Advertisement

‘ಹಳೆಯಂಗಡಿ ಪಂಚಾಯತ್‌ ಸೂಪರ್‌ ಸೀಡ್‌ ಮಾಡಿ’

01:09 AM Aug 03, 2019 | mahesh |

ಹಳೆಯಂಗಡಿ: ಹಳೆಯಂಗಡಿ ಪಂಚಾಯತ್‌ನ ಆಡಳಿತದ ಎಲ್ಲ ಕೆಲಸಗಳಿಗೂ ಸಾಮಾನ್ಯ ಸದಸ್ಯ ವಸಂತ ಬೆರ್ನಾರ್ಡ್‌ರನ್ನು ಅವಲಂಬಿಸಿರುವುದು ಸರಿಯಲ್ಲ. ಅಧ್ಯಕ್ಷರು, ಉಪಾಧ್ಯಕ್ಷರು ಈ ಕಾರ್ಯ ನಿರ್ವಹಿಸಲಿ. ಬಿಜೆಪಿ ಬೆಂಬಲಿತ ಸದಸ್ಯರು ಜನರ ಸಂಕಷ್ಟಕ್ಕೆ ಸ್ಪಂದಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ಜಿಲ್ಲಾ ಪಂಚಾಯತ್‌ ಮಧ್ಯಪ್ರವೇಶಿಸಿ ಪಂಚಾಯತ್‌ನ್ನು ಸೂಪರ್‌ ಸೀಡ್‌ ಮಾಡಬೇಕು ಎಂದು ಬಿಜೆಪಿ ಮೂಲ್ಕಿ ಮೂಡುಬಿದಿರೆ ಮಂಡಲ ಅಧ್ಯಕ್ಷ ಈಶ್ವರ ಕಟೀಲು ಅವರು ಆಗ್ರಹಿಸಿದರು. ಹಳೆಯಂಗಡಿ ಗ್ರಾ.ಪಂ. ಮುಂಭಾಗದಲ್ಲಿ ಬಿಜೆಪಿ ಸ್ಥಾನೀಯ ಸಮಿತಿ ಹಾಗೂ ಸಾರ್ವಜನಿಕರೊಂದಿಗೆ ಆ. 2ರಂದು ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

Advertisement

ಆಡಳಿತವನ್ನು ಬರ್ಕಾಸ್ತುಗೊಳಿಸಿ
ಜಿ.ಪಂ. ಸದಸ್ಯ ವಿನೋದ್‌ಕುಮಾರ್‌ ಬೊಳ್ಳೂರು ಮಾತನಾಡಿ, ಹಳೆಯಂಗಡಿ ಗ್ರಾ.ಪಂ.ನ ಆಡಳಿತವು ನ್ಯಾಯಸಮ್ಮತವಾಗಿಲ್ಲ, ವಿಪಕ್ಷದ ಸದಸ್ಯರಿಗೆ ಗೌರವ ನೀಡುತ್ತಿಲ್ಲ, ಸಾಮಾನ್ಯ ಸಭೆ, ಗ್ರಾಮ ಸಭೆ, ವಾರ್ಡ್‌ ಸಭೆಗಳು ನಡೆಯದೇ 10 ತಿಂಗಳಾಗಿವೆ. ಗ್ರಾಮಸ್ಥರಿಗೆ ಯಾವೊಂದು ನ್ಯಾಯ ಸಿಗದ ಪಂಚಾಯತ್‌ನ್ನು ಬರ್ಕಾಸ್ತುಗೊಳಿಸಿ, ಆಡಳಿತಾಧಿಕಾರಿಯನ್ನು ನೇಮಿಸಿರಿ ಎಂದು ಆಗ್ರಹಿಸಿದರು.

ತಾ.ಪಂ. ಸದಸ್ಯ ಜೀವನ್‌ ಪ್ರಕಾಶ್‌ ಮಾತನಾಡಿ, ಜನರು ಪಂಚಾಯತ್‌ಗೆಬರಲು ಹೆದರುವ ಪರಿಸ್ಥಿತಿ ಇದ್ದು 10 ತಿಂಗಳಿನಿಂದ ಆಡಳಿತ ಯಂತ್ರವೇ ಸ್ಥಗಿತಗೊಂಡಂತಾಗಿದೆ. ವಿಪಕ್ಷ ಸದಸ್ಯರ ಪ್ರದೇಶದಲ್ಲಿ ಸಮಸ್ಯೆಗಳು ತಾಂಡವವಾಡುತ್ತಿದ್ದರೂ ಸಹ ಅಸಹಾಯಕರಾಗಿದ್ದಾರೆ. ಈ ದುಃಸ್ಥಿತಿಗೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ ಎಂದರು.

ನ್ಯಾಯವಾದಿ ಡೇನಿಯಲ್ ದೇವರಾಜ್‌, ಶೋಭೇಂದ್ರ ಸಸಿಹಿತ್ಲು, ರಾಮಚಂದ್ರ ಶೆಣೈ, ಪಂಚಾಯತ್‌ ಸದಸ್ಯರಾದ ಬೇಬಿ, ಚಿತ್ರಾ ಸುಖೇಶ್‌, ಅಶೋಕ್‌ ಬಂಗೇರ, ವಿನೋದ್‌ಕುಮಾರ್‌ ಕೊಳುವೈಲು, ಸುಕೇಶ್‌ ಪಾವಂಜೆ, ನರೇಂದ್ರ ಪ್ರಭು ಮಾತನಾಡಿದರು.

ತಾ.ಪಂ. ಅಧಿಕಾರಿ ಭೇಟಿ
ಸ್ಥಳಕ್ಕೆ ತಾ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸದಾನಂದ ಸ್ಥಳಕ್ಕೆ ಬಂದು ಮನವಿ ಯನ್ನು ಪ್ರತಿಭಟನಕಾರರಿಂದ ಸ್ವೀಕರಿಸಿ, ಆಗಸ್ಟ್‌ 7ರಂದು ನಡೆಯುವ ತಾ.ಪಂ. ಸಭೆಯೊಳಗೆ ಉತ್ತರಿಸಲು ಪಂಚಾಯತ್‌ಗೆನೋಟಿಸ್‌ ನೀಡಲಾಗಿದೆ ಅವರ ಪ್ರತಿಕ್ರಿಯೆನ್ನು ಸಭೆಯಲ್ಲಿಟ್ಟು ಮುಂದಿನ ಕ್ರಮವನ್ನು ಕೈಗೊಳ್ಳಲಾಗುವುದು ಎಂದರು.

Advertisement

ಎಸ್‌.ಎಸ್‌.ಸತೀಶ್‌ ಭಟ್, ಹಿಮಕರ್‌ ಕದಿಕೆ, ಸಂತೋಷ್‌ ಶೆಟ್ಟಿ, ಸದಾಶಿವ ಚಿಲಿಂಬಿ, ಮನೋಜ್‌ಕುಮಾರ್‌, ಆನಂದ ಸುವರ್ಣ, ರಾಜೇಶ್‌ ದಾಸ್‌ ಪಕ್ಷಿಕೆರೆ, ಮಧುಸೂದನ್‌ ಶೆಟ್ಟಿಗಾರ್‌ ಕಿಲ್ಪಾಡಿ, ಅನಿಲ್ ಸಸಿಹಿತ್ಲು, ಮಹಾಬಲ, ನಾಗರಾಜ್‌, ತಾ.ಪಂ. ಮಾಜಿ ಸದಸ್ಯೆ ಸಾವಿತ್ರಿ ಪಾಲ್ಗೊಂಡಿದ್ದರು.

ಪಣಂಬೂರು ಎಸಿಪಿ ಶ್ರೀನಿವಾಸ್‌ ಗೌಡ ಹಾಗೂ ಮೂಲ್ಕಿ ಇನ್‌ಸ್ಪೆಕ್ಟರ್‌ ಅನಂತ ಪದ್ಮನಾಭ ಅವರ ನೇತೃತ್ವದಲ್ಲಿ ಬಿಗಿ ಬಂದೋಬಸ್ತನ್ನು ಮಾಡಲಾಗಿತ್ತು.

ಪ್ರತಿಭಟನಕಾರರು ಹಳೆಯಂಗಡಿ ಗ್ರಾ.ಪಂ.ನ ದಾರಿದೀಪ, ತ್ಯಾಜ್ಯ ವಿಲೇವಾರಿ, ನೀರು ಸರಬರಾಜು ನಿರ್ವಹಣೆ ನಡೆಸುತ್ತಿಲ್ಲ, ಮನೆ ಕಟ್ಟುವ ಪರವಾನಿಗೆ ನೀಡುತ್ತಿಲ್ಲ , ಅನುದಾನ ವಿನಿಯೋಗದಲ್ಲಿ ತಾರತಮ್ಯ, ತಾತ್ಕಾಲಿಕ ಪೌರಕಾರ್ಮಿಕರಿಗೆ 9 ತಿಂಗಳಿನಿಂದ ವೇತನವಿಲ್ಲ, ಆದಾಯಕ್ಕಿಂತ ಹೆಚ್ಚು ಖರ್ಚು ನಡೆಸುತ್ತಿದ್ದಾರೆ. ಸಸಿಹಿತ್ಲು ಬೀಚ್ಗೆ ಅನಧಿಕೃತ ಶುಲ್ಕ ವಸೂಲಿ, ಬೀಚ್‌ನಲ್ಲಿ ಸೂಕ್ತ ರಕ್ಷಣೆ ತಂಡದ ವ್ಯವಸ್ಥೆ ಇಲ್ಲ ಎಂದು ಆರೋಪಿಸಿದರು.

ಪ್ರತಿಭಟನಕಾರರ ಆರೋಪಗಳು
ಪ್ರತಿಭಟನಕಾರರು ಹಳೆಯಂಗಡಿ ಗ್ರಾ.ಪಂ.ನ ದಾರಿದೀಪ, ತ್ಯಾಜ್ಯ ವಿಲೇವಾರಿ, ನೀರು ಸರಬರಾಜು ನಿರ್ವಹಣೆ ನಡೆಸುತ್ತಿಲ್ಲ, ಮನೆ ಕಟ್ಟುವ ಪರವಾನಿಗೆ ನೀಡುತ್ತಿಲ್ಲ , ಅನುದಾನ ವಿನಿಯೋಗದಲ್ಲಿ ತಾರತಮ್ಯ, ತಾತ್ಕಾಲಿಕ ಪೌರಕಾರ್ಮಿಕರಿಗೆ 9 ತಿಂಗಳಿನಿಂದ ವೇತನವಿಲ್ಲ, ಆದಾಯಕ್ಕಿಂತ ಹೆಚ್ಚು ಖರ್ಚು ನಡೆಸುತ್ತಿದ್ದಾರೆ. ಸಸಿಹಿತ್ಲು ಬೀಚ್ಗೆ ಅನಧಿಕೃತ ಶುಲ್ಕ ವಸೂಲಿ, ಬೀಚ್‌ನಲ್ಲಿ ಸೂಕ್ತ ರಕ್ಷಣೆ ತಂಡದ ವ್ಯವಸ್ಥೆ ಇಲ್ಲ ಎಂದು ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next