Advertisement

ಭಾನುವಾರ ಮಳೆಯ ಸಿಂಚನ

12:30 AM Jul 22, 2019 | Team Udayavani |

ಬೆಂಗಳೂರು: ನಗರದಲ್ಲಿ ಭಾನುವಾರವೂ ಮಳೆ ಮುಂದುವರಿದಿದೆ. ಭಾನುವಾರ ಮಧ್ಯಾಹ್ನದಿಂದ ಸಾಧಾರಣ ಮಳೆ ಸುರಿದಿದ್ದು, ಸಂಜೆ ಆರ್‌.ಆರ್‌ ನಗರ, ಮಹದೇವಪುರ, ಕೆ.ಆರ್‌.ಪುರ, ಮಾರತ್ತಹಳ್ಳಿ, ಕೋರಮಂಗಲ, ಕೆಂಗೇರಿ ಮತ್ತು ಬೊಮ್ಮನಹಳ್ಳಿ ಸೇರಿದಂತೆ ಹಲವೆಡೆ ಅರ್ಧ ಗಂಟೆಗೂ ಹೆಚ್ಚು ಕಾಲ ಸಾಧಾರಣ ಮಳೆಯಾದ ಪರಿಣಾಮ ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ ದಟ್ಟಣೆ ಉಂಟಾಗಿತ್ತು. ಮಳೆಯಿಂದ ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ಪಾಲಿಕೆಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

Advertisement

ಎಲ್ಲೆಲ್ಲಿ ಎಷ್ಟೆಷ್ಟು ಮಳೆ: ಕೋರಮಂಗಲ 12.5 ಮಿ.ಮೀ, ಬೊಮ್ಮನಹಳ್ಳಿ 5.5 ಮಿ.ಮೀ, ಎಚ್‌ಎಸ್‌ಆರ್‌ ಲೇಔಟ್‌ 11.5 ಮಿ.ಮೀ, ಸಾರಕ್ಕಿ 7ಮಿ.ಮೀ, ಕೆಂಗೇರಿ 8.5 ಮಿ.ಮೀ,ರಾಮೋಹಳ್ಳಿ 8.5 ಮಿ.ಮೀ, ಆರ್‌ಆರ್‌ ನಗರ 10 ಮಿ.ಮೀ, ರಾಜರಾಜೇಶ್ವರಿ ನಗರ 10 ಮಿ.ಮೀ, ವಿಶ್ವೇಶ್ವರ ಪುರಂ 10 ಮಿ.ಮೀ, ವಿದ್ಯಾಪೀಠ 9 ಮಿ.ಮೀ, ಪಟ್ಟಾಭಿರಾಮನಗರ 6.5 ಮಿ.ಮೀ, ಚಿಕ್ಕಬಾಣವಾರ 3.5, ಮಿ.ಮೀ, ದೊರೆಸಾನಿ ಪಾಳ್ಯ 4.5 ಮಿ.ಮೀ, ಗುತ್ತಿಗೆರೆ 6.5 ಮಿ.ಮೀ, ಉತ್ತರಹಳ್ಳಿ 5 ಮಿ.ಮೀ, ಕಣ್ಣೂರು 10 ಮಿ.ಮೀ, ಹೂಡಿ 8 ಮಿ.ಮೀ, ಗರುಡಾಚಾರಪಾಳ್ಯ 9 ಮಿ.ಮೀ, ರಾಧಾಕೃಷ್ಣ ವಾರ್ಡ್‌ 9 ಮಿ.ಮೀ , ದೊಡ್ಡನೆಕ್ಕುಂದಿ 5.5 ಮಿ.ಮೀ, ಮಾರತ್ತಹಳ್ಳಿ 5.5 ಮಿ.ಮೀ, ಸೋಮಶೆಟ್ಟಿಹಳ್ಳಿ 4.5 ಮಿ.ಮೀ, ಮಾರುತಿ ಮಂದಿರ 4 ಮಿ.ಮೀ, ಯಲಹಂಕ, ದೊಡ್ಡಬೊಮ್ಮಸಂದ್ರ 2.5 , ಜಕ್ಕೂರು 9.5 ಮಿ.ಮೀ ಹಾಗೂ ಬ್ಯಾಟರಾಯನಪುರದಲ್ಲಿ 5.5 ಮಿ.ಮೀ ಮಳೆಯಾಗಿದ್ದು, ನಗರದ ಹಲವೆಡೆ ತುಂತುರು ಮಳೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next