Advertisement
ಗಾಯಗಳ ಆರೈಕೆ ಮಾಡುವ ಆಸ್ಪತ್ರೆಗಳು, ನರ್ಸಿಂಗ್ ಹೋಂಗಳಲ್ಲಿ ಇಂಥ ಬ್ಯಾಕ್ಟೀರಿಯಾಗಳು ಸೃಷ್ಟಿಯಾಗುವುದು ಈ ಹಿಂದೆಯೇ ಪತ್ತೆಯಾಗಿದೆ. ಆದರೆ, ಇತ್ತೀಚಿಗೆ ಇವು ಪ್ರಪಂಚದಾದ್ಯಂತ ಹರಡಿದ್ದು, ಮನುಷ್ಯನ ಅಸ್ತಿತ್ವಕ್ಕೇ ಸವಾಲೊಡ್ಡಲಿವೆ ಎಂದು ವಿಶ್ವವಿದ್ಯಾಲಯದ ‘ಮೈಕ್ರೋಬಯಾಲಜಿಕಲ್ ಡಯಾಗ್ನಾಸ್ಟಿಕ್ ಯೂನಿಟ್ ಪಬ್ಲಿಕ್ ಹೆಲ್ತ್ ಲ್ಯಾಬೋರೇಟರಿ’ಯ ಸಂಶೋಧಕರು ಹೇಳಿದ್ದಾರೆ. ಆಸ್ಟ್ರೇಲಿಯಾ ಸೇರಿದಂತೆ ವಿಶ್ವದ 10 ದೇಶಗಳ ಆಸ್ಪತ್ರೆಗಳಿಂದ ತರಿಸಲಾಗಿದ್ದ ಕೆಲವು ಸ್ಯಾಂಪಲ್‌ಗಳಲ್ಲಿ ಈ ಅಂಶ ದೃಢಪಟ್ಟಿದೆ ಎಂದು ಅವರು ತಿಳಿಸಿದ್ದಾರೆ.
ಇದೊಂದು ಸೂಕ್ಷ್ಮಾಣುಜೀವಿ. ಇದರ ಪೂರ್ತಿ ಹೆಸರು ‘ಮಿಥಿಸಿಲಿನ್-ರೆಸಿಸ್ಟಂಟ್ ಸ್ಟಾಫಿಲೋಕೋಕಸ್ ಆರಿಯಸ್’. ಇವು ದೇಹದಲ್ಲಿ ಚಿಕಿತ್ಸೆ ನೀಡಲು ಕ್ಲಿಷ್ಟಕರವೆನಿಸುವಂಥ ಆರೋಗ್ಯ ಸಮಸ್ಯೆಗಳನ್ನು ಸೃಷ್ಟಿಸುತ್ತವೆ. ಸದ್ಯಕ್ಕೆ ಲಭ್ಯವಿರುವ ಯಾವುದೇ ಆ್ಯಂಟಿ ಬಯೋಟಿಕ್ಸ್‌ಗಳಿಂದ ಇವುಗಳ ನಿಯಂತ್ರಣ ಸಾಧ್ಯವಿಲ್ಲ. ಹಾಗಾಗಿ, ಇದನ್ನು ‘ಸೂಪರ್ ಬಗ್’ ಎಂದು ಕರೆಯುತ್ತಾರೆ.