Advertisement

PFI ವಿರುದ್ಧ ಪೂರಕ ಆರೋಪಪಟ್ಟಿ

07:36 PM Oct 21, 2023 | Team Udayavani |

ನವದೆಹಲಿ: ನಿಷೇಧಿತ ಪಾಪ್ಯುಲರ್‌ ಫ್ರಂಟ್‌ ಆಫ್ ಇಂಡಿಯಾ (ಪಿಎಫ್ಐ) ಸಂಘಟನೆ ವಿರುದ್ಧ ಜಾರಿ ನಿರ್ದೇಶನಾಲಯ (ಇ,ಡಿ) ನವದೆಹಲಿಯ ವಿಶೇಷ ಕೋರ್ಟ್‌ನಲ್ಲಿ ಪೂರಕ ಆರೋಪಪಟ್ಟಿ ಸಲ್ಲಿಸಿದೆ. ಸಂಘಟನೆಯ ಸಯ್ಯದ್‌ ಮೊಹಮ್ಮದ್‌ ಕಾಸಿಂ ಎಂಬಾತನ ವಿರುದ್ಧ ಅಕ್ರಮ ಹಣಕಾಸು ವರ್ಗಾವಣೆಯಲ್ಲಿ ಭಾಗಿಯಾಗಿರುವ ಆರೋಪದ ಹಿನ್ನೆಲೆಯಲ್ಲಿ ಸಲ್ಲಿಕೆ ಮಾಡಲಾಗಿದೆ.

Advertisement

ಇ,ಡಿ.ಪರ ವಕೀಲರು ಹೆಚ್ಚುವರಿ ನ್ಯಾಯಾಧೀಶ ಸಚಿನ್‌ ಗುಪ್ತಾ ಎದುರು ವಾದ ಮಂಡಿಸಿ ಹಲವು ವರ್ಷಗಳ ಕಾಲ ಬಂಧಿತ ಸಯ್ಯದ್‌ ಮೊಹಮ್ಮದ್‌ ಕಾಸಿಂ ಅಕ್ರಮ ಹಣವರ್ಗಾವಣೆಯಲ್ಲಿ ಭಾಗಿಯಾಗಿರುವುದಕ್ಕೆ ಸಾಕ್ಷ್ಯಗಳಿವೆ ಎಂದು ವಾದಿಸಿದ್ದಾರೆ. ವಾದವನ್ನು ಆಲಿಸಿದ ಬಳಿಕ ನ್ಯಾಯಾಧೀಶರು ಪ್ರಕರಣವನ್ನು ಅ.26ಕ್ಕೆ ನಿಗದಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next