Advertisement
ಬಿಸಿಲಿನ ಹೊಡೆತಕ್ಕೆ ತತ್ತರಿಸಿರುವ ಜನರು ಎಸಿ, ಕೂಲರ್‌ಗಳನ್ನು ಕೊಳ್ಳುತ್ತಿದ್ದಾರೆ. ಬೆಂಗಳೂರು, ಪುಣೆ, ಲಕ್ನೋದಲ್ಲೂ ಮಾರ್ಚ್ ತಿಂಗಳ ಬಳಿಕ ಎಸಿ, ಕೂಲರ್‌ಗಳಿಗೆ ಭಾರೀ ಬೇಡಿಕೆ ಬಂದಿದೆ ಎಂದು ಫ್ಲಿಪ್‌ಕಾರ್ಟ್ ಹೇಳಿರುವುದಾಗಿ ವರದಿಯಾಗಿದೆ. ಮೇಯಲ್ಲೇ ಎಸಿ, ಕೂಲರ್‌ಗಳ ದುಪ್ಪಟ್ಟು ಬೇಡಿಕೆ ಬಂದಿದೆ. ದಕ್ಷಿಣ ಮತ್ತು ಪೂರ್ವ ವಲಯಗಳಲ್ಲಿ ಬೇಡಿಕೆ ಏರಿದ್ದರಿಂದ ಎಪ್ರಿಲ್‌ನಲ್ಲಿ ಮಾರಾಟ ಹೆಚ್ಚಾಗಿತ್ತು. ಉತ್ತರ ಮತ್ತು ಪೂರ್ವ ಮೆಟ್ರೋ ನಗರಗಳು, ಟೈಯರ್-1 ನಗರ ಗಳಲ್ಲಿ ಮೇ ತಿಂಗಳಲ್ಲಿ ಮಾರಾಟ ಬಿರುಸಾಗಿತ್ತು.
ತಿರುವನಂತಪುರ: ಕೇರಳ ಪ್ರವೇಶದ ಬಳಿಕ 2 ದಿನಗಳ ಕಾಲ ದುರ್ಬಲಗೊಂಡಿದ್ದ ನೈಋತ್ಯ ಮುಂಗಾರು ಶನಿವಾರ ಚುರುಕಾಗಿದೆ. ನೈಋತ್ಯ ಮಾರುತದ ಪ್ರಭಾವದಿಂದಾಗಿ ಕೇರಳದಲ್ಲಿ ಧಾರಾಕಾರ ಮಳೆ ಸುರಿಯಲಾರಂಭಿಸಿದ್ದು, ದಕ್ಷಿಣ, ಕೇಂದ್ರ ಜಿಲ್ಲೆಗಳಲ್ಲಿ ಹಲವು ಪ್ರದೇಶಗಳು ಮುಳುಗಡೆಯಾಗಿ, ಜನಜೀವನ ಅಸ್ತವ್ಯಸ್ತಗೊಂಡಿದೆ. ಕೊಟ್ಟಾಯಂ, ಇಡುಕ್ಕಿ ಜಿಲ್ಲೆಗಳಲ್ಲಿ ಭಾರೀ ಮಳೆಗೆ ಮರಗಳು ಬುಡಮೇಲಾಗಿದ್ದು, ಟ್ರಾಫಿಕ್ ಸಮಸ್ಯೆ ಎದುರಾಗಿದೆ. ಇಡುಕ್ಕಿಯಲ್ಲಿರುವ ಮಲಂಕರ ಅಣೆಕಟ್ಟಿನ 5 ಗೇಟ್‌ಗಳನ್ನು ತೆರೆಯಲಾಗಿದೆ. ವಡವತ್ತೂರ್‌ನಲ್ಲಿ ಶುಕ್ರವಾರ ರಾತ್ರಿಯವರೆಗೆ 10 ಸೆ.ಮೀ., ಕೊಟ್ಟಾಯಂನಲ್ಲಿ 9 ಸೆ.ಮೀ. ಮಳೆಯಾಗಿದೆ. ತೃಶೂರು, ಮಲಪ್ಪುರಂ, ಕಲ್ಲಿಕೋಟೆ ಜಿಲ್ಲೆಗಳಿಗೆ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಲಾಗಿದೆ.