ್ತೇವೆ. ಆದರೆ ಅದರ ಹೆಸರಲ್ಲಿ ನಡೆಯುವ ಕಾನೂನು ಉಲ್ಲಂಘನೆ ಕೆಲಸಗಳನ್ನಲ್ಲ.’ ಹೀಗಂತ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ.

Advertisement

ದಿಲ್ಲಿಯಲ್ಲಿ ನಡೆಯುತ್ತಿರುವ ಇಂಡಿಯಾ ಟುಡೇ ಸಂಪಾದಕರ ಸಮ್ಮೇಳನದಲ್ಲಿ ಮಾತನಾಡುತ್ತಾ ನಿತಿನ್‌ ಗಡ್ಕರಿ, “ನಾವು ಗೋರಕ್ಷಣೆ ಬೆಂಬಲಿಸುತ್ತೇವೆ. ಗೋಹತ್ಯೆ ಮಾಡಬಾರದು ಎಂಬ ನಂಬಿಕೆ ನಮ್ಮ ಪಕ್ಷದ್ದು. ಆದರೆ ಇದೀಗ ಗೋರಕ್ಷಣೆ ಹೆಸರಲ್ಲಿ ಗೋರಕ್ಷಕರು ನಡೆಸುತ್ತಿರುವ ಕಾರ್ಯಕ್ಕೆ, ಕಾನೂನು ಕೈಗೆತ್ತಿಕೊಳ್ಳುವ ಕ್ರಮಕ್ಕೆ ನಮ್ಮ ಸಚಿವರದ್ದಾಗಲಿ, ನಮ್ಮ ಪಕ್ಷದ್ದಾಗಲಿ, ಸರಕಾರದ್ದಾಗಲಿ ಬೆಂಬಲವಿಲ್ಲ. ಕಾನೂನು ಕೈಗೆತ್ತಿಕೊಳ್ಳುವುದಕ್ಕೆ ಸಮ್ಮತಿ ಇಲ್ಲ’ ಎಂದು ಹೇಳಿದ್ದಾರೆ.

“ಕಾನೂನು ಕೈಗೆತ್ತಿಕೊಂಡು ಸಿಕ್ಕಿಬಿದ್ದಾಗ ಕೆಲವರು ನಾವು ಬಿಜೆಪಿಗೆ ಸೇರಿದ್ದೇವೆ ಎಂದು ಹೇಳುತ್ತಾರೆ. ಅವರು ಬಿಜೆಪಿಗೆ ಸೇರಿದ್ದಾರೋ ಇಲ್ಲವೋ ಎಂಬುದನ್ನೂ ನೋಡದೇ ಬಿಜೆಪಿ ಮೇಲೆ ಆರೋಪ ಹೊರಿಸಲಾಗುತ್ತದೆ. ದಿಲ್ಲಿಯಲ್ಲಿ ನಡೆದ ಘಟನೆಯೊಂದರಲ್ಲಿ ವ್ಯಕ್ತಿಯೊಬ್ಬ ತನಗೆ ಸಚಿವ ಮನೇಕಾ ಗಾಂಧಿಯವರ ಪೀಪಲ್‌ ಫಾರ್‌ ಅನಿಮಲ್ಸ್‌ ಸಂಘಟನೆಯೊಂದಿಗೆ ಸಂಪರ್ಕವಿದೆ ಎಂದಿದ್ದ. ಬಳಿಕ ಅದನ್ನು ಅವರು ನಿರಾಕರಿಸಿದ್ದರು’ ಎಂದು ಗಡ್ಕರಿ ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next