Advertisement

ಹುಣಸೂರು: ಲಾಕ್ ಡೌನ್ ಇದ್ದರೂ ಮೂಕನಹಳ್ಳಿ ಗೇಟ್ ನಲ್ಲಿ ಮಾಂಸ ಮಾರಾಟ, ಮುಗಿಬಿದ್ದ ಜನ !

12:34 PM Jul 19, 2020 | Mithun PG |

ಹುಣಸೂರು: ರಾಜ್ಯಾದ್ಯಂತ ಭಾನುವಾರ ಲಾಕ್ ಡೌನ್ ಇದ್ದರೂ ಹುಣಸೂರು ನಗರ ಸೇರಿದಂತೆ ನಗರಕ್ಕೆ ಸಮೀಪದ ಹೆದ್ದಾರಿಯಲ್ಲಿರುವ ಮೂಕನಹಳ್ಳಿ ಗೇಟ್ ನಲ್ಲಿ ಮಾತ್ರ ಮಾಂಸ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದ್ದು, ಜನ ಮುಗಿಬಿದ್ದು ಖರೀದಿಸುತ್ತಿದ್ದಾರೆ.

Advertisement

ಮೂಕನಹಳ್ಳಿ ಗೇಟ್, ಮೈಸೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಜೊತೆಗೆ ನಗರಕ್ಕೆ ಸಮೀಪವೇ ಇರುವುದರಿಂದ  ನಗರದೊಳಗಿನ ಮಾಂಸದ ಅಂಗಡಿಗಳು ಲಾಕ್ ಡೌನ್  ನಿಂದ ಮುಚ್ಚಿರುವುದರಿಂದ ಹೆದ್ದಾರಿಯಲ್ಲಿ ತೆರಳುವ ವಾಹನ ಸವಾರರು ಜೊತೆಗೆ ನಗರ ವಾಸಿಗಳು ಮಾಂಸ ಖರೀದಿಗೆ ಮುಗಿಬಿದ್ದಿದ್ದಾರೆ.

ತಾಲೂಕಿನಲ್ಲಿ ದಿನೇದಿನೇ ಕೋವಿಡ್ ಸೊಂಕಿತ ಪ್ರಕರಣಗಳು ಹೆಚ್ಚುತ್ತಿದ್ದರೂ ಎಚ್ಚೆತ್ತುಕೊಳ್ಳದ ಜನರು. ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಅಂಗಡಿ ಮುಂದೆ ನಿಂತು ಮಾಂಸ ಖರೀದಿಸುವ ದೃಶ್ಯ ಸಾಮಾನ್ಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next