ಮುಂಬಯಿ/ಹೊಸದಿಲ್ಲಿ: ನೋಟು ಅಮಾನ್ಯ ನಿರ್ಧಾರ ಕೈಗೊಂಡು ಬುಧವಾರಕ್ಕೆ ವರ್ಷ ಪೂರ್ತಿಯಾಗಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹೆಸರಿನ ಆ್ಯಪ್‌ಗೆ ಬಂದಿರುವ ಪ್ರತಿಕ್ರಿಯೆಗಳಲ್ಲಿ “ಕಳೆದ ವರ್ಷ ಕೈಗೊಂಡ ಕ್ರಮ ಸರಿ’ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಶೇ.81ರಷ್ಟು ಮಂದಿ 500 ರೂ. ಮತ್ತು 1 ಸಾವಿರ ರೂ. ನೋಟು ಅಮಾನ್ಯ ಮಾಡಿದ್ದನ್ನು ಸರಿ ಎಂದು ಸಮರ್ಥಿಸಿಕೊಂಡಿದ್ದಾರೆ. 5 ಶ್ರೇಯಾಂಕ ಗಳಲ್ಲಿ 4.6ರಷ್ಟು ಒಪ್ಪಿಗೆ ದೊರೆತಿದೆ.
ಸುಮಾರು 50 ಸಾವಿರ ಮಂದಿ ಸಮೀ ಕ್ಷೆಯಲ್ಲಿ ಭಾಗವಹಿಸಿದ್ದರು. ಹೆಚ್ಚಿನ ಸಂಖ್ಯೆ ಯಲ್ಲಿ ಜನರು ಸರಕಾರದ ನಿರ್ಧಾರ ಸರಿ ಎಂದಿದ್ದರೂ, ಎಲ್ಲ ರೀತಿಯ ಅಭಿಪ್ರಾಯ ಗಳನ್ನು ಪರಿಶೀಲಿಸಿ ಅವುಗಳನ್ನು ಅನುಷ್ಠಾನಗೊಳಿಸುವಂತೆ ಖುದ್ದು ಪ್ರಧಾನಿ ಮೋದಿಯೇ ಸೂಚಿಸಿದ್ದಾರೆ.
ಅಭಿಪ್ರಾಯ ವ್ಯಕ್ತಪಡಿಸಿದ ಶೇ.93 ಮಂದಿ ಪೈಕಿ ನೋಟು ಅಮಾನ್ಯ ನಿರ್ಧಾರ ಕಪ್ಪುಹಣ ಮತ್ತು ಭ್ರಷ್ಟಾಚಾರದ ವಿರುದ್ಧ ಹೋರಾಟಕ್ಕೆ ನೆರವಾಗಿದೆ. ಶೇ.81 ಮಂದಿ ಹಿಂದಿನ ಯುಪಿಎ ಸರಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಶೇ.90 ಮಂದಿ ಕಳೆದ ವರ್ಷದ ನಿರ್ಧಾರ ಭ್ರಷ್ಟಾಚಾರದ ವಿರುದ್ಧ ಹೋರಾಟಕ್ಕೆ ನೆರವಾಗಿದೆ ಎಂದಿದ್ದಾರೆ. ಶೇ.92 ಮಂದಿ ಇಂಥ ನಿರ್ಧಾರ ಲಂಚ ಮತ್ತು ಕಪ್ಪುಹಣದ ವಿರುದ್ಧದ ಹೋರಾಟಕ್ಕೆ ನೆರವಾಗಲಿದೆ ಎಂದಿದ್ದಾರೆ.
ಆರ್‌ಬಿಐ ಆಂದೋಲನ: ವಂಚನಾತ್ಮಕ ಕರೆ ಮತ್ತು ಎಸ್‌ಎಂಎಸ್‌ಗಳ ವಿರುದ್ಧ ಆರ್‌ಬಿಐ ಸಾರ್ವಜನಿಕರಿಗೆ ಮಾಹಿತಿ ನೀಡುವ ನಿಟ್ಟಿನಲ್ಲಿ “ಆರ್‌ಬಿಐ ಏನು ಹೇಳುತ್ತದೆ ಎಂದು ಕೇಳಿ’ ಎಂಬ ಅರಿವು ಮೂಡಿಸುವ ಕಾರ್ಯಕ್ರಮ ಆರಂಭಿ ಸಲಿದೆ. “ನಿಮ್ಮ ಮೊಬೈಲ್ ಸಂಖ್ಯೆಗೆ ಭಾರಿ ಪ್ರಮಾಣದಲ್ಲಿ ಬಹುಮಾನ ಬಂದಿದೆ’ ಎಂಬ ಸಂದೇಶದ ಮೂಲಕ ವಂಚಿಸು ವುದನ್ನು ತಡೆಯಲು ಕ್ರಮ ಕೈಗೊಳ್ಳುತ್ತಿದೆ. ಸಾರ್ವಜನಿಕರಿಗೆ ಎಸ್‌ಎಂಎಸ್ ಕಳುಹಿಸಿ, ಇಂಥವುಗಳ ಬಗ್ಗೆ ಎಚ್ಚರದಿಂದ ಇರುವಂತೆ ಸೂಚಿಸಲಾಗು ತ್ತದೆ. ಇದೇ ವೇಳೆ ಹಣಕಾಸು ಇಲಾಖೆ ಅಧಿಕಾರಿಗಳನ್ನು ನೋಟು ಅಮಾನ್ಯ ಅನಂತರದ ಬೆಳವಣಿಗೆ ಬಗ್ಗೆ ಸಂಸದ ವೀರಪ್ಪ ಮೊಲಿ ನೇತೃತ್ವದ ಸಮಿತಿ ವಿಚಾರಣೆಗೆ ಒಳಪಡಿಸಿತು.
ಹೊಸ ನೋಟುಗಳ ಮುದŠಣ ಇಳಿಕೆ
ಹೊಸ ಕರೆನ್ಸಿ ನೋಟುಗಳ ಮುದ್ರಣ ಸಂಖ್ಯೆಯಲ್ಲಿ ಇಳಿಕೆ ಮಾಡಲು ಆರ್‌ಬಿಐ ನಿರ್ಧರಿಸಿದೆ. ಮುದ್ರಣ ವಾಗಿರುವ ನೋಟುಗಳನ್ನು ಸಂಗ್ರಹಿಸಿ ಇರಿಸಬೇಕಾಗಿರುವ ಭದ್ರತಾ ಕೋಠಿಗಳಲ್ಲಿ ಹಳೆಯ ಮುಖ ಬೆಲೆಯ ನೋಟುಗಳು ಇರುವುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ. 2,800 ಕೋಟಿ ನೋಟುಗಳನ್ನು ಹಾಲಿ ಹಣಕಾಸು ವರ್ಷಕ್ಕೆ ಮುದ್ರಿಸಲು ಯೋಜನೆ ಹಾಕಲಾಗಿತ್ತು. ಸ್ಥಳಾವಕಾಶದ ಕೊರತೆ ಹಿನ್ನೆಲೆಯಲ್ಲಿ ಅದನ್ನು 2,100 ಕೋಟಿಗೆ ಇಳಿಕೆ ಮಾಡಲಾಗಿದೆ. ಹಿಂದಿನ ಐದು ಹಣಕಾಸು ವರ್ಷಗಳಿಗೆ ಹೋಲಿಕೆ ಮಾಡಿದರೆ ಇದು ಅತ್ಯಂತ ಕನಿಷ್ಠದ್ದಾಗಿದೆ.