Advertisement

ಸುನೀಲ್‌ ಚೇಟ್ರಿ, ಮನೀಷಾ ವರ್ಷದ ಶ್ರೇಷ್ಠ ಫುಟ್ಬಾಲರ್‌

10:07 PM Aug 09, 2022 | Team Udayavani |

ಹೊಸದಿಲ್ಲಿ: 2021-22ರ ಋತುವಿಗೆ ಎಐಎಫ್ಎಫ್ ವರ್ಷದ ಶ್ರೇಷ್ಠ ಫುಟ್ಬಾಲರ್‌ ಪ್ರಶಸ್ತಿಗೆ ನಾಯಕ ಸುನೀಲ್‌ ಚೇಟ್ರಿ ಮತ್ತು ವನಿತೆಯರ ವಿಭಾಗದಲ್ಲಿ ಮನೀಷಾ ಕಲ್ಯಾಣ್‌ ಅವರನ್ನು ಹೆಸರಿಸಲಾಗಿದೆ. ಚೇಟ್ರಿ ಸತತ ಏಳನೇ ಬಾರಿ ಈ ಪ್ರಶಸ್ತಿಗೆ ಆಯ್ಕೆಯಾಗಿದ್ದರೆ ಮನೀಷಾ ಕಲ್ಯಾಣ್‌ ಚೊಚ್ಚಲ ಬಾರಿ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.

Advertisement

ಚೇಟ್ರಿ ಮತ್ತು ಮನೀಷಾ ಅವರ ಹೆಸರನ್ನು ರಾಷ್ಟ್ರೀಯ ತಂಡದ ಕೋಚ್‌ಗಳಾದ ಐಗರ್‌ ಸ್ಟಿಮಾಕ್‌ ಮತ್ತು ಥಾಮಸ್‌ ಡೆನ್ನಾರ್‌ಬೈ ಅವರು ಶಿಫಾರಸು ಮಾಡಿದ್ದರು.

ಸಕ್ರಿಯ ಅಂತಾರಾಷ್ಟ್ರೀಯ ಆಟಗಾರರಲ್ಲಿ ಮೂರನೇ ಅತಿ ಹೆಚ್ಚು ಗೋಲ್‌ ಸ್ಕೋರರ್‌ ಆಗಿರುವ ಚೇಟ್ರಿ ಅವರನ್ನು 2007ರಲ್ಲಿ ಮೊದಲ ಬಾರಿಗೆ ಈ ಪ್ರಶಸ್ತಿಗೆ ಹೆಸರಿಸಲಾಯಿತು. ಅನಂತರ 2011, 2013, 2014, 2017, 2018-19ರ ಋತುವಿನಲ್ಲಿ ಅವರು ಈ ಪ್ರಶಸ್ತಿಯನ್ನು ಜಯಿಸಿದ್ದರು.

“ಸುನೀಲ್‌ ಭಾರತ ಪರ ಅತ್ಯಧಿಕ ಗೋಲು ದಾಖಲಿಸಿದ ಸಾಧಕರಾಗಿದ್ದಾರೆ. ಕಳೆದ ಸ್ಯಾಫ್ ಕಪ್‌ನಲ್ಲಿ 5 ಗೋಲುಗಳನ್ನು ಗಳಿಸಿದರಲ್ಲದೇ ಕೂಟದ ಶ್ರೇಷ್ಠ ಆಟಗಾರರಾಗಿಯೂ ಮೂಡಿ ಬಂದಿದ್ದರು ಎಂದು ಸ್ಟಿಮಾಕ್‌ ಹೇಳಿದರು.

2020-21ರ ಋತುವಿನಲ್ಲಿ ಉದಯೋನ್ಮುಖ ವರ್ಷದ ಫುಟ್ಬಾಲರ್‌ ಪ್ರಶಸ್ತಿಗೆ ಪಾತ್ರರಾಗಿದ್ದ ಮನೀಷಾ ರಾಷ್ಟ್ರೀಯ ತಂಡದ ಪರ ಅತ್ಯಮೋಘ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ. ಭವಿಷ್ಯದಲ್ಲಿ ದೊಡ್ಡ ಲೀಗ್‌ಗಳಲ್ಲಿ ಆಡುವಂತ ಸಾಮರ್ಥ್ಯ ಹೊಂದಿದ್ದಾರೆ. ಯುವ ಆಟಗಾರ್ತಿಯಾಗಿರುವ ಅವರು ನಮ್ಮ ಶ್ರೇಷ್ಠ ನಿರ್ವಹಣೆ ನೀಡುತ್ತಿದ್ದಾರೆ ಎಂದು ಡೆನ್ನಾರ್‌ಬೈ ಹೇಳಿದ್ದಾರೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next