ನವದೆಹಲಿ: ರಾಜ್ಯಸಭೆಗೆ ನಾಮನಿರ್ದೇಶನಗೊಂಡ ಶಾಸ್ತ್ರೀಯ ನೃತ್ಯಗಾರ್ತಿ ಸೋನಲ್ ಮಾನ್‌ಸಿಂಗ್ ತನ್ನನ್ನು “ಸಫ್ರ್ನ್ ಆರ್ಟಿಸ್ಟ್’ (ಕೇಸರಿ ಕಲಾವಿದೆ) ಎಂದು ಕರೆದಿದ್ದವರಿಗೆ ಪ್ರತಿಕ್ರಿಯೆ ನೀಡಿದ್ದು, ಸೂರ್ಯನೂ ಕೇಸರಿಯೇ. ನಾವು ಅದಕ್ಕೇನೂ ಮಾಡಲಾಗದು ಎಂದಿದ್ದಾರೆ. ಇತ್ತೀಚೆಗಷ್ಟೇ ರಾಜ್ಯಸಭೆಗೆ ನಾಮನಿರ್ದೇಶನಗೊಂಡಿರುವ ಸೋನಲ್, ಹಿಂದಿನಿಂದಲೂ ನನಗೆ ಈ ಪಟ್ಟ ಕಟ್ಟಲಾಗಿದೆ. ಆದರೆ ಇದು ಬೇಸರದ ಸಂಗತಿ. ನಿಸರ್ಗದ ಬಣ್ಣಗಳು ತುಂಬಾ ಸುಂದರವಾಗಿವೆ. ನಾವು ಊಹಿಸಿಕೊಳ್ಳುವ ಪ್ರತಿ ಬಣ್ಣವೂ ಇಲ್ಲಿದೆ. ನದಿ, ಸಮುದ್ರ ನೀಲಿಯಾಗಿವೆ. ಒಂದು ಬಣ್ಣವನ್ನು ನಿರ್ದಿಷ್ಟ ಸಂಗತಿ ಯೊಂದಿಗೆ ತಳಕು ಹಾಕಿ ಅದನ್ನು ಉತ್ತಮ ಮತ್ತು ಕೆಟ್ಟದ್ದು ಎಂದು ಹೇಳುವುದು ಒಳ್ಳೆಯದಲ್ಲ. ಈ ಕೇಸರಿ ಎಂಬ ಚರ್ಚೆಯು ಹಠಾತ್ತನೆ ಎದುರಾಗಿದೆ. ನಾನು ನನ್ನ ವೃತ್ತಿ ಜೀವನ ಆರಂಭಿಸಿದಾಗ ಇರಲಿಲ್ಲ. ಆಗ ಇದರ ಬಗ್ಗೆ ನಾನು ಕೇಳಿಯೂ ಇರಲಿಲ್ಲ. ಕೇಸರಿ ಎಂದೂ ಕೆಟ್ಟದ್ದು ಎಂದು ಗೊತ್ತಿರಲಿಲ್ಲ ಎಂದಿದ್ದಾರೆ.