Advertisement

ನಂದಿಗ್ರಾಮದಲ್ಲಿ ಸೇಡು ತೀರಿಸಿಕೊಂಡ ಮಮತಾ…ಕೊನೆಗೂ ಸುವೇಂದು ಅಧಿಕಾರಿಗೆ ಸೋಲು

04:41 PM May 02, 2021 | Team Udayavani |

ಕೋಲ್ಕತಾ: ತೀವ್ರ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದ್ದ ಪಶ್ಚಿಮಬಂಗಾಳದ ಫಲಿತಾಂಶ ಒಂದೆಡೆಯಾದರೆ ಮತ್ತೊಂದೆಡೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಸುವೇಂದು ಅಧಿಕಾರಿ ಸ್ಪರ್ಧಿಸಿದ್ದ ನಂದಿಗ್ರಾಮ ಕ್ಷೇತ್ರ ಕೂಡಾ ಅಷ್ಟೇ ಪ್ರಮುಖ ಸ್ಥಾನ ಪಡೆದಿತ್ತು. ತೀವ್ರ ಹಾವು-ಏಣಿಯಾಟದ ಫಲಿತಾಂಶದಲ್ಲಿ ಕೊನೆಗೂ ಮಮತಾ ಬ್ಯಾನರ್ಜಿ ಬಿಜೆಪಿಯ ಸುವೇಂದು ಅಧಿಕಾರಿಯನ್ನು ಅಲ್ಪಮತಗಳ ಅಂತರದಿಂದ ಪರಾಭವಗೊಳಿಸಿರುವುದಾಗಿ ವರದಿ ತಿಳಿಸಿದೆ.

Advertisement

ಪಶ್ಚಿಮಬಂಗಾಳ ಸರ್ಕಾರದಲ್ಲಿ ಮಮತಾ ಬ್ಯಾನರ್ಜಿಯ ಬಲಗೈ ಬಂಟನಂತಿದ್ದ ಸುವೇಂದು ಅಧಿಕಾರಿ ಟಿಎಂಸಿ ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಏತನ್ಮಧ್ಯೆ ಜಿದ್ದಿಗೆ ಬಿದ್ದ ಮಮತಾ ಬ್ಯಾನರ್ಜಿ ಈ ಹಿಂದೆ ಸ್ಪರ್ಧಿಸುತ್ತಿದ್ದ ಭವಾನಿಪುರ್ ಬಿಟ್ಟು ನಂದಿಗ್ರಾಮದಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದರು.

ಒಂದು ದಶಕದ ಹಿಂದೆ ನಂದಿಗ್ರಾಮದಲ್ಲಿ ಟಾಟಾ ಸ್ಟೀಲ್ ಗಾಗಿ ಭೂಮಿ ನೀಡುವ ವಿಚಾರದಲ್ಲಿ ಅಂದಿನ ಎಡಪಕ್ಷಗಳ ಸರ್ಕಾರದ ವಿರುದ್ಧ ಹೋರಾಟ ನಡೆಸುವ ಮೂಲಕ ಜನಪ್ರಿಯರಾದ ಮಮತಾ ಪಶ್ಚಿಮಬಂಗಾಳದಲ್ಲಿ ಅಧಿಕಾರದ ಗದ್ದುಗೆ ಏರಲು ನೆರವಾಗಿತ್ತು.

ಹೆಚ್ಚಿನ ಮಾಹಿತಿ ನಿರೀಕ್ಷಿಸಿ..

Advertisement

Udayavani is now on Telegram. Click here to join our channel and stay updated with the latest news.

Next