Advertisement
ಸಮಾಜದಲ್ಲಿ ಸಾಕಷ್ಟು ಮೌಡ್ಯಗಳಿದ್ದು ಎಲ್ಲವನ್ನು ನಿಷೇಧ ಕಷ್ಟ. ಕೋಳಿ, ಕುಡಿ ಕಡಿಯೋದು ಬೇಡ ಎಂದರೆ ಒಪ್ಪಲ್ಲ. ಕೆಲವೊಂದು ಜೀವನದ ಭಾಗಗಳಾಗಿ ಹೋಗಿವೆ. ಆದರೆ, ಆಮಾಯಕರ ಶೋಷಣೆ ಮಾಡುವ ಮೌಡ್ಯದ ಹೆಸರಿನಲ್ಲಿ ಮೋಸ ಮಾಡುವ, ಮೌಡ್ಯದ ಹೆಸರಿನಲ್ಲಿ ಜನರ ಜೀವನ ದುಸ್ತರಗೊಳಿಸುವ ಆಚರಣೆಗಳು ನಿಲ್ಲಬೇಕು ಎಂದು ತಿಳಿಸಿದರು.
ಜಾತಿ ಇಲ್ಲದ ಹೊಸ ಧರ್ಮಕ್ಕೆ ಹೋರಾಟ ನಡೆಯಬೇಕು. ಬಸವಣ್ಣನವರ ನಿಜವಾದ ಆಶಯ ಜಾತಿರಹಿತ ಸಮಾಜ. ಬಗ್ಗೆ ಸಂಘಟನೆ ಮಾಡಿ ಜನರಲ್ಲಿ ಜಾಗೃತಿ ಮೂಡಿಸಿ ಹೋರಾಟ ನಡೆಸಬೇಕು. ಆದರೆ, ಪ್ರಸ್ತುತ ನಡೆಯುತ್ತಿರುವ ಹೋರಾಟ ಜಾತಿಯನ್ನು ಒಳಗೊಂಡ ಹೊಸ ಧರ್ಮದ ಹೋರಾಟ ಎಂದು ಪ್ರಶ್ನೆಯೊಂದಕ್ಕೆ ಪ್ರತಿಯಿಸಿದರು. ಸಚಿವರ ಕಚೇರಿಯಲ್ಲಿ ಬಸವೇಶ್ವರ ಚಿತ್ರ ಇನ್ನೂ ಅಳವಡಿಸದ ಬಗ್ಗೆ ಕೇಳಿದಾಗ, ತರಲು ಹೇಳಿದೆ. ಆದರೆ, ಚಿತ್ರ ಹಾಕುವುದರಿಂದ ಅವರನ್ನು ಮೆಚ್ಚಿಸುವ ಬದಲು ಅವರ ಆಶಯ ಜಾರಿ ಮಾಡುವುದು ಮುಖ್ಯ. ನಾವೆಲ್ಲಾ ಲೋಹಿಯಾ, ಜಯಪ್ರಕಾಶ್ ನಾರಾಯಣ್, ಗೋಪಾಲಗೌಡರ ಪ್ರಭಾವಕ್ಕೆ ಒಳಗಾದವರು. ಜಾತಿವಿನಾಶ ಮತ್ತು ಭೂ ರಹಿತರಿಗೆ ಭೂಮಿ ಹಕ್ಕು ನಮ್ಮ ಹೋರಾಟದ ಗುರಿಯಾಗಿತ್ತು. ಬಸವಣ್ಣನವರು ಜಾತಿ ಹೋಗಲಾಡಿಸಲು ಹೋರಾಟ ಮಾಡಿದವರು. ಜಾತಿ ರಹಿತ ಸಮಾಜ ನಿರ್ಮಾಣಕ್ಕೆ ನಿರಂತರ ಹೋರಾಟ, ಸಂಘಟನೆ, ಜಾಗೃತಿ ಅಗತ್ಯ ಎಂದರು.