Advertisement

ಕರಾವಳಿ ನೆನಪಿಡುವ ಯೋಜನೆ: ಸುನಿಲ್‌ ಭರವಸೆ

02:05 AM Mar 11, 2022 | Team Udayavani |

ಕಾರ್ಕಳ: ಇಂಧನ, ಕನ್ನಡಮತ್ತು ಸಂಸ್ಕೃತಿ ಇಲಾಖೆಗಳ ಜವಾಬ್ದಾರಿ ನನ್ನ ಹೆಗಲೇರಿದ ಬಳಿಕ ಕರಾವಳಿ ಜಿಲ್ಲೆಯ ಜನ ಬಹುಕಾಲ ನೆನಪಿಡುವಂ ತಹ ಶಾಶ್ವತ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಕಾರ್ಕಳದಲ್ಲಿ 6ನೇ ರಂಗಾಯಣ ಸ್ಥಾಪನೆ ಮೂಲಕ ಅದಕ್ಕೆ ಚಾಲನೆ ನೀಡಿದ್ದೇವೆ ಎಂದು ಸಚಿವ ವಿ. ಸುನಿಲ್‌ ಕುಮಾರ್‌ ಹೇಳಿದರು.

Advertisement

ರಾಜ್ಯದ 6ನೇ ರಂಗಾಯಣ ಕೇಂದ್ರಯಕ್ಷರಂಗಾಯಣ ಕೇಂದ್ರಕ್ಕೆ ಭೂಮಿ ಪೂಜೆ, ಕೋಟಿಚೆನ್ನಯ ಥೀಂ ಪಾರ್ಕ್‌ನ
ವಿವಿಧ ಅಭಿವೃದ್ಧಿ ಕಾಮಗಾರಿ, ಹೆಲಿ ಕಾಪ್ಟರ್‌ ವಿಹಾರದ ಉದ್ಘಾಟನೆ ನೆರವೇ ರಿಸಿ ಅವರು ಮಾತನಾಡಿದರು.
ರಂಗಕಲೆ, ರಂಗಭೂಮಿ, ಯಕ್ಷಗಾನ ಚಟುವಟಿಕೆಗಳಿಗೆ ಸಂಬಂಧಿಸಿ ಯಕ್ಷ ರಂಗಾಯಣ ಕೇಂದ್ರವನ್ನು ಎರಡೂ ಜಿಲ್ಲೆಗಳಿಗೆ ಕೇಂದ್ರವಾಗಿಸುವ ಕಲ್ಪನೆ ಯೊಂದಿಗೆ ಸ್ಥಾಪನೆಯಾಗುತ್ತಿದೆ. ಕಾರ್ಕಳವನ್ನು ಪ್ರವಾಸಿ ಕೇಂದ್ರವಾಗಿ ಆಕರ್ಷಿಸುವ ನಿಟ್ಟಿನಲ್ಲಿಯೂ ಇದು ಸಹಕಾರಿಯಾಗಲಿದೆ.

ಕಾರ್ಕಳ ಉತ್ಸವದ ಸಂದರ್ಭದಲ್ಲೇ ಇದು ಸಾಧ್ಯವಾಗಿರುವುದು ಅತ್ಯಂತ ಖುಷಿ ನೀಡಿದೆ. ತುಳುನಾಡಿನ ಸಂಸ್ಕೃತಿಯ ವಿವಿಧ ಪ್ರಕಾರಗಳನ್ನು ಜೋಡಿಸುವ ಪ್ರಯತ್ನ ನಡೆದಿದೆ. ಕ್ಯಾಂಟಿನ್‌, ಆಡಿಟೋರಿಯಂ ಇತ್ಯಾದಿ ಒಳಗೊಂಡ ಸಂಪೂರ್ಣ ಚಿತ್ರಣದ ಥೀಂ ಪಾರ್ಕ್‌ ನಿರ್ಮಾಣ ಆಗಲಿದೆ ಎಂದು ತಿಳಿಸಿದರು.

ಆಳ್ವಾಸ್‌ ಮೂಡುಬಿದಿರೆಯ ರಂಗನಿರ್ದೇಶಕ ಜೀವನ್‌ ರಾಂ ಸುಳ್ಯ ಮಾತನಾಡಿ, ಡಾ| ಶಿವರಾಮ ಕಾರಂತ, ರಂಗ ಭೀಷ್ಮ ಬಿ.ವಿ. ಕಾರಂತರ ಕನಸಿನ ಕೂಸು ಯಕ್ಷರಂಗಾಯಣ ಕೇಂದ್ರ 30 ವರ್ಷಗಳ ಬಳಿಕ ನನಸಾಗುತ್ತಿದೆ. ಯಕ್ಷಗಾನ ಮತ್ತು ರಂಗಭೂಮಿ ಎರಡು ಮೇಳೈಸುವಂತಹ ಹೊಸ ಪ್ರಯೋಗಗಳಿಗೆ ರಂಗಾಯಣ ಕೇಂದ್ರ ಕಾರಣವಾಗಲಿದೆ ಎಂದರು.

ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿ.ಪಂ. ಸಿಇಒ ನವೀನ್‌ ಭಟ್‌, ಪುರಸಭೆ ಅಧ್ಯಕ್ಷೆ ಸುಮಾ ಕೇಶವ, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಣಿರಾಜ್‌ ಶೆಟ್ಟಿ, ಹವ್ಯಾಸಿ ಯಕ್ಷಗಾನ ಕಲಾವಿದ ರಘುನಾಥ ನಾಯಕ್‌, ಕನ್ನಡ ಸಂಸ್ಕೃತಿ ಇಲಾಖೆಯ ಪ್ರಕಾಶ್‌ ನಿಟ್ಟಾಳಿ ಉಪಸ್ಥಿತರಿದ್ದರು. ರವೀಂದ್ರ ಸ್ವಾಗತಿಸಿ, ಹರೀಶ್‌ ನಾಯಕ್‌ ನಿರೂಪಿಸಿದರು.

Advertisement

ಯಕ್ಷಗಾನ ಪಠ್ಯದಲ್ಲಿ
ಸೇರ್ಪಡೆಯಾಗಲಿ
ನಿವೃತ್ತ ಪ್ರಾಂಶುಪಾಲ ಪ್ರೊ| ಪದ್ಮನಾಭ ಗೌಡ ಮಾತನಾಡಿ, ಯಕ್ಷಗಾನ ಉಸಿರು ಮತ್ತು ಅನ್ನವೂ ಆಗಿದೆ. ಬದಲಾವಣೆಗೆ ಒಗ್ಗಿಕೊಳ್ಳುತ್ತಿ ರುವ ಯಕ್ಷಗಾನವನ್ನು ಪಠ್ಯದಲ್ಲಿ ಸೇರ್ಪಡೆಗೊಳಿಸಬೇಕು ಮತ್ತು ಡಿಜಿಟಲ್‌ ದಾಖಲೀಕರಣವಾಗಬೇಕು ಎಂದು ಅಭಿಪ್ರಾಯಪಟ್ಟರು.

ಬಾನಂಗಳಲ್ಲಿ ಹಾರಾಡಿದ ಪೌರ ಕಾರ್ಮಿಕರು!
ಕಾರ್ಕಳ ಉತ್ಸವದಂಗವಾಗಿ ಹೆಲಿಕಾಪ್ಟರ್‌ ವಿಹಾರಕ್ಕೆ ಚಾಲನೆ ನೀಡಲಾ ಯಿತು. ಹಿರಿಯರಾದ ಪ್ರಭಾಕರ ಕಾಮತ್‌ ಉದ್ಘಾಟಿಸಿದರು. ಪುರಸಭೆಯ ಹಿರಿಯ ಪೌರ ಕಾರ್ಮಿಕರಾದ ರಾಘು, ಬೊಗ್ಗು, ಗೋವಿಂದ, ಆನಂದ, ಗುರುರಾಜ್‌ ಅವರ‌ನ್ನು ಸಚಿವ ಸುನಿಲ್‌ ಕುಮಾರ್‌ ತಮ್ಮೊಂದಿಗೆ ಹೆಲಿಕಾಪ್ಟರ್‌ ನಲ್ಲಿ ಸಿಟಿ ರೌಂಡ್ಸ್‌ ಹಾಕಿಸಿದರು. ಖುಷಿ ಹಂಚಿಕೊಂಡ ಪೌರ ಕಾರ್ಮಿಕರು ಯಾವ ಪುಣ್ಯ ಮಾಡಿದ್ದೇವೋ ಗೊತ್ತಿಲ್ಲ. ಸ‌ಚಿವರ ಜತೆ ಬಾನಲ್ಲಿ ಹಾರಾಡುವು ದೆಂದರೆ ಅಬ್ಟಾ! ಎಂದು ಉದ್ಗರಿಸಿದರು.

ಹೆಲಿಕಾಪ್ಟರ್‌ ಮೂಲಕ ಪುಷ್ಪವೃಷ್ಟಿ!
ಶಿವಪ್ರಸಾದ್‌ ಶೆಟ್ಟಿ ಅಜೆಕಾರು ಅವರ ಭಾಗವತಿಕೆ ಮೂಲಕ ಕಾರ್ಯಕ್ರಮ ಆರಂಭಗೊಂಡಿತು. ಯಕ್ಷರಂಗಾಯಣ ಕೇಂದ್ರದ ಭೂಮಿಪೂಜೆ ವೇಳೆ ಹೆಲಿಕಾಪ್ಟರ್‌ ಮೂಲಕ ಪುಷ್ಪವೃಷ್ಟಿ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸೇರಿದವರು ಪುಳಕಿತರಾದರು.

ಕಾರ್ಕಳ ಉತ್ಸವಕ್ಕೆ ಚಾಲನೆ
ಕಾರ್ಕಳ ಉತ್ಸವಕ್ಕೆ 2022ಕ್ಕೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಎಸ್‌. ಅಂಗಾರ ದೀಪ ಬೆಳಗಿ, ನಗಾರಿ ಬಾರಿಸಿ ಚಾಲನೆ ನೀಡಿದರು. ಸಚಿವ ವಿ. ಸುನಿಲ್‌ ಕುಮಾರ್‌ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿ ಕೂರ್ಮಾ ರಾವ್‌, ಎಸ್‌ಪಿ ವಿಷ್ಣುವರ್ಧನ ಸಹಿತ ಅನೇಕ ಗಣ್ಯರು ವೇದಿಕೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next