Advertisement

ಸಲ್ಮಾನ್ ಗೆ ಮತ್ತೆ ಸಂಕಷ್ಟ: ಬಾಲಿವುಡ್ ಬ್ಯಾಚುರಲ್ ಗೆ ಬಂತು ಸಮನ್ಸ್

01:03 PM Jul 09, 2021 | Team Udayavani |

ಮುಂಬೈ: ಬಾಲಿವುಡ್ ಬ್ಯಾಚುರಲ್ ಸಲ್ಮಾನ್ ಖಾನ್ ಹಾಗೂ ಅವರ ಸಹೋದರಿಗೆ ಕಾನೂನು ಸಂಕಷ್ಟ ಎದುರಾಗಿದೆ. ‘ಬೀಯಿಂಗ್ ಹ್ಯೂಮನ್ ಎನ್ ಜಿಒ’ ಸಂಸ್ಥೆಯಡಿಯಲ್ಲಿ ವಂಚನೆ ಮಾಡಿದ ಆರೋಪದಲ್ಲಿ ಸಲ್ಲು, ಅವರ ಸಹೋದರಿ ಅಲ್ವಿರಾ ಖಾನ್ ಸೇರಿದಂತೆ ಒಂಭತ್ತು ಜನರ ವಿರುದ್ಧ ಪೊಲೀಸರು ಸಮನ್ಸ್ ಜಾರಿ ಮಾಡಿದ್ದಾರೆ.

Advertisement

ಬೀಯಿಂಗ್ ಹ್ಯೂಮನ್ ಸಂಸ್ಥೆ ನಡೆಸುತ್ತಿರುವ ಸಲ್ಮಾನ್ ಖಾನ್ ಇದೇ ಬ್ರ್ಯಾಂಡ್ ಹೆಸರಿನಲ್ಲಿ ಕೆಲವು ಉತ್ಪನ್ನಗಳನ್ನೂ ಮಾರಾಟ ಮಾಡುತ್ತಾರೆ. ಇದೀಗ ಸಂಸ್ಥೆಯ ಕೆಲವರು ತನಗೆ ಫ್ರಾಂಚೈಸಿ ತೆರೆಯಲು ಹೇಳಿ ದಾಸ್ತಾನು ನೀಡದೇ ವಂಚಿಸಿದ್ದಾರೆ ಎಂದು ಚಂಢೀಘಡ ಪೊಲೀಸರಿಗೆ ಅರುಣ್ ಗುಪ್ತಾ ಎಂಬವರು ದೂರು ನೀಡಿದ್ದಾರೆ.

ಈ ಸಂಬಂಧ ದೂರು ದಾಖಲಿಸಿಕೊಂಡಿರುವ ಪೊಲೀಸರು ಜುಲೈ13 ರೊಳಗಾಗಿ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಿದ್ದಾರೆ.

ಸಲ್ಮಾನ್ ಖಾನ್, ಬೀಯಿಂಗ್ ಹ್ಯೂಮನ್ ಎನ್ ಜಿಒ, ಅರುಣ್ ಗುಪ್ತಾ, ಸಮನ್ಸ್,

Advertisement

Udayavani is now on Telegram. Click here to join our channel and stay updated with the latest news.

Next