ಮಹಾರಾಷ್ಟ್ರ: ದೇಶದಲ್ಲಿ ಟೊಮ್ಯಾಟೋ ಬೆಲೆ ಏರಿಕೆಯಿಂದ ಬಳಲುತ್ತಿದ್ದ ಜನಕ್ಕೆ ಇದೀಗ ಈರುಳ್ಳಿ ರಫ್ತಿಗೆ ಶೇ 40ರಷ್ಟು ತೆರಿಗೆ ವಿಧಿಸುವ ಮೂಲಕ ಕೇಂದ್ರ ಸರಕಾರ ಜನ ಸಾಮಾನ್ಯರ ಕಣ್ಣಲ್ಲಿ ನೀರು ಬರಿಸುವಂತೆ ಮಾಡಿದ್ದು ಕೇಂದ್ರದ ಈ ನಿರ್ಧಾರವನ್ನು ಶಿವಸೇನೆ ಟೀಕೆ ಮಾಡಿದೆ.
ಕೇಂದ್ರ ಸರಕಾರ ಚಂದ್ರನಲ್ಲಿಗೆ ನೌಕೆ ಕಳುಹಿಸಿತು, ಇದೀಗ ಸೂರ್ಯನಲ್ಲಿಗೆ ನೌಕೆ ಕಳುಹಿಸುವ ವಿಚಾರದಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಮುಂದಾಗಿರುವುದು ಒಳ್ಳೆಯ ವಿಚಾರ ಅದಕ್ಕೂ ಮೊದಲು ಈರುಳ್ಳಿ ಸಮಸ್ಯೆಯನ್ನು ಮೊದಲು ಬಗೆಹರಿಸಿ ಇಲ್ಲದಿದ್ದಲ್ಲಿ ಮುಂಬರುವ ೨೦೨೪ರ ಲೋಕ ಸಭೆ ಚುನಾವಣೆಯಲ್ಲಿ ಜನರೇ ನಿಮಗೆ ತಕ್ಕ ಉತ್ತರ ನೀಡಲಿದ್ದಾರೆ ಎಚ್ಚರವಹಿಸಿ ಎಂದು ತನ್ನ ಮುಖವಾಣಿ ಸಾಮ್ನಾದಲ್ಲಿ ಬರೆದುಕೊಂಡಿದೆ.
ದೇಶ ದೊಡ್ಡ ದೊಡ್ಡ ಸಾಧನೆಗಳನ್ನು ಮಾಡುವುದು ಒಳ್ಳೆಯ ಕೆಲಸ ಹಾಗೆಯೇ ಜನಸಾಮಾನ್ಯರ ಬಗ್ಗೆಯೂ ಕಿಂಚಿತ್ತು ವಿಶ್ವಾಸ ಇರಿಸಿ ಈರುಳ್ಳಿ ಸಮಸ್ಯೆಯನ್ನು ಸ್ಥಿರಗೊಳಿಸುವುದು ಮುಖ್ಯ ಎಂದು ಸಾಮ್ನಾದ ಸಂಪಾದಕೀಯದಲ್ಲಿ ಬರೆದುಕೊಂಡಿದ್ದಾರೆ.
ಮಹಾರಾಷ್ಟ್ರ ಸುತ್ತ ಮುತ್ತಲ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಈರುಳ್ಳಿಯನ್ನು ಬೆಳೆಸಲಾಗುತ್ತದೆ ಹೀಗಿರುವಾಗ ಕೇಂದ್ರ ಈರುಳ್ಳಿ ರಫ್ತಿನ ಮೇಲೆ ಶೇಕಡಾ 40 ತೆರಿಗೆ ವಿಧಿಸಿರುವುದು ಹೆಚ್ಚಿನ ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನೂ ಓದಿ: Illegal Theater: ಚಿತ್ರ ಮಂದಿರದಲ್ಲಿ ಕಾನೂನು ಬಾಹಿರವಾಗಿ ಚಿತ್ರ ಪ್ರದರ್ಶನ ಆಗುತ್ತಿತ್ತಾ ?