ಕಲಬುರಗಿ: ಈಗಾಗಲೇ ಆದೇಶಿಸಿರುವಂತೆಎರಡು ಕೋಟಿ ಕೋವಿಡ್ ಲಸಿಕೆ ರಾಜ್ಯಕ್ಕೆಪೂರೈಕೆಯಾದ ಕೂಡಲೇ 18 ವರ್ಷ ಮೇಲ್ಪಟ್ಟವರಿಗೆವಿತರಿಸಲಾಗುತ್ತದೆ. ಆದರೆ ಲಸಿಕೆ ಯಾವಾಗಸಿಗಲಿದೆ ಎಂದು ಹೇಳಲಾಗಲ್ಲ. ಕಂಪನಿಗಳಉತ್ಪಾದನೆ-ಸರಬರಾಜು ನೋಡಿಕೊಂಡು ತಿಳಿಸಲಾಗುವುದು ಎಂದು ಆರೋಗ್ಯ ಮತ್ತುಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ ಸಚಿವಡಾ|ಕೆ.ಸುಧಾಕರ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ರಾಜ್ಯದಲ್ಲಿ ಸದ್ಯಕ್ಕೆ ಮೂರು ಲಕ್ಷ ಡೋಸ್ ಲಸಿಕೆದಾಸ್ತಾನು ಇದೆ. ರಾಜ್ಯಾದ್ಯಂತ ಆರು ಸಾವಿರ ಲಸಿಕಾಕೇಂದ್ರಗಳಿವೆ. ಎಲ್ಲ ಕೇಂದ್ರಗಳಿಗೆ ಕೊಡಬೇಕಾದರೂಆರು ಲಕ್ಷ ಡೋಸ್ ಅಗತ್ಯವಾಗುತ್ತದೆ ಎಂದರು.18ರಿಂದ 44 ವರ್ಷದೊಳಗಿನವರಿಗೆ ರಾಜ್ಯಸರ್ಕಾರದಿಂದ ನೀಡುವ ಲಸಿಕೆಗೆ ಶನಿವಾರ ಸಿಎಂಬಿ.ಎಸ್.ಯಡಿಯೂರಪ್ಪ ಸಾಂಕೇತಿಕವಾಗಿ ಚಾಲನೆನೀಡಿದ್ದಾರೆ.
ಹೀಗಾಗಿ 45 ವರ್ಷ ಮೇಲ್ಪಟ್ಟವರಿಗೆಕೇಂದ್ರ ಸರ್ಕಾರ ನೀಡಿರುವ ಉಚಿತ ಲಸಿಕೆದುರುಪಯೋಗ ಆಗೋದಿಲ್ಲ ಎಂದು ಹೇಳಿದರು.
ಮಾನ್ಯತೆ ರದ್ದು ಎಚ್ಚರಿಕೆ: ಕೊರೊನಾ ಸೋಂಕಿತರಚಿಕಿತ್ಸೆಗಾಗಿ ನೀಡಲಾಗುವ ರೆಮ್‌ಡೆಸಿವಿಯರ್‌ಇಂಜೆಕ್ಷನ್ ಕಾಳಸಂತೆಯಲ್ಲಿ ಮಾರಾಟ ಮಾಡಿದಲ್ಲಿ ಅಂತಹವರ ವಿರುದ್ಧ ಎಫ್‌ಐಆರ್ ದಾಖಲಿಸಿ ಜೈಲಿಗೆ ಹಾಕಲಾಗುತ್ತದೆ.
ಖಾಸಗಿ ಆಸ್ಪತ್ರೆಗಳುಅಗತ್ಯವಿದ್ದಲ್ಲಿ ಮಾತ್ರ ರೆಮ್‌ಡೆಸಿವಿಯರ್ ಇಂಜೆಕ್ಷನ್‌ಬೇಡಿಕೆಯನ್ನು ಸರ್ಕಾರಕ್ಕೆ ಸಲ್ಲಿಸಬೇಕು. ಅದರಂತೆಬಳಕೆ ಮಾಡಿ ಪ್ರಮಾಣ ಪತ್ರ ಸಲ್ಲಿಸಬೇಕು. ಒಂದುವೇಳೆ ಹೆಚ್ಚಿನ ಸಂಖ್ಯೆಯಲ್ಲಿ ತೆಗೆದುಕೊಂಡರೆ ಅಥವಾಆಸ್ಪತ್ರೆಯ ಯಾವುದೇ ಸಿಬ್ಬಂದಿ ರೆಮ್‌ಡೆಸಿವಿಯರ್‌ದುರ್ಬಳಕೆ ಮಾಡಿಕೊಂಡರೆ ಆಸ್ಪತ್ರೆ ಮಾನ್ಯತೆರದ್ದುಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಕಳೆದ ವರ್ಷ ರಾಜ್ಯದಲ್ಲಿ 11ಲಕ್ಷ ಜನರುಕೊರೊನಾದಿಂದ ಗುಣಮುಖರಾಗಿದ್ದಾರೆ. ಆದರೆಯಾರೊಬ್ಬರಿಗೂ ರೆಮ್‌ಡೆಸಿವಿಯರ್ ಇಂಜೆಕ್ಷನ್‌ನೀಡಿಲ್ಲ. ಆದರೆ ಈ ಬಾರಿ ರೆಮ್‌ಡಿಸಿವಿಯರ್ ಬಗ್ಗೆಅನಗತ್ಯವಾಗಿ ಬೇಡಿಕೆ ಸೃಷ್ಟಿಸಲಾಗುತ್ತಿದೆ. ಇದನ್ನುಆಸ್ಪತ್ರೆಗಳು-ರೋಗಿಗಳು ಅರಿಯಬೇಕು ಎಂದರು.