ಮುಂಬಯಿ: ಐಪಿಎಲ್ ನ ಸೆಂಟಿಮೆಂಟಲ್ ಫೇವರಿಟ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸನ್‌ರೈಸರ್ಸ್ ಹೈದರಾಬಾದ್ ಎದುರು ತನ್ನ ನಾಲ್ಕನೇ ಸತತ ಸೋಲಿಗೆ ಸಿಲುಕಿತು. ಯುವ ಆಟಗಾರ ಅಭಿಷೇಕ್ ಶರ್ಮಾ ಅವರ 50 ಎಸೆತಗಳಲ್ಲಿ 75 ರನ್ ಗಳ ಭರ್ಜರಿ ಆಟದೊಂದಿದೆ ಆವೃತ್ತಿಯ ಪಂದ್ಯಾವಳಿಯಲ್ಲಿ ಹೈದರಾಬಾದ್ ಚೊಚ್ಚಲ ಎಂಟು ವಿಕೆಟ್‌ಗಳ ಜಯ ಸಾಧಿಸಿತು.
21 ವರ್ಷದ ಶರ್ಮಾ ಐದು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳಿಂದ ಕೂಡಿದ ಬಿರುಸಿನ ಮೊದಲ ಐಪಿಎಲ್ ಅರ್ಧಶತಕದೊಂದಿಗೆ ಸಂಭ್ರಮಿಸಿ ಭರವಸೆ ಮೂಡಿಸಿದರು. ಸನ್‌ರೈಸರ್ಸ್ 155 ರನ್ ಗುರಿಯನ್ನು 14 ಎಸೆತಗಳು ಬಾಕಿ ಇರುವಂತೆಯೇ ಸುಲಭವಾಗಿ ಬೆನ್ನಟ್ಟಲು ಪ್ರಮುಖ ಪಾತ್ರ ವಹಿಸಿದರು.
16 ಅಂಕಗಳಗಳ ಮ್ಯಾಜಿಕ್ ಫಿಗರ್ ಅನ್ನು ತಲುಪಲು ಸಿಎಸ್ ಕೆ ಇನ್ನುಳಿದ 10 ಪಂದ್ಯಗಳಲ್ಲಿ ಕನಿಷ್ಠ ಎಂಟನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.
ಹರಾಜಿನಲ್ಲಿ ಸನ್‌ರೈಸರ್ಸ್‌ನಿಂದ 6.5 ಕೋಟಿ ರೂ.ಗೆ ಖರೀದಿಸಲ್ಪಟ್ಟ ಪಂಜಾಬ್‌ನ ಎಡಗೈ ಆಟಗಾರ ಅಭಿಷೇಕ್ ಶರ್ಮಾ, 2018 ರ ಅಂಡರ್ -19 ವಿಶ್ವಕಪ್ ಪಂದ್ಯಾವಳಿಗೆ ಪೃಥ್ವಿ ಶಾ ಅವರನ್ನು ನಾಯಕನಾಗಿ ಬದಲಿಸುವ ಮೊದಲು, 2016 ರಲ್ಲಿ ಅಂಡರ್ -19 ಏಷ್ಯಾ ಕಪ್‌ನಲ್ಲಿ ಭಾರತವನ್ನು ಗೆಲುವಿನತ್ತ ಮುನ್ನಡೆಸಿದ್ದರು.
ಇದು ಈ ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಮೊದಲ ಜಯವಾಗಿದ್ದು, ತಮ್ಮ ಹಿಂದಿನ ಪಂದ್ಯಗಳಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಸೋತಿತ್ತು.