Advertisement
ಸಹಜವಾಗಿ ಬೇಸಿಗೆಯಲ್ಲಿ ಹಲವು ಆರೋಗ್ಯ ಸಂಬಂಧಿ ಸಮಸ್ಯೆಗಳು ಉಂಟಾಗುತ್ತವೆ. ಚರ್ಮ ಕಪ್ಪಾಗುವುದು, ಕಣ್ಣು ಉರಿ ಕಾಣಿಸಿಕೊಳ್ಳುವುದು ಸಹಜ. ಸಾಕಷ್ಟು ಜನರು ನೆತ್ತಿ ಸುಡುವ ಝಳ ತಪ್ಪಿಸಿಕೊಳ್ಳಲು ಕೊಡೆ ಬಳಸುತ್ತಾರೆ. ಆದರೆ, ಕಣ್ಣುಗಳ ಸಂರಕ್ಷಣೆ ಮರೆತು ಬಿಡುತ್ತಾರೆ.
Related Articles
Advertisement
ಗುಣಮಟ್ಟದ ಸನ್ ಗ್ಲಾಸ್ :
ಸನ್ ಗ್ಲಾಸ್ ಖರೀದಿಸುವ ಮುನ್ನ ಕೆಲವೊಂದು ವಿಷಯಗಳತ್ತ ಗಮನ ಹರಿಸುವುದು ಉತ್ತಮ. ಕಡಿಮೆ ಬೆಲೆಗೆ ಸಿಗುವ ಗ್ಲಾಸ್ ಗಳ ಮೊರೆ ಹೋಗದಿರಿ. ಸ್ವಲ್ಪ ಹಣ ಖರ್ಚಾದರೂ ಪರವಾಗಿಲ್ಲ ಉತ್ತಮ ಗುಣಮಟ್ಟದ ಕೂಲಿಂಗ್ ಗ್ಲಾಸ್ ತೆಗೆದುಕೊಳ್ಳುವುದು ಒಳ್ಳೆಯದು. ಇದು ದೀರ್ಘಕಾಲ ಬಾಳಿಕೆ ಬರುವುದರ ಜತೆಗೆ ಹೆಚ್ಚು ರಕ್ಷಣಾತ್ಮಕವಾಗಿರುತ್ತದೆ.
ಇರಲಿ ಫ್ಯಾಶನ್ :
ಈಗಂತೂ ಹಲವು ಬಗೆಯ ಸನ್ ಗ್ಲಾಸ್ ಗಳು ಮಾರುಕಟ್ಟೆಯಲ್ಲಿ ಲಭ್ಯ. ಆನ್ ಲೈನ್ ಹಾಗೂ ಶೋರೂಂಗಳಲ್ಲಿ ಟ್ರೆಂಡಿಯಾಗಿರುವ ಕೂಲಿಂಗ್ ಗ್ಲಾಸ್ ಗಳು ದೊರೆಯುತ್ತವೆ. ನಮ್ಮ ಕಣ್ಣುಗಳ ರಕ್ಷಣೆ ಜತೆಗೆ ಸುಂದರವಾಗಿ ಕಾಣಿಸಿಕೊಳ್ಳ ಬಯಸುವವರು ಹೊಸ ಫ್ಯಾಶನ್ ಗ್ಲಾಸ್ ತೆಗೆದುಕೊಳ್ಳಬಹುದು.
ಕಣ್ಣಿನ ರಕ್ಷಣೆಗೆ ಹಲವು ಕ್ರಮ :
ಬಿಸಿಲಿನಿಂದ ಕಣ್ಣುಗಳ ರಕ್ಷಣೆಗೆ ಕೇವಲ ಸನ್ ಗ್ಲಾಸ್ ಮೊರೆ ಹೋದರೆ ಸಾಲದು. ನಾವು ತಿನ್ನುವ ಆಹಾರದತ್ತ ಗಮನ ಹರಿಸುವುದು ಕೂಡ ಅಗತ್ಯ. ವಿಟಮಿನ್ ಹೆಚ್ಚಿರುವ ಕ್ಯಾರೆಟ್, ಹಾಲು ಮೊಟ್ಟೆ, ಹಸಿರು ಸೊಪ್ಪುಗಳನ್ನು ಹೆಚ್ಚಾಗಿ ಸೇವಿಸುವುದನ್ನು ಮರೆಯಬೇಡಿ.