Advertisement

ಸ್ವಾಭಿಮಾನದ ಬದುಕಿಗೆ ಬಿಜೆಪಿ ಬೆಂಬಲಿಸಿ; ಸಚಿವ ಗೋವಿಂದ ಕಾರಜೋಳ

06:29 PM May 31, 2022 | Team Udayavani |

ಹುಕ್ಕೇರಿ: ಸ್ವಾಭಿಮಾನದಿಂದ ಬದುಕುವುದಕ್ಕಾಗಿ ನಾವೆಲ್ಲ ಬಿಜೆಪಿ ಬೆಂಬಲಿಸಬೇಕಾಗಿದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಬೃಹತ್‌ ನೀರಾವರಿ ಸಚಿವ ಗೋವಿಂದ ಕಾರಜೋಳ ಹೇಳಿದರು.

Advertisement

ಅವರು ಸೋಮವಾರ ವಿಶ್ವರಾಜ ಸಭಾಭವನದಲ್ಲಿ ಹಮ್ಮಿಕೊಂಡ ವಿಧಾನ ಪರಿಷತ್‌ ವಾಯವ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಹನುಮಂತ ನಿರಾಣಿ ಹಾಗೂ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಅರುಣ ಶಹಾಪೂರ ಅವರ ಚುನಾವಣಾ ಪ್ರಚಾರ ಸಭೆಯಲ್ಲಿ ಹುಕ್ಕೇರಿ ಹಾಗೂ ಯಮಕನಮರಡಿ ವಿಧಾನಸಬೆ ಮತಕ್ಷೇತ್ರದ ಮತದಾರರ ಸಭೆಯಲ್ಲಿ ಮಾತನಾಡಿದರು.

ಜನರ ಧ್ವನಿಯಾಗಿ ವಿಧಾನ ಪರಿಷತ್‌ನಲ್ಲಿ ಇಬ್ಬರು ಅಭ್ಯರ್ಥಿಗಳು ಉತ್ತಮ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರಿಗೆ ಮತ ನೀಡಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕೈ ಬಲಪಡಿಸಬೇಕು ಎಂದರು.

ಜನರಿಗೆ ತಾತ್ಕಾಲಿಕ ಆಸೆ ಆಮಿಷ ತೋರಿಸಿ ಇಲ್ಲಿಯವರೆಗೆ ಕಾಂಗ್ರೆಸ್‌ ಅಧಿಕಾರ ನಡೆಸಿ ಗೋಣಿ ಚೀಲದಲ್ಲಿ ಹಣ ತುಂಬಿಕೊಂಡು ಕುಳಿತಿದೆ. ಆದರೆ ಬಿಜೆಪಿ ಪಕ್ಷ ಜನ ಧನ, ಸಿಲಿಂಡರ್‌, ಶಿಕ್ಷಣ, ಜಿಎಸ್‌ಟಿಯಂತ ಯೋಜನೆಗಳನ್ನು ಜಾರಿಗೆ ತಂದು ಜನರ ಆರ್ಥಿಕತೆಯನ್ನು ಸುಧಾರಿಸಿದೆ ಎಂದರು.

ಸಚಿವ ಉಮೇಶ ಕತ್ತಿ ಮಾತನಾಡಿ, ಕಾಂಗ್ರೆಸ್‌ ಪಕ್ಷಕ್ಕೆ ಸ್ಪ ರ್ಧಿಸಲು ಅಭ್ಯರ್ಥಿಗಳು ಸಿಕ್ಕಿಲ್ಲ . ಸಿಕ್ಕವರು ಶಿಕ್ಷಕರೂ ಅಲ್ಲ ಹಾಗೂ ಪದವೀಧರರೂ ಅಲ್ಲ ಎಂದರು. ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿ, ಹಣವಿದೆ ಎಂದು ಕಾಂಗ್ರೆಸ್‌ನ ಪ್ರಕಾಶ ಹುಕ್ಕೇರಿ ಹರಕೆಯ ಕುರಿಯಾಗಿದ್ದಾರೆ ಎಂದರು.

Advertisement

ಸಂಸದ ಅಣ್ಣಾಸಾಹೇಬ ಜೊಲ್ಲೆ, ಶಾಸಕ ದುರ್ಯೋಧನ ಐಹೊಳೆ ಮಾತನಾಡಿ, ಪ್ರಜ್ಞಾವಂತ ಮತದಾರರು ಅಳೆದು ತೂಗಿ ಬಿಜೆಪಿಯ ಇಬ್ಬರು ಅಭ್ಯರ್ಥಿಗಳಗೆ ಮತ ನೀಡಿ ಗೆಲ್ಲಿಸಬೇಕೆಂದರು. ಮಾಜಿ ಸಚಿವ ಶಶಿಕಾಂತ ನಾಯಿಕ, ಮಹಾಂತೇಶ ಕವಟಿಗಿಮಠ, ಮಾಜಿ ಶಾಸಕ ಜಗದೀಶ ಮೆಟಗುಡ್ಡ, ಅಭ್ಯರ್ಥಿಗಳಾದ ಹನುಮಂತ ನಿರಾಣಿ, ಅರುಣ ಶಹಾಪೂರ ಮಾತನಾಡಿ, ಬಿಜೆಪಿ ಗೆಲ್ಲಿಸುವಂತೆ ಮನವಿ ಮಾಡಿದರು.

ಪ್ರಭಾರಿ ಉಸ್ತುವಾರಿ ಉಜ್ವಲಾ ಬಡವನಾಚೆ, ಮಂಡಳ ಅಧ್ಯಕ್ಷರಾದ ರಾಚಯ್ನಾ ಹಿರೇಮಠ, ಶ್ರೀಶೈಲ ಯಮಕನಮರಡಿ, ಮುಖಂಡರಾದ ಮಾರುತಿ ಅಷ್ಟಗಿ, ಮಹಾವೀರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮಹಾವೀರ ನಿಲಜಗಿ, ಪುರಸಭೆ ಅಧ್ಯಕ್ಷ ಎ.ಕೆ ಪಾಟೀಲ, ಉಪಾಧ್ಯಕ್ಷ ಆನಂದ ಗಂಧ, ವಕೀಲರ ಸಂಘದ ಅಧ್ಯಕ್ಷ ರವಿ ಚೌಗಲಾ, ಗುರು ಕುಲಕರ್ಣಿ, ಪರಗೌಡ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು. ಬಿಜೆಪಿ ಜಿಲ್ಲಾ ಅಧ್ಯಕ್ಷ ಡಾ| ರಾಜೇಶ ನೇರ್ಲಿ ಅಧ್ಯಕ್ಷತೆ ವಹಿಸಿದ್ದರು. ರೈತ ಮೋರ್ಚಾ ಅಧ್ಯಕ್ಷ ಸತ್ಯಪ್ಪ ನಾಯಿಕ ಸ್ವಾಗತಿಸಿದರು. ರಾಚಯ್ನಾ ಹಿರೇಮಠ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next