Advertisement
ಇದೊಂದು ಏಕಪಕ್ಷೀಯ ಪಂದ್ಯವಾಗಿತ್ತು. ಮೊದಲು ಬ್ಯಾಟಿಂಗ್ ನಡೆಸಿದ ಹೈದರಾಬಾದ್ 2 ವಿಕೆಟಿಗೆ 219 ರನ್ ಸೂರೆಗೈದಿತು. ಡೆಲ್ಲಿ ಈ ಮೊತ್ತವನ್ನು ಕಂಡೇ ದಿಗಿಲುಗೊಂಡಿತು. ಅದು ಯಾವ ಹಂತದಲ್ಲೂ ಬ್ಯಾಟಿಂಗ್ ಜೋಶ್ ತೋರಲಿಲ್ಲ. 19 ಓವರ್‌ಗಳಲ್ಲಿ 131ಕ್ಕೆ ಕುಸಿಯಿತು. ಈ ಪಲಿತಾಂಶದೊಂದಿಗೆ ಡೆಲ್ಲಿ ಮೂರಕ್ಕೆ ಇಳಿಯಿತು. ಆರ್‌ಸಿಬಿ ಎರಡನೇ ಸ್ಥಾನಕ್ಕೆ ಏರಿತು. ಈ ಸೋಲಿನೊಂದಿಗೆ ಮುಂದಿನ ಸುತ್ತಿಗೆ ಮೊದಲ ತಂಡವಾಗಿ ಪ್ರವೇಶ ಪಡೆಯುವ ಕನಸು ಕಾಣುತ್ತಿದ್ದ ಡೆಲ್ಲಿಗೆ ನಿರಾಸೆಯಾಗಿದೆ. ಬುಧವಾರದ ಆರ್‌ಸಿಬಿ-ಮುಂಬೈ ನಡುವಿನ ವಿಜೇತರಿಗೆ ಈ ಅದೃಷ್ಟ ಒಲಿಯಲಿದೆ.
Related Articles
Advertisement
ಗುಡುಗಿದ ಸಾಹಾವಾರ್ನರ್ ನಿರ್ಗಮನದ ಬಳಿಕವೂ ಸಾಹಾ ಬ್ಯಾಟಿಂಗ್ ಅಬ್ಬರ ಕುಂಠಿತಗೊಳ್ಳಲಿಲ್ಲ ಸಿಕ್ಸರ್, ಬೌಂಡರಿ ಸಿಡಿಸುತ್ತಲೇ ಅರ್ಧಶತಕ ಪೂರೈಸಿದರು. ಜತೆಗೆ ತಂಡದ ಮೊತ್ತವು ಏರುತ್ತಲೇ ಸಾಗುತ್ತಿತ್ತು. 12 ಓವರ್ ಮುಕ್ತಾಯಕ್ಕೆ ತಂಡದ ಮೊತ್ತ 156 ರನ್ ದಾಖಲಿಸಿ ಉತ್ತಮ ಸ್ಥಿಯಲ್ಲಿತ್ತು. ಅನ್ರಿಚ್ ನೋರ್ಜೆ ಅವರ ಎಸೆತವೊಂದನ್ನು ಸಿಕ್ಸರ್‌ಗೆ ಅಟ್ಟುವ ಪ್ರಯತ್ನದಲ್ಲಿ ಸಾಹಾ ಅವರು ಅಯ್ಯರ್‌ಗೆ ಕ್ಯಾಚ್ ನೀಡಿ ಔಟಾಗುವ ಮೂಲಕ 13 ರನ್ ಅಂತರದಿಂದ ಶತಕ ವಂಚಿತರಾದರು. (ಸಿಡಿಸಿದ್ದು 12 ಬೌಂಡರಿ, 2 ಸಿಕ್ಸರ್) ಪಾಂಡೆ ಮತ್ತು ಸಾಹ ಜೋಡಿ ಎರಡನೇ ವಿಕೆಟ್‌ಗೆ
29 ಎಸೆತದಿಂದ 63 ರನ್ ಸೂರೆಗೈದಿತು. ಆರಂಭದಲ್ಲಿ ಸಾಹಾ ಅವರೀಗೆ ಉತ್ತಮ ಬೆಂಬಲ ನೀಡುತ್ತಿದ್ದ ಪಾಂಡೆ , ಸಾಹಾ ನಿರ್ಗಮನದ ಬಳಿಕ ಚುರುಕಿನ ಬ್ಯಾಟಿಂಗ್‌ಗೆ ಮುಂದಾಗಿ 31 ಎಸೆತಗಳಿಂದ ಅಜೇಯ 44 ರನ್ (4 ಬೌಂಡರಿ, 1 ಸಿಕ್ಸರ್) ಬಾರಿಸಿ ತಂಡದ ಮೊತ್ತವನ್ನು ಇನ್ನೂರರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ವಿಲಿಯಮ್ಸನ್ 11 ರನ್ ಗಳಿಸಿ ಅಜೇಯರಾಗಿ ಉಳಿದರು. ಡೆಲ್ಲಿ ಪಾಳಯದ ಪ್ರಮುಖ ಬೌಲರ್‌ಗಳಾದ ಅಕ್ಷರ್, ತುಷಾರ್, ರಬಾಡ, ಆರ್.ಅಶ್ವಿನ್ ಈ ಪಂದ್ಯದಲ್ಲಿ ಲಯ ತಪ್ಪಿದವರಂತೆ ಬೌಲಿಂಗ್ ನಡೆಸಿ ದುಬಾರಿಯಾಗಿ ಪರಿಣಮಿಸಿದರು. ಹೈದರಾಬಾದ್ ಮೂರು ಬದಲಾವಣೆ
ಈ ಪಂದ್ಯಕ್ಕಾಗಿ ಹೈದರಾಬಾದ್ ತನ್ನ ತಂಡದಲ್ಲಿ ಮೂರು ಬದಲಾವಣೆ ಮಾಡಿಕೊಂಡಿತು. ಆರಂಭಿಕ ಆಟಗಾರ ಜಾನಿ ಬೇರ್‌ಸ್ಟೊ, ಪ್ರಿಯಂ ಗರ್ಗ್ ಮತ್ತು ಖಲೀಲ್ ಅಹ್ಮದ್ ಅವರನ್ನು ಕೈಬಿಟ್ಟು ವೃದ್ಧಿಮಾನ್ ಸಾಹಾ, ಕೇನ್ ವಿಲಿಯಮ್ಸನ್ ಮತ್ತು ಶಾಬಾಜ್ ನದೀಮ್ ಅವರಿಗೆ ಅವಕಾಶ ನೀಡಿತು. ಡೆಲ್ಲಿ ತನ್ನ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳಲಿಲ್ಲ. ಸ್ಕೋರ್ ಪಟ್ಟಿ
ಹೈದರಾಬಾದ್
ಡೇವಿಡ್ ವಾರ್ನರ್ ಸಿ ಅಕ್ಷರ್ ಬಿ ಆರ್. ಅಶ್ವಿನ್ 66
ವೃದ್ಧಿಮಾನ್ ಸಾಹಾ ಸಿ ಅಯ್ಯರ್ ಬಿ ನೋರ್ಜೆ 87
ಮನೀಷ್ ಪಾಂಡೆ ಔಟಾಗದೆ 44
ಕೇನ್ ವಿಲಿಯಮ್ಸನ್ ಔಟಾಗದೆ 11 ಇತರ 11
ಒಟ್ಟು (20 ಓವರ್‌ಗಳಲ್ಲಿ 2ವಿಕೆಟ್‌ನಷ್ಟಕ್ಕೆ) 219
ವಿಕೆಟ್ ಪತನ: 1-107, 2-170. ಬೌಲಿಂಗ್:
ಅನ್ರಿಚ್ ನೋರ್ಜೆ 4-0-37-1
ಕಾಗಿಸೊ ರಬಾಡ 4-0-54-0
ಆರ್. ಅಶ್ವಿನ್ 3-0-35-1
ಅಕ್ಷರ್ ಪಟೇಲ್ 4-0-36-0
ತುಷಾರ್ ದೇಶ್‌ಪಾಂಡೆ 3-0-35-0
ಮಾರ್ಕಷ್ ಸ್ಟೋಯಿನಿಸ್ 2-0-15-0 ಡೆಲ್ಲಿ ಕ್ಯಾಪಿಟಲ್ಸ್
ರಹಾನೆ ಎಲ್‌ಬಿಡಬ್ಲ್ಯು ಬಿ ರಶೀದ್ 26
ಶಿಖರ್ ಧವನ್ ಸಿ ವಾರ್ನರ್ ಬಿ ಸಂದೀಪ್ 0
ಸ್ಟೋಯಿನಿಸ್ ಸಿ ವಾರ್ನರ್ ಬಿ ನದೀಮ್ 5
ಶಿಮ್ರಾನ್ ಹೆಟ್‌ಮೈರ್ ಬಿ ರಶೀದ್ 16
ರಿಷಭ್ ಪಂತ್ ಸಿ ಗೋಸ್ವಾಮಿ ಬಿ ಸಂದೀಪ್ 36
ಶ್ರೇಯಸ್ ಅಯ್ಯರ್ ಸಿ ವಿಲಿಯಮ್ಸನ್ ಬಿ ಶಂಕರ್ 7
ಅಕ್ಷರ್ ಪಟೇಲ್ ಸಿ ಗರ್ಗ್ ಬಿ ರಶೀದ್ 1
ಕಾಗಿಸೊ ರಬಾಡ ಬಿ ನಟರಾಜನ್ 3
ಆರ್. ಅಶ್ವಿನ್ ಸಿ ಸಮದ್ ಬಿ ಹೋಲ್ಡರ್ 7
ದೇಶ್‌ಪಾಂಡೆ ಔಟಾಗದೆ 20
ಅನಿಚ್ ನೋರ್ಜೆ ಸಿ ಗರ್ಗ್ ಬಿ ನಟರಾಜನ್ 1 ಇತರ 9
ಒಟ್ಟು (19 ಓವರ್‌ಗಳಲ್ಲಿ ಆಲೌಟ್) 131
ವಿಕೆಟ್ ಪತನ: 1-1, 2-14, 3-54, 4-55, 5-78, 6-83, 7-103, 8-103, 9-125. ಬೌಲಿಂಗ್
ಸಂದೀಪ್ ಶರ್ಮ 4-0-27-2
ಶಾಬಾಜ್ ನದೀಮ್ 1-0-8-1
ಜಾಸನ್ ಹೋಲ್ಡರ್ 4-0-46-1
ರಶೀದ್ ಖಾನ್ 4-0-7-3
ಟಿ. ನಟರಾಜನ್ 4-0-26-2
ವಿಜಯ್ ಶಂಕರ್ 1.5-0-11-1
ಡೇವಿಡ್ ವಾರ್ನರ್ 0.1-0-2-0