Advertisement
ಕೇಕುನಾರಬೆಟ್ಟು ನಿವಾಸಿ ಪುತ್ತುಬಾವಾ ಅವರ ಮನೆಗೆ ರಾತ್ರಿ 8ರ ಸುಮಾರಿಗೆ ಸಿಡಿಲು ಬಡಿದಿದ್ದು, ಇನ್ವರ್ಟರ್, ಫ್ಯಾನ್ಗಳು, ಟ್ಯೂಬ್ ಲೈಟ್ಗಳು, ಸ್ವಿಚ್ ಬೋರ್ಡ್ಗಳು, ಮೈನ್ ಸ್ವಿಚ್ ಹಾಗೂ ವಯರಿಂಗ್ ಸೇರಿದಂತೆ ಬಹುತೇಕ ವಿದ್ಯುತ್ ಪರಿಕರಗಳು ಸುಟ್ಟು ಕರಕಲಾಗಿ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ಮನೆಯಲ್ಲಿ ಪುತ್ತುಬಾವಾ ದಂಪತಿ ಹಾಗೂ ನಾಲ್ಕು ಮಕ್ಕಳು ಇದ್ದರು.
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲವು ಕಡೆಗಳಲ್ಲಿ ಮಂಗಳವಾರ ಮಳೆಯಾಗಿದೆ. ಸುಳ್ಯ, ಕಡಬ ಸುತ್ತಮುತ್ತ ಸಂಜೆ ಬಳಿಕ ಮಳೆ ಸುರಿದಿದೆ. ಉಳಿದಂತೆ ಬಿಸಿಲು ಮತ್ತು ಮೋಡದಿಂದ ಕೂಡಿದ ವಾತಾವರಣ ಇತ್ತು. ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯ ಪ್ರಕಾರ ಮುಂದಿನ ಮೂರು ದಿನಗಳಲ್ಲಿ ಅಲ್ಲಲ್ಲಿ ಮಳೆ ಸುರಿಯುವ ಸಾಧ್ಯತೆ ಇದೆ. ಮಂಗಳೂರಿನಲ್ಲಿ 31.5 ಡಿ.ಸೆ. ಗರಿಷ್ಠ ತಾಪಮಾನ ದಾಖಲಾಗಿ ವಾಡಿಕೆಗಿಂತ 1 ಡಿ.ಸೆ. ಕಡಿಮೆ ಮತ್ತು 23.4 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿ ವಾಡಿಕೆಗಿಂತ 0.1 ಡಿ.ಸೆ. ಏರಿಕೆ ಕಂಡಿತ್ತು.