Advertisement

ಒ ಅಂಡ್‌ ಎಂ ನಿರ್ವಹಣೆಗೆ ಬೆಂಬಲ

05:28 AM Jun 16, 2020 | Lakshmi GovindaRaj |

ಮಂಡ್ಯ: ಜಿಲ್ಲೆಯ ಕಬ್ಬು ಬೆಳೆಗಾರರ ಹಿತದೃಷ್ಟಿಯಿಂದ ಮೈಷುಗರ್‌ ಕಾರ್ಖಾನೆಯನ್ನು ಒ ಅಂಡ್‌ ಎಂ ಮಾದರಿಯಲ್ಲಿ ಖಾಸಗಿ ನಿರ್ವಹಣೆ ನೀಡಲು ಬೆಂಬಲ ನೀಡಲಾಗುತ್ತಿದೆ. ಆದರೆ, ಕಾರ್ಖಾನೆಯನ್ನು ಖಾಸಗೀಕರಣಗೊಳಿಸಲು  ರೋಧವಿದೆ ಎಂದು ರೈತ ಮತ್ತು ಕನ್ನಡ ಪರ ಸಂಘಟನೆಗಳ ಒಕ್ಕೂಟದ ಸದಸ್ಯ ಡಾ. ಎಚ್‌.ಎನ್‌.ರವೀಂದ್ರ ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾರ್ಖಾನೆ ಆಸ್ತಿ ಸರ್ಕಾರಿ ಸ್ವಾಮ್ಯದಲ್ಲಿಯೇ ಉಳಿಯುತ್ತಿರುವುದು ಸಂತಸ. ಆದರೆ, ಈ ವರ್ಷವೇ ಕಬ್ಬು ಅರೆಯುವಿಕೆ ಆಗಬೇಕಿ  ರುವುದರಿಂದ ಸರ್ಕಾರ ಉದಾಸೀನ ಮಾಡದೇ ಕಾರ್ಖಾನೆ ಪ್ರಾರಂಭಿಸಬೇಕು. ರೈತರ ಹಿತವಷ್ಟೇ ಮುಖ್ಯ ವಾಗಿರುವುದರಿಂದ ಪ್ರತಿಷ್ಠೆಗೆ ಜೋತು ಬೀಳುವುದು ಸರಿಯಲ್ಲ. ಅಂತೆಯೇ, ಒ ಅಂಡ್‌  ಮಾದರಿ ಪ್ರಯೋಗವಷ್ಟೇ ಆಗಿದ್ದು, ಇದು ಶಾಶ್ವತ ಪರಿಹಾರವಲ್ಲ ಎಂದು ತಿಳಿಸಿದರು.

ತನಿಖೆಯಾಗಲಿ: ಸರ್ಕಾರ ಕಾರ್ಖಾನೆ ಖಾಸಗೀಕರಣ ವಿಚಾರ ಕೈಬಿಟ್ಟಿದ್ದಕ್ಕೆ ಅಭಿನಂದನೆ ಸಲ್ಲಿಸುತ್ತೇವೆ. ಆದರೆ, ಈವರೆಗೆ ಕಾರ್ಖಾನೆ ಅಭಿವೃದಿಗೆ  ಡಿರುವ 423 ಕೋಟಿ  ರೂ. ಅನುದಾನದ ಬಗ್ಗೆ ತನಿಖೆಯಾಗಬೇಕು. ಈ ಮೂಲಕ ತಾರ್ಕಿಕ ಅಂತ್ಯ ಪಡೆದು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು.

ಮೈಷುಗರ್‌ ಕಾರ್ಖಾನೆಯನ್ನು ಒ ಅಂಡ್‌ ಎಂ ಮಾದರಿಯಲ್ಲಿ ನಡೆಸಲು ಬಿಡುವುದಿಲ್ಲ ಎನ್ನುತ್ತಿರುವ ಶಾಸಕ ಸಿ.ಎಸ್‌.ಪುಟ್ಟರಾಜು ಪಿಎಸ್‌ಎಸ್‌  ಕಾರ್ಖಾನೆಯನ್ನು 40 ವರ್ಷ ಗುತ್ತಿಗೆ ನೀಡಲು ತೀರ್ಮಾನಿಸುವ ರೀತಿ ಸಾಮಾನ್ಯಸಭೆಯಲ್ಲಿ ತೀರ್ಮಾನಿಸಿದ್ದು ಏಕೆ ಎಂದು ಪ್ರಶ್ನಿಸಿದರು. ಸದಸ್ಯರಾದ ಎಂ.ಬಿ.ನಾಗಣ್ಣಗೌಡ,  ಶಂಭೂನಹಳ್ಳಿ ಕೃಷ್ಣ, ವಿಜಯ್‌ಗೌಡ, ಸುಂಡಹಳ್ಳಿ ಮಂಜುನಾಥ್‌, ಜಬೀವುಲ್ಲಾ, ದೇವರಾಜು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next