Advertisement

ಕರಾವಳಿ ಅಧ್ಯಯನಕ್ಕೆ ಬೆಂಬಲ

12:08 AM Jun 25, 2021 | Team Udayavani |

ಹೊಸದಿಲ್ಲಿ:  ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಹಾಗೂ ಅಮೆರಿಕದ ನ್ಯಾಶನಲ್‌ ಒಶಿಯಾನಿಕ್‌ ಆ್ಯಂಡ್‌ ಅಟ್ಪಾಸ್ಫಿಯರಿಕ್‌ ಅಡ್ಮಿನಿಸ್ಟ್ರೇಶನ್‌ (ಎನ್‌ಒಎಎ) ನೇತೃತ್ವದಲ್ಲಿ ಅನುಷ್ಠಾನಗೊಂಡಿರುವ ವಿಶ್ವದ ನಾನಾ ರಾಷ್ಟ್ರಗಳ ಕರಾವಳಿ ಪ್ರದೇಶಗಳ ಕರಾರುವಾಕ್‌ ಅಧ್ಯಯನ ಯೋಜನೆಗೆ ವಿಶ್ವಸಂಸ್ಥೆಯ ಬೆಂಬಲ ಸಿಕ್ಕಿದೆ.

Advertisement

ಉಪಗ್ರಹಗಳ ಮೂಲಕ ಹಾಗೂ ನೆಲದ ಮೇಲೆ ಅಳವಡಿಸಲಾಗಿರುವ ಸಾಧನಗಳ ಮೂಲಕ ಕರಾವಳಿಯ ಸಂಪತ್ತನ್ನು ಕರಾರುವಾಕ್‌ ಆಗಿ ಅಳೆಯಲು ರೂಪಿಸ ಲಾಗಿರುವ “ಕಮಿಟಿ ಆನ್‌ ಅರ್ತ್‌ ಅಬ್ಸರ್ವೇಶನ್‌ ಸ್ಯಾಟಲೈಟ್ಸ್‌ – ಕೋಸ್ಟಲ್‌ ಅಬ್ಸರ್ವೇಶನ್ಸ್‌, ಆ್ಯಪ್ಲಿಕೇಶನ್ಸ್‌, ಸರ್ವೀಸಸ್‌ ಆ್ಯಂಡ್‌ ಟೂಲ್ಸ್‌’ (ಸಿಇಒಎಸ್‌- ಕೋಸ್ಟ್‌) ಎಂಬ ಈ ತಂತ್ರಜ್ಞಾನ ನವನವೀನವಾಗಿದೆ. ತಂತ್ರಜ್ಞಾನಗಳ ಮೇಲೆ ಜನರು ಇಟ್ಟಿರುವ ನಂಬಿಕೆಯನ್ನು ಬೆಳೆಸುವಂಥ ತಂತ್ರಜ್ಞಾನ ಇದಾಗಿದ್ದು, ವಿಜ್ಞಾನಿಗಳ ಪಾಲಿಗೆ ಮಾಹಿತಿಯ ಭಂಡಾರವಾಗಿದೆ ಎಂದು ವಿಶ್ವಸಂಸ್ಥೆ ಶ್ಲಾಘಿಸಿದೆ.

ಮತ್ತೂಂದೆಡೆ, ಜಗತ್ತಿನ ರಾಷ್ಟ್ರಗಳಿಗೆ ವಿಶ್ವಸಂಸ್ಥೆ ವಿಧಿಸಿರುವ ಸುಸ್ಥಿರ ಗುರಿಗಳ ಈಡೇರಿಕೆಗೆ “ಸಿಇಒಎಸ್‌-ಕೋಸ್ಟ್‌ ತಂತ್ರಜ್ಞಾನ’ ಸಹಾಯಕವಾಗಿದೆ ಎಂದು ಎನ್‌ಒಎಎ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next