Advertisement

ಹಸುರು ನ್ಯಾಯಮಂಡಳಿಯಿಂದ ಸುಮೋಟೋ ಪ್ರಕರಣ ದಾಖಲು

01:27 AM Mar 20, 2024 | Team Udayavani |

ಮಂಗಳೂರು: ಹೊಸದಿಲ್ಲಿಯ ಹಸುರು ನ್ಯಾಯ ಮಂಡಳಿ (ಎನ್‌ಜಿಟಿ)ಯು ಮಂಗಳೂರಿನ ನೇತ್ರಾವತಿ ಜಲಾಭಿ ಮುಖ ಅಭಿವೃದ್ಧಿ ಯೋಜನೆಗೆ ಸಂಬಂಧಿಸಿದಂತೆ ಸುಮೋಟೋ ಪ್ರಕರಣ ಕೈಗೆತ್ತಿಕೊಂಡಿದೆ.

Advertisement

ಯೋಜನೆಗೆ ಸಂಬಂಧಿಸಿದ ಪರಿಸರ ಮತ್ತು ಸಾಮಾಜಿಕ ಸಮಸ್ಯೆಗಳ ಗಂಭೀರತೆಯನ್ನು ಎತ್ತಿಹಿಡಿದಿದೆ. ಯೋಜನೆಯು ಸ್ಥಳೀಯ ಪ್ರದೇಶದ ಸಾಮಾನ್ಯ ಜನರ ಜೀವನ ಹಾಗೂ ನದಿ ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಕಳವಳ ವ್ಯಕ್ತ ಪಡಿಸಿದೆ. ವಿಸ್ತೃತ ವರದಿ ಸಲ್ಲಿಸಲು ಜಂಟಿ ಸಮಿತಿ ರಚನೆಗೆ ನ್ಯಾಯಮಂಡಳಿ ಸೂಚಿಸಿದೆ.

ಮಂಗಳೂರು ಸ್ಮಾರ್ಟ್‌ ಸಿಟಿ ಲಿಮಿಟೆಡ್‌(ಎಂಎಸ್‌ಸಿಎಲ್‌) ಕೈಗೆತ್ತಿ ಕೊಂಡಿ ರುವ ಯೋಜನೆಯು ಜನ ಜೀವನ, ಪರಿಸರ ಮತ್ತು ಸ್ಥಳೀಯ ಸಮುದಾಯಗಳ ಮೇಲೆ ದುಷ್ಪರಿಣಾಮಗಳನ್ನು ಉಂಟು ಮಾಡುತ್ತಿದೆ. ಯೋಜನೆ ಕರಾವಳಿ ನಿಯಂತ್ರಣ ವಲಯ ನಿಯಮಗಳ ಮತ್ತು ಪರಿಸರ ನಿಯಮಗಳ ಉಲ್ಲಂಘನೆಯ ಆರೋಪ ಎದುರಿಸುತ್ತಿದೆ.

ಪರಿಸರ ಸಂರಕ್ಷಣೆ ಮತ್ತು ಸ್ಥಳೀಯ ಸಮು ದಾಯದ ಹಕ್ಕುಗಳನ್ನು ತಿಳಿದುಕೊಳ್ಳಲು ಈ ವಿಷಯದಲ್ಲಿ ಮಧ್ಯೆ ಪ್ರವೇಶಿಸುವುದು ಅಗತ್ಯವಾಗಿದ್ದು, ನಿಯಮ ಗಳ ಅನುಸರಣೆ ಮತ್ತು ಪೀಡಿತರ ಪುನರ್ವಸತಿಗಾಗಿ ಕೈಗೊಂಡ ಕ್ರಮಗಳ ವಿವರ ನೀಡುವಂತೆ ನ್ಯಾಯಮಂಡಳಿ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next