Advertisement

ಸುನೀಲ್‌ ಚೆಟ್ರಿ  ವರ್ಷದ ಫ‌ುಟ್ಬಾಲಿಗ

01:01 PM Jul 23, 2018 | |

ಹೊಸದಿಲ್ಲಿ: 2017ರ ಅಖೀಲ ಭಾರತ ಫ‌ುಟ್‌ಬಾಲ್‌ ಫೆಡರೇಶನ್‌ (ಎಐಎಫ್ಎಫ್) ಪ್ರಶಸ್ತಿಗಳನ್ನು ಘೋಷಿಸಲಾಗಿದೆ. ಸ್ಫೂರ್ತಿ ದಾಯಕ ನಾಯಕ ಸುನೀಲ್‌ ಚೆಟ್ರಿ ಮತ್ತು ಕಮಲಾದೇವಿ ಅವರು ಕ್ರಮವಾಗಿ ವರ್ಷದ ಪುರುಷರ ಹಾಗೂ ಮಹಿಳಾ ವಿಭಾಗದ ಶ್ರೇಷ್ಠ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ.

Advertisement

ಸುನೀಲ್‌ ಚೆಟ್ರಿ ಇತ್ತೀಚಿಗಷ್ಟೇ ಭಾರತ ಪರ 100 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ ಭಾರತದ ಕೇವಲ 2ನೇ ಆಟಗಾರನಾಗಿ ಮೂಡಿಬಂದಿದ್ದರು. ಅವರು ಭಾರತ ಹಾಗೂ ಬೆಂಗಳೂರು ಎಫ್ಸಿ ತಂಡದ ಪ್ರಮುಖ ಸ್ಟ್ರೈಕರ್‌ ಆಗಿ ಗಮನ ಸೆಳೆದಿದ್ದಾರೆ.
ಉದಯೋನ್ಮುಖ ಫ‌ುಟ್ಬಾಲಿಗ ಪ್ರಶಸ್ತಿ ಅನಿರುದ್ಧ್ ಥಾಪಾ ಪಾಲಾಗಿದೆ. 4 ರಾಷ್ಟ್ರಗಳ “ಇಂಟರ್‌ಕಾಂಟಿನೆಂಟಲ್‌ ಕಪ್‌’ ಪಂದ್ಯಾವಳಿಯಲ್ಲಿ ಭಾರತವನ್ನು ಚಾಂಪಿಯನ್‌ ಪಟ್ಟಕ್ಕೇರಿಸುವಲ್ಲಿ ಥಾಪಾ ಪಾತ್ರ ಮಹತ್ವದ್ದಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next