Advertisement
ಸುಂದರ ಲಾಲ್ ಬಹುಗುಣ ಅವರು ಹುಟ್ಟಿದ್ದು ಹಿಮಾಲಯದ ತಪ್ಪಲಿನಲ್ಲಿ. ದೇವಭೂಮಿ ಎಂದೇ ಪ್ರಸಿದ್ಧವಾದ ಈಗಿನ ಉತ್ತರಾಖಂಡ (ಆಗಿನ ಉತ್ತರ ಪ್ರದೇಶ)ರಾಜ್ಯದ ಮರೋಡ ಎಂಬ ಪುಟ್ಟಹಳ್ಳಿ ಅವರ ಊರು. ತಮ್ಮ 13ನೇ ವಯಸ್ಸಿಗೆ ಅಸ್ಪೃಶ್ಯತೆ ನಿವಾರಣೆ ಹಾಗೂ ಮದ್ಯವಿರೋಧದಂತಹ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯ ಪಾತ್ರ ವಹಿಸಿದ್ದರು. ಸ್ವಾತಂತ್ರ್ಯ ಹೋರಾಟಗಳಲ್ಲೂ ಭಾಗವಹಿಸಿದ್ದ ಬಹುಗುಣ ಅವರು ಮಹಾತ್ಮಾ ಗಾಂಧೀಜಿಯವರ ಅಹಿಂಸಾತ್ಮಕ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದರು.
Related Articles
Advertisement
ಪಾದಯಾತ್ರೆ, ಸತ್ಯಾಗ್ರಹವೇ ಅಸ್ತ್ರ :
ಪರಿಸರ ಸಂರಕ್ಷಣೆಗಾಗಿ ಬಹುಗುಣರು ಪಾದಯಾತ್ರೆ, ಉಪವಾಸ ಸತ್ಯಾಗ್ರಹಕ್ಕೆ ಮುಂದಾದರು. 1980ರಲ್ಲಿ ಚಿಪ್ಕೋ ಚಳವಳಿ ಪ್ರಯುಕ್ತ ಹಿಮಾಲಯ ಪ್ರದೇಶದಲ್ಲಿ ಬರೋಬ್ಬರಿ 4,800 ಕಿ.ಮೀ. ಪಾದಯಾತ್ರೆ ಮಾಡಿದರು. ಇದೊಂದು ಐತಿಹಾಸಿಕ ಪಾದಯಾತ್ರೆಯಾಯಿತು. ಇದರ ಪರಿಣಾಮ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಹಿಮಾಲಯ ಭಾಗದಲ್ಲಿ ಮುಂದಿನ 15 ವರ್ಷಗಳ ಕಾಲ ಮರ ಕಡಿಯದಂತೆ ಆದೇಶ ಹೊರಡಿಸಿದರು.
ಉತ್ತರಖಂಡದ ತೆಹ್ರಿ ಅಣೆಕಟ್ಟು ಯೋಜನೆಯ ವಿರುದ್ಧ ಅವರು 1995ರಲ್ಲಿ 45 ದಿನಗಳ ಉಪವಾಸ ಸತ್ಯಾಗ್ರಹ ನಡೆಸಿದರು. ಪರಿಶೀಲನ ಸಮಿತಿ ರಚಿಸುವುದಾಗಿ ಅಂದಿನ ಪ್ರಧಾನಿ ಪಿ.ವಿ. ನರಸಿಂಹ ರಾವ್ ಕೊಟ್ಟ ಭರವಸೆ ಮೇರೆಗೆ ಉಪವಾಸ ಸತ್ಯಾಗ್ರಹ ತ್ಯಜಿಸಿದರು. ಅನಂತರ ರಾಜ್ ಘಾಟ್‌ನ ಗಾಂಧೀಜಿ ಅವರ ಸಮಾಧಿಯಲ್ಲಿ ಬರೋಬ್ಬರಿ 74 ದಿನಗಳ ಉಪವಾಸ ಸತ್ಯಾಗ್ರಹ ಕೈಗೊಂಡರು. ಅಂದಿನ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಭರವಸೆ ಮೇರೆಗೆ ಉಪವಾಸ ತ್ಯಜಿಸಿದರು. ಅನಂತರವೂ ಅಣೆಕಟ್ಟು ನಿರ್ಮಾಣ ಕೆಲಸ ಮುಂದುವರಿದ ಪರಿಣಾಮ ನದಿಯ ತಟದಲ್ಲೇ ಸತ್ಯಾಗ್ರಹ ಕೂತು ಜಲಸಮಾಧಿಯಾಗಲೂ ಸಿದ್ಧರಾಗಿದ್ದ ಅವರನ್ನು ಹಾಗೂ ಅವರ ಪತ್ನಿಯನ್ನು ಬಲ ಪ್ರಯೋಗಿಸಿ ಅಲ್ಲಿಂದ ತೆರವುಗೊಳಿಸಲಾಯಿತು.
ಅಧ್ಯಾತ್ಮದೊಟ್ಟಿಗೆ ವಿಜ್ಞಾನ ಮೇಳವಿಸೆ…
“ವಿಜ್ಞಾನದೊಟ್ಟಿಗೆ ಅಧ್ಯಾತ್ಮ ಸೇರಿದರೆ ಅದು ಸರ್ವೋದಯ, ವಿಜ್ಞಾನದೊಟ್ಟಿಗೆ ರಾಜಕೀಯ ಬೆರೆತರೆ ಅದು ಆಟಂ ಬಾಂಬ್‌ನಂತೆ ದುರಂತ’ ಎಂಬ ವಿನೋಭಾ ಭಾವೆ ಅವರ ಚಿಂತನೆಯನ್ನು ಬಹುಗುಣರು ಪ್ರಬಲವಾಗಿ ಪ್ರತಿಪಾದಿಸುತ್ತಿದ್ದರು. ಪ್ರತಿಯೊಂದು ಜೀವಿಯಲ್ಲೂ ಪರಮಾತ್ಮನನ್ನು ಕಾಣುವುದೇ ಅಧ್ಯಾತ್ಮ ಎಂದು ನಂಬಿದ್ದ ಅವರು ತಾವು ನಡೆಸುವ ಪರಿಸರ ಸಂಬಂಧಿತ ಹೋರಾಟಗಳೂ ಕೂಡ ಈ ತಣ್ತೀದ ಆಧಾರದ ಮೇಲಿದೆ ಎನ್ನುತ್ತಿದ್ದರು.
ಯುವಜನತೆಯೇ ಆಶಾಕಿರಣ :
ಯುವಜನಾಂಗದ ಮೇಲೇ ಬಹುಗುಣರು ಅಪಾರ ವಿಶ್ವಾಸವನ್ನಿಟ್ಟಿದ್ದರು. ನಮ್ಮ ಚಿಂತನೆಗಳನ್ನು ಯುವಕರ ಮುಂದಿಟ್ಟರೆ ಖಂಡಿತವಾಗಿಯೂ ಒಪ್ಪಿಕೊಂಡು ಅದನ್ನು ಮುಂದಕ್ಕೆ ಕೊಂಡೊಯ್ಯುತ್ತಾರೆ ಎಂದು ದೃಢವಾಗಿ ನಂಬಿದ್ದರು. ಹೀಗಾಗಿ ಯುವಜನಾಂಗದೊಂದಿಗಿನ ಸಂವಹನದ ಅವಕಾಶವನ್ನು ಅವರೆಂದೂ ತಪ್ಪಿಸಿಕೊಳ್ಳುತ್ತಿರಲಿಲ್ಲ. ಹಿರಿಯರ ಹೆಗಲ ಮೇಲೆ ಕೂತ ಹುಡುಗ ದೂರದಲ್ಲಿರುವುದನ್ನು ಕಾಣುವಂತೆ ಯುವಕರು ನಮಗಿಂತ ಹೆಚ್ಚಿನ ದೂರದೃಷ್ಟಿ ಹೊಂದಿದವರಾಗಿರುತ್ತಾರೆ ಹಾಗಾಗಿ ಅವರಲ್ಲಿಗೆ ನಮ್ಮ ಚಿಂತನೆಗಳನ್ನು ಮುಟ್ಟಿಸಬೇಕು ಎಂಬುದು ಅವರ ನಿಲುವು. ಆತ್ಮಸಂತೋಷವೇ ಅಭಿವೃದ್ಧಿ ಮಾದರಿ ಪ್ರಾಪಂಚಿಕ ಕೇಂದ್ರಿತ ಅಥವಾ ಆರ್ಥಿಕತೆ ಆಧಾರಿತ ಅಭಿವೃದ್ಧಿಗಳು ನಮ್ಮನ್ನು ಇನ್ನಷ್ಟು ಆಸೆಬುರುಕರನ್ನಾಗಿ ಮಾಡುತ್ತವೆ.
ಆಸೆಗಳನ್ನು ಈಡೇರಿಸಿಕೊಳ್ಳಲು ಪ್ರಕೃತಿಯ ಮೇಲೆ ನಿರಂತರವಾಗಿ ಶೋಷಣೆ ಮಾಡುತ್ತೇವೆ. ಹೀಗಾಗಿ ಪ್ರಕೃತಿಯ ಭಕ್ಷಕರಾಗುತ್ತೇವೆ. ಪ್ರಕೃತಿ ಕೊಟ್ಟಷ್ಟರಲ್ಲಿಯೇ ನೆಮ್ಮದಿ ಕಾಣುತ್ತ ಪ್ರತೀ ವ್ಯಕ್ತಿಯೂ ಸದಾ ಶಾಂತಿ, ಸಂತೋಷ, ಸಂತೃಪ್ತಿಯಿಂದ ಬದುಕನ್ನು ನಡೆಸುವುದೇ ಅಭಿವೃದ್ಧಿಯ ಮಾನದಂಡವಾದರೆ ಆಗ ಪ್ರಕೃತಿಯೊಟ್ಟಿಗೆ ಸಾಮರಸ್ಯದಿಂದ ಬದುಕುವುದನ್ನು ರೂಢಿಸಿಕೊಳ್ಳುತ್ತೇವೆ ಎಂಬುದು ಬಹುಗುಣರು ಪ್ರತಿಪಾದಿಸುತ್ತಿದ್ದ ಅಭಿವೃದ್ಧಿ ಮಾದರಿ.
ಸ್ವಾತಂತ್ರ್ಯ ಅನಂತರ ಅಧಿಕಾರ ಹಿಡಿದ ಗಾಂಧೀಜಿ ಅನುಯಾಯಿಗಳು ಹಾಗೂ ಇತರ ನಾಯಕರು ಗಾಂಧೀ ಚಿಂತನೆಗಳಿಗೆ ತದ್ವಿರುದ್ಧವಾಗಿರುವ ಪಾಶ್ಚಾತ್ಯ ರಾಷ್ಟ್ರಗಳ ಅಭಿವೃದ್ಧಿ ಮಾದರಿಗಳನ್ನು ಅನುಷ್ಠಾನ ಗೊಳಿಸಿದರ ಬಗ್ಗೆ ಬಹುಗುಣರು ತೀವ್ರ ಬೇಸರ ಹೊಂದಿದ್ದರು.
ಪಾದಯಾತ್ರೆ, ಸತ್ಯಾಗ್ರಹವೇ ಅಸ್ತ್ರ :
ಪರಿಸರ ಸಂರಕ್ಷಣೆಗಾಗಿ ಬಹುಗುಣರು ಪಾದಯಾತ್ರೆ, ಉಪವಾಸ ಸತ್ಯಾಗ್ರಹಕ್ಕೆ ಮುಂದಾದರು. 1980ರಲ್ಲಿ ಚಿಪ್ಕೋ ಚಳವಳಿ ಪ್ರಯುಕ್ತ ಹಿಮಾಲಯ ಪ್ರದೇಶದಲ್ಲಿ ಬರೋಬ್ಬರಿ 4,800 ಕಿ.ಮೀ. ಪಾದಯಾತ್ರೆ ಮಾಡಿದರು. ಇದೊಂದು ಐತಿಹಾಸಿಕ ಪಾದಯಾತ್ರೆಯಾಯಿತು. ಇದರ ಪರಿಣಾಮ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಹಿಮಾಲಯ ಭಾಗದಲ್ಲಿ ಮುಂದಿನ 15 ವರ್ಷಗಳ ಕಾಲ ಮರ ಕಡಿಯದಂತೆ ಆದೇಶ ಹೊರಡಿಸಿದರು.
ಉತ್ತರಖಂಡದ ತೆಹ್ರಿ ಅಣೆಕಟ್ಟು ಯೋಜನೆಯ ವಿರುದ್ಧ ಅವರು 1995ರಲ್ಲಿ 45 ದಿನಗಳ ಉಪವಾಸ ಸತ್ಯಾಗ್ರಹ ನಡೆಸಿದರು. ಪರಿಶೀಲನ ಸಮಿತಿ ರಚಿಸುವುದಾಗಿ ಅಂದಿನ ಪ್ರಧಾನಿ ಪಿ.ವಿ. ನರಸಿಂಹ ರಾವ್ ಕೊಟ್ಟ ಭರವಸೆ ಮೇರೆಗೆ ಉಪವಾಸ ಸತ್ಯಾಗ್ರಹ ತ್ಯಜಿಸಿದರು. ಅನಂತರ ರಾಜ್ ಘಾಟ್‌ನ ಗಾಂಧೀಜಿ ಅವರ ಸಮಾಧಿಯಲ್ಲಿ ಬರೋಬ್ಬರಿ 74 ದಿನಗಳ ಉಪವಾಸ ಸತ್ಯಾಗ್ರಹ ಕೈಗೊಂಡರು. ಅಂದಿನ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಭರವಸೆ ಮೇರೆಗೆ ಉಪವಾಸ ತ್ಯಜಿಸಿದರು. ಅನಂತರವೂ ಅಣೆಕಟ್ಟು ನಿರ್ಮಾಣ ಕೆಲಸ ಮುಂದುವರಿದ ಪರಿಣಾಮ ನದಿಯ ತಟದಲ್ಲೇ ಸತ್ಯಾಗ್ರಹ ಕೂತು ಜಲಸಮಾಧಿಯಾಗಲೂ ಸಿದ್ಧರಾಗಿದ್ದ ಅವರನ್ನು ಹಾಗೂ ಅವರ ಪತ್ನಿಯನ್ನು ಬಲ ಪ್ರಯೋಗಿಸಿ ಅಲ್ಲಿಂದ ತೆರವುಗೊಳಿಸಲಾಯಿತು.
ಅಧ್ಯಾತ್ಮದೊಟ್ಟಿಗೆ ವಿಜ್ಞಾನ ಮೇಳವಿಸೆ… :
“ವಿಜ್ಞಾನದೊಟ್ಟಿಗೆ ಅಧ್ಯಾತ್ಮ ಸೇರಿದರೆ ಅದು ಸರ್ವೋದಯ, ವಿಜ್ಞಾನದೊಟ್ಟಿಗೆ ರಾಜಕೀಯ ಬೆರೆತರೆ ಅದು ಆಟಂ ಬಾಂಬ್‌ನಂತೆ ದುರಂತ’ ಎಂಬ ವಿನೋಭಾ ಭಾವೆ ಅವರ ಚಿಂತನೆಯನ್ನು ಬಹುಗುಣರು ಪ್ರಬಲವಾಗಿ ಪ್ರತಿಪಾದಿಸುತ್ತಿದ್ದರು. ಪ್ರತಿಯೊಂದು ಜೀವಿಯಲ್ಲೂ ಪರಮಾತ್ಮನನ್ನು ಕಾಣುವುದೇ ಅಧ್ಯಾತ್ಮ ಎಂದು ನಂಬಿದ್ದ ಅವರು ತಾವು ನಡೆಸುವ ಪರಿಸರ ಸಂಬಂಧಿತ ಹೋರಾಟಗಳೂ ಕೂಡ ಈ ತಣ್ತೀದ ಆಧಾರದ ಮೇಲಿದೆ ಎನ್ನುತ್ತಿದ್ದರು.
ಯುವಜನತೆಯೇ ಆಶಾಕಿರಣ :
ಯುವಜನಾಂಗದ ಮೇಲೇ ಬಹುಗುಣರು ಅಪಾರ ವಿಶ್ವಾಸವನ್ನಿಟ್ಟಿದ್ದರು. ನಮ್ಮ ಚಿಂತನೆಗಳನ್ನು ಯುವಕರ ಮುಂದಿಟ್ಟರೆ ಖಂಡಿತವಾಗಿಯೂ ಒಪ್ಪಿಕೊಂಡು ಅದನ್ನು ಮುಂದಕ್ಕೆ ಕೊಂಡೊಯ್ಯುತ್ತಾರೆ ಎಂದು ದೃಢವಾಗಿ ನಂಬಿದ್ದರು. ಹೀಗಾಗಿ ಯುವಜನಾಂಗದೊಂದಿಗಿನ ಸಂವಹನದ ಅವಕಾಶವನ್ನು ಅವರೆಂದೂ ತಪ್ಪಿಸಿಕೊಳ್ಳುತ್ತಿರಲಿಲ್ಲ. ಹಿರಿಯರ ಹೆಗಲ ಮೇಲೆ ಕೂತ ಹುಡುಗ ದೂರದಲ್ಲಿರುವುದನ್ನು ಕಾಣುವಂತೆ ಯುವಕರು ನಮಗಿಂತ ಹೆಚ್ಚಿನ ದೂರದೃಷ್ಟಿ ಹೊಂದಿದವರಾಗಿರುತ್ತಾರೆ ಹಾಗಾಗಿ ಅವರಲ್ಲಿಗೆ ನಮ್ಮ ಚಿಂತನೆಗಳನ್ನು ಮುಟ್ಟಿಸಬೇಕು ಎಂಬುದು ಅವರ ನಿಲುವು. ಆತ್ಮಸಂತೋಷವೇ ಅಭಿವೃದ್ಧಿ ಮಾದರಿ
ಪ್ರಾಪಂಚಿಕ ಕೇಂದ್ರಿತ ಅಥವಾ ಆರ್ಥಿಕತೆ ಆಧಾರಿತ ಅಭಿವೃದ್ಧಿಗಳು ನಮ್ಮನ್ನು ಇನ್ನಷ್ಟು ಆಸೆಬುರುಕರನ್ನಾಗಿ ಮಾಡುತ್ತವೆ.
ಆಸೆಗಳನ್ನು ಈಡೇರಿಸಿಕೊಳ್ಳಲು ಪ್ರಕೃತಿಯ ಮೇಲೆ ನಿರಂತರವಾಗಿ ಶೋಷಣೆ ಮಾಡುತ್ತೇವೆ. ಹೀಗಾಗಿ ಪ್ರಕೃತಿಯ ಭಕ್ಷಕರಾಗುತ್ತೇವೆ. ಪ್ರಕೃತಿ ಕೊಟ್ಟಷ್ಟರಲ್ಲಿಯೇ ನೆಮ್ಮದಿ ಕಾಣುತ್ತ ಪ್ರತೀ ವ್ಯಕ್ತಿಯೂ ಸದಾ ಶಾಂತಿ, ಸಂತೋಷ, ಸಂತೃಪ್ತಿಯಿಂದ ಬದುಕನ್ನು ನಡೆಸುವುದೇ ಅಭಿವೃದ್ಧಿಯ ಮಾನದಂಡವಾದರೆ ಆಗ ಪ್ರಕೃತಿಯೊಟ್ಟಿಗೆ ಸಾಮರಸ್ಯದಿಂದ ಬದುಕುವುದನ್ನು ರೂಢಿಸಿಕೊಳ್ಳುತ್ತೇವೆ ಎಂಬುದು ಬಹುಗುಣರು ಪ್ರತಿಪಾದಿಸುತ್ತಿದ್ದ ಅಭಿವೃದ್ಧಿ ಮಾದರಿ.
ಸ್ವಾತಂತ್ರ್ಯ ಅನಂತರ ಅಧಿಕಾರ ಹಿಡಿದ ಗಾಂಧೀಜಿ ಅನುಯಾಯಿಗಳು ಹಾಗೂ ಇತರ ನಾಯಕರು ಗಾಂಧೀ ಚಿಂತನೆಗಳಿಗೆ ತದ್ವಿರುದ್ಧವಾಗಿರುವ ಪಾಶ್ಚಾತ್ಯ ರಾಷ್ಟ್ರಗಳ ಅಭಿವೃದ್ಧಿ ಮಾದರಿಗಳನ್ನು ಅನುಷ್ಠಾನ ಗೊಳಿಸಿದರ ಬಗ್ಗೆ ಬಹುಗುಣರು ತೀವ್ರ ಬೇಸರ ಹೊಂದಿದ್ದರು.
ಪ್ರಮುಖ ವಿಚಾರಧಾರೆಗಳು :
- ಪ್ರಕೃತಿಯಯನ್ನು ಹಣಕಾಸಿನ ವ್ಯವಹಾರದ ದೃಷ್ಟಿಯಲ್ಲಿ ನೋಡುವುದನ್ನು ವಿರೋಧಿಸುತ್ತಿದ್ದ ಅವರು ಚಿಪ್ಕೋ ಪಾದಯಾತ್ರೆ ಸಂದರ್ಭ ಮರಗಳಿಂದ ನಮಗೆ ಸಿಗುವ ಕೊಡುಗೆ ಏನು? ಗಾಳಿ, ಮಣ್ಣು, ನೀರು ಎಂಬ ಘೋಷಣೆಯನ್ನು ಪ್ರಸಿದ್ಧಗೊಳಿಸಿದ್ದರು.
- ಪ್ರಕೃತಿಯನ್ನು ಶೋಷಿಸಿ ಬದುಕುವುದು ನಾಗರಿಕತೆಯಲ್ಲ. ಪ್ರಕೃತಿ ಜತೆ ಸಾಮರಸ್ಯದೊಟ್ಟಿಗೆ ಬದುಕುವುದೇ ನಿಜವಾದ ನಾಗರಿಕತೆಯ ಲಕ್ಷಣ.
- ದೊಡ್ಡಮಟ್ಟದ ಯೋಜನೆಗಳು ಸದಾ ವಿನಾಶಕ್ಕೆ ನಾಂದಿ ಹಾಡುತ್ತವೆ. ಸರಳ ಬದುಕಿಗೆ ಪೂರಕವಾಗುವ ಸಣ್ಣಮಟ್ಟದ ಯೋಜನೆಗಳತ್ತ ಮಾತ್ರ ನಾವು ಗಮನ ನೀಡಬೇಕು.
- ನಮ್ಮ ಚಿಂತನೆಗಳು ಜಾಗತಿಕಮಟ್ಟದಲ್ಲಿರಬೇಕು ಹಾಗೂ ಕ್ರಿಯೆ ಸ್ಥಳೀಯವಾಗಿರಬೇಕು (ಥಿಂಕ್ ಗ್ಲೋಬಲಿ ಆ್ಯಕ್ಟ್ ಲೋಕಲಿ)
- ಬಾಲ್ಯದಲ್ಲಿಯೇ ಗಾಂಧೀಜಿಯಿಂದ ಪ್ರಭಾವಿತರಾಗಿದ್ದ ಅವರು ಸ್ಥಳೀಯ ಬ್ರಿಟಿಷ್ ಆಡಳಿತದ ಕಣ್ತಪ್ಪಿಸಲು ಸ್ನೇಹಿತರೊಟ್ಟಿಗೆ ಶ್ಮಶಾನಕ್ಕೆ ತೆರಳಿ ಚರಕದಿಂದ ನೂಲು ತೆಗೆಯುತ್ತಿದ್ದರಂತೆ.
- ತಾವು ಭಾಗಿಯಾಗಿದ್ದ ವಿನೋಭಾ ಭಾವೆ ಅವರ ಸರ್ವೋದಯ ಹೋರಾಟದಲ್ಲಿ ತೊಡಗಿಸಿಕೊಂಡಿದ್ದ ವಿಮಲಾರನ್ನು ಪತ್ನಿಯಾಗಿ ಸ್ವೀಕರಿಸಿದ್ದು, ಗ್ರಾಮೀಣ ಭಾಗದಲ್ಲೇ ನೆಲೆಗೊಳ್ಳಬೇಕೆಂಬ ತಮ್ಮ ಷರತ್ತು ಒಪ್ಪಿದ ಅನಂತರ.
- ಗಾಂಧೀಜಿಯವರ ಸರಳ ಜೀವನ ತಣ್ತೀದಂತೆ ತಮ್ಮ ಉಡುಗೆ-ತೊಡುಗೆಗಳಲ್ಲೂ ಸರಳತೆ ಅಳವಡಿಸಿಕೊಂಡಿದ್ದರು.
- ಅತೀ ಕಡಿಮೆ ನೀರಿನಲ್ಲಿ ಬೆಳೆಯುವ ಆಹಾರ ಧಾನ್ಯಗಳನ್ನಷ್ಟೇ ಸೇವಿಸುತ್ತಿದ್ದರು. ಕರ್ನಾಟಕಕ್ಕೆ ಬಂದಾಗ ಅಕ್ಕಿಯ ಬದಲಾಗಿ ರಾಗಿ ಸೇವಿಸುತ್ತಿದ್ದರು. ಎಳೆನೀರನ್ನು ಇಷ್ಟಪಟ್ಟು ಕುಡಿಯುತ್ತಿದ್ದರು.
- ತೆಹ್ರಿ ಅಣೆಕಟ್ಟು ವಿರೋಧ ಚಳವಳಿ ಸಮಯದಲ್ಲಿ ಸರಕಾರ ನೀಡಿದ ಪದ್ಮಭೂಷಣ ಪ್ರಶಸ್ತಿಯನ್ನು ತಿರಸ್ಕರಿಸಿದ್ದರು.
- ಚಿಪ್ಕೋ ಚಳವಳಿಯ ಪಾದಯಾತ್ರೆ ಸಂದರ್ಭ ಜನರಲ್ಲಿ ಜಾಗೃತಿ ಮೂಡಿಸುವುದರೊಟ್ಟಿಗೆ ಹಿಮಾಲಯದ ಸಸ್ಯಸಂಕುಲಗಳ ಅಧ್ಯಯನವನ್ನೂ ನಡೆಸುತ್ತಿದ್ದರು.