Advertisement

ಎಲ್ಲರ ಕಣ್ಣು ಹೈದರಾಬಾದ್‌ನತ್ತ: ಗೆದ್ದರೆ ಪ್ಲೇ ಆಫ್ ಗೆ, ಸೋತರೆ ಕೆಕೆಆರ್ ಗೆ ಅವಕಾಶ

03:02 PM Nov 03, 2020 | keerthan |

ಶಾರ್ಜಾ: ಕೊನೆಯ ಲೀಗ್‌ ಪಂದ್ಯದ ತನಕ ಐಪಿಎಲ್‌ ಕುತೂಹಲವನ್ನು ಹಿಡಿದಿರಿಸಿ ಕೊಳ್ಳುವ “ಲೆಕ್ಕಾಚಾರದ ಆಟ’ ಭಾರೀ ಯಶಸ್ಸಿನತ್ತ ಸಾಗುತ್ತಿದೆ. ಅದರಂತೆ ಮಂಗಳವಾರ ನಡೆಯುವ ಮುಂಬೈ-ಹೈದರಾಬಾದ್‌ ನಡುವಿನ ಕಟ್ಟಕಡೆಯ ಲೀಗ್‌ ಹಣಾಹಣಿಗೆ ಭಾರೀ ಮಹತ್ವ ಬಂದಿದೆ. ಇದು ಹೈದರಾಬಾದ್‌ ಪಾಲಿಗೆ ನಿರ್ಣಾಯಕ ಪಂದ್ಯ. ಪ್ಲೇ ಆಫ್ಗೆ ಲಗ್ಗೆ ಇಡಬೇಕಾದರೆ ವಾರ್ನರ್‌ ಸೇನೆ ಗೆಲ್ಲಲೇಬೇಕು. ಸೋತರೆ ಅದು ಕೂಟದಿಂದಲೇ ನಿರ್ಗಮಿಸಲಿದೆ. ಆಗ ಮುಂಬೈ, ಆರ್‌ಸಿಬಿ, ಡೆಲ್ಲಿ ಮತ್ತು ಕೋಲ್ಕತಾ ತಂಡಗಳು ಮುಂದಿನ ಸುತ್ತಿನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯಲಿವೆ.

Advertisement

ಹಾಗೆಯೇ ಹೈದರಾಬಾದ್‌ ಗೆದ್ದರೆ ಮುಂಬೈ ಮತ್ತು ಸೋಮವಾರದ ವಿಜೇತ ತಂಡವನ್ನು ಹೊರತುಪಡಿಸಿ 3 ತಂಡಗಳ ರನ್‌ರೇಟ್‌ ಲೆಕ್ಕಾಚಾರ ಮಹತ್ವ ಪಡೆಯಲಿದೆ. ಹೀಗಾಗಿ ಎಲ್ಲರ ಕಣ್ಣು ಹೈದರಾಬಾದ್‌ನತ್ತ ನೆಟ್ಟಿದೆ. ಮುಂಬೈಗೆ ಈ ಪಂದ್ಯದ ಫ‌ಲಿತಾಂಶದಿಂದ ಆಗಬೇಕಾದ್ದೇನೂ ಇಲ್ಲ. ಸೋತರೂ ಅದರ ಅಗ್ರಸ್ಥಾನ ಅಬಾಧಿತ. ಗೆದ್ದರೆ ಅಂಕಗಳನ್ನು 20ಕ್ಕೆ ಏರಿಸಿ ಕೊಂಡು ಬೀಗಬಹುದು! ಆದರೆ ಹೈದರಾಬಾದ್‌ ಸ್ಥಿತಿ ಹೀಗಿಲ್ಲ. ಅದು ಮುಂಬೈ ವಿರುದ್ಧ ಜೈ ಅನ್ನಲೇಬೇಕು. ಶಾರ್ಜಾದಲ್ಲೇ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಅದು ರೋಹಿತ್‌ ಪಡೆಯೆದುರು 34 ರನ್ನುಗಳ ಸೋಲನು ಭವಿಸಿತ್ತು. ಇದಕ್ಕೆ ಸೇಡು ತೀರಿಸಿ ಕೊಳ್ಳುವ ಕೆಲಸವೂ ಬಾಕಿ ಇದೆ.

ಇದನ್ನೂ ಓದಿ:ಎಲ್ಲ ಮಾದರಿಯ ಕ್ರಿಕೆಟಿಗೆ ಶೇನ್‌ ವಾಟ್ಸನ್‌ ಗುಡ್‌ಬೈ?

ಹೆಚ್ಚು ಸಮತೋಲನ

ಹೈದರಾಬಾದ್‌ ಬ್ಯಾಟಿಂಗ್‌ ವಿಭಾಗದಲ್ಲಿ ಸಮತೋಲನ ಸಾಧಿಸಿದ್ದೇ ಅಪಾಯಕಾರಿ ಜಾನಿ ಬೇರ್‌ಸ್ಟೊ ಅವರನ್ನು ಆಡುವ ಬಳಗದಿಂದ ಕೈಬಿಡುವ ರಿಸ್ಕ್ ತೆಗೆದುಕೊಂಡ ಬಳಿಕ! ಅಲ್ಲಿಗೆ ಆಲ್‌ರೌಂಡರ್‌ ಜಾಸನ್‌ ಹೋಲ್ಡರ್‌ ಪ್ರವೇಶವಾಗುತ್ತದೆ. ಆರಂಭಿಕನಾಗಿ ಭಡ್ತಿ ಪಡೆದ ವೃದ್ಧಿಮಾನ್‌ ಸಾಹಾ ಹೊಡಿಬಡಿ ಆಟದ ಮೂಲಕ ಗಮನ ಸೆಳೆಯುತ್ತಾರೆ. ಪ್ರಧಾನ ಬೌಲರ್‌ ಸಂದೀಪ್‌ ಶರ್ಮ, ಎಡಗೈ ಪೇಸರ್‌ ಟಿ. ನಟರಾಜನ್‌, ಲೆಗ್ಗಿ ರಶೀದ್‌ ಖಾನ್‌ ಅವರನ್ನೊಳಗೊಂಡ ಹೈದರಾಬಾದ್‌ ಬೌಲಿಂಗ್‌ ವಿಭಾಗ ಸಾಕಷ್ಟು  ಬಲಿಷ್ಠವಾಗಿದೆ. ಇದಕ್ಕೂ ಮಿಗಿಲಾಗಿ ಹಿಂದಿನೆ ರಡೂ ಪಂದ್ಯಗಳಲ್ಲಿ ಡೆಲ್ಲಿ ಮತ್ತು ಆರ್‌ಸಿಬಿಯನ್ನು ಕೆಡವಿದ ಆತ್ಮವಿಶ್ವಾಸ ತಂಡದಲ್ಲಿ ತುಂಬಿ ತುಳುಕುತ್ತಿದೆ.

Advertisement

“2016ರಲ್ಲೂ ನಾವು ಇದೇ ಸ್ಥಿತಿಯಲ್ಲಿದ್ದೆವು. ಕೊನೆಯ 3 ಪಂದ್ಯಗಳನ್ನು ಜಯಿಸಲೇಬೇಕಾದ ಅನಿವಾರ್ಯ ಮತ್ತು ಒತ್ತಡ ನಮ್ಮ ಮೇಲಿತ್ತು. ಇದನ್ನು ನಿಭಾಯಿಸಿದ್ದೆವು. ಈ ಸಲವೂ ಇದನ್ನು ಪುನರಾವರ್ತಿಸುವ ವಿಶ್ವಾಸವಿದೆ’ ಎಂದು ಆರ್‌ಸಿಬಿಯನ್ನು ಮಣಿಸಿದ ಬೆನ್ನಲ್ಲೇ ವಾರ್ನರ್‌ ಹೇಳಿದ್ದರು. ಅಂದು ಹೈದರಾಬಾದ್‌ ಚಾಂಪಿಯನ್‌ ಕೂಡ ಆಗಿತ್ತು!

“ಸ್ಲೋ’ ಆಗುತ್ತಿದೆ ಶಾರ್ಜಾ!

ಇದು ಶಾರ್ಜಾದಲ್ಲಿ ನಡೆಯುವ ಮುಖಾಮುಖೀ. ಆರಂಭದಲ್ಲಿ ಇಲ್ಲಿ ರನ್ ಹೊಳೆಯೇ ಹರಿದು ಬರುತ್ತಿತ್ತು. ಈಗ ಇಲ್ಲಿನ ಟ್ರ್ಯಾಕ್‌ ಬಹಳ “ಸ್ಲೋ’ ಆಗಿದೆ. ಶನಿವಾರ ಹೈದರಾಬಾದ್‌ ಎದುರು ಆರ್‌ಸಿಬಿ ಗಳಿಸಿದ್ದು 120 ರನ್‌ ಮಾತ್ರ. ಇದಕ್ಕೂ ಮೊದಲು ಮುಂಬೈ ಎದುರು ಚೆನ್ನೈ ಕೇವಲ 114 ರನ್‌ ಗಳಿಸಿತ್ತು. ಹೀಗಾಗಿ 150 ರನ್‌ ಇಲ್ಲಿನ ದೊಡ್ಡ ಮೊತ್ತ ಎನಿಸಿಕೊಳ್ಳಬಹುದು

Advertisement

Udayavani is now on Telegram. Click here to join our channel and stay updated with the latest news.

Next