ರಾಂಚಿ: ಗಂಡು ಮಗುವಾಗಬೇಕಿದ್ದರೆ ಹೆಣ್ಣು ಮಗುವನ್ನು ಬಲಿಕೊಡಬೇಕೆಂಬ ಮಾಂತ್ರಿಕ(ಬಾಬಾ)ನ ಮಾತನ್ನು ನಂಬಿ ಸ್ವತಃ ತಂದೆಯೇ ತನ್ನ ಆರು ವರ್ಷದ ಹೆಣ್ಣು ಮಗುವಿನ ಕತ್ತನ್ನು ಕತ್ತರಿಸಿ ಬಲಿಕೊಟ್ಟಿರುವ ಭೀಕರ ಘಟನೆ ಜಾರ್ಖಂಡ್ ನ ರಾಂಚಿಯಲ್ಲಿ ನಡೆದಿರುವುದಾಗಿ ವರದಿ ತಿಳಿಸದೆ.
ತನಗೆ ಗಂಡು ಮಗುವಾಗಬೇಕೆಂದು ಸಲಹೆ ಕೇಳಲು 26ವರ್ಷದ ಸುಮನ್ ನೆಗಾಸಿಯಾ ಎಂಬಾತ ಬಾಬಾ(ಮಾಂತ್ರಿಕ)ನನ್ನು ಸಂಪರ್ಕಿಸಿ ಸಲಹೆ ಕೇಳಿದ್ದ. ಅದಕ್ಕೆ ಆತ ಒಂದು ವೇಳೆ ಗಂಡು ಮಗು ಬೇಕಿದ್ದರೆ, ನಿನ್ನ ಮಗಳನ್ನು ಬಲಿ ಕೊಡಬೇಕು ಎಂದು ತಿಳಿಸಿದ್ದ.
ಸುಮನ್ ರಾಂಚಿಯ ಲೋಹಾರ್ ಡಾಗಾದ ಪೇಶ್ರಾರ್ ಬ್ಲಾಕ್ ನ ನಿವಾಸಿಯಾಗಿದ್ದು, ಮಗಳನ್ನು ಬಲಿ ಕೊಡುವ ಸಂದರ್ಭದಲ್ಲಿ ಈತನ ಪತ್ನಿ ತವರು ಮನೆಗೆ ಹೋಗಿರುವುದಾಗಿ ವರದಿ ವಿವರಿಸಿದೆ.
ಘಟನೆಗೆ ಸಂಬಂಧಿಸಿದಂತೆ ಪೆಶ್ರಾರ್ ಪೊಲೀಸರು ಆರೋಪಿ ಸುಮನ್ ನನ್ನು ಬಂಧಿಸಿದ್ದಾರೆ. ಪೋಸ್ಟ್ ಮಾರ್ಟ್ಂ ನಡೆಸಿದ ನಂತರ ಬಾಲಕಿಯ ಶವವನ್ನು ಮನೆಯವರಿಗೆ ಹಸ್ತಾಂತರಿಸಲಾಯಿತು.
ಇದನ್ನೂ ಓದಿ:ಮಕ್ಕಳ ದಿನದಂದೇ ನಡೆಯಿತು ದುರಂತ: ಮೂವರು ಮಕ್ಕಳು ನೀರು ಪಾಲು
ಬಾಲಕಿಯನ್ನು ಬಲಿ ಕೊಡಲು ಸಲಹೆ ನೀಡಿದ ಮಾಂತ್ರಿಕನ ಬಂಧನಕ್ಕಾಗಿ ಶೋಧ ಕಾರ್ಯ ನಡೆಯುತ್ತಿದ್ದು, ತನಿಖೆ ಮುಂದುವರಿದಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.