Advertisement

Road mishap: ಭೀಕರ ರಸ್ತೆ ಅಪಘಾತದಲ್ಲಿ ನಟ ಪಂಕಜ್‌ ತ್ರಿಪಾಠಿ ಬಾವ ಮೃತ್ಯು: ಸಹೋದರಿಗೆ ಗಾಯ

11:59 AM Apr 21, 2024 | Team Udayavani |

ರಾಂಚಿ: ಭೀಕರ ರಸ್ತೆ ಅಪಘಾತದಲ್ಲಿ ಖ್ಯಾತ ನಟ ಪಂಕಜ್‌ ತ್ರಿಪಾಠಿ ಅವರ ಬಾವ ಮೃತಪಟ್ಟಿರುವ ಘಟನೆ ಶನಿವಾರ(ಏ.20 ರಂದು) ಜಾರ್ಖಂಡ್‌ನ ಧನ್‌ಬಾದ್ ನಲ್ಲಿ ನಡೆದಿದೆ.

Advertisement

ಘಟನೆಯಲ್ಲಿ ಪಂಕಜ್ ತ್ರಿಪಾಠಿ ಅವರ ಬಾವ ರಾಕೇಶ್ ತಿವಾರಿ ಸಾವನ್ನಪ್ಪಿದ್ದರೆ, ಅವರ ಸಹೋದರಿ ಸಬಿತಾ ತಿವಾರಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ದೆಹಲಿ-ಕೋಲ್ಕತ್ತಾ ರಾಷ್ಟ್ರೀಯ ಹೆದ್ದಾರಿ-2 ರ ನಿರ್ಸಾ ಬಜಾರ್‌ನಲ್ಲಿ ಸಂಜೆ 4.30 ರ ಸುಮಾರಿಗೆ ದಂಪತಿಗಳು ಬಿಹಾರದ ಗೋಪಾಲಗಂಜ್ ಜಿಲ್ಲೆಯಿಂದ ಪಶ್ಚಿಮ ಬಂಗಾಳಕ್ಕೆ ತೆರಳಿದ್ದರು. ಈ ವೇಳೆ ನಿಯಂತ್ರಣ ತಪ್ಪಿ ಕಾರು ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ.

ಘಟನೆ ಬಳಿಕ ಇಬ್ಬರನ್ನು ಧನ್‌ಬಾದ್‌ನ ಶಾಹಿದ್ ನಿರ್ಮಲ್ ಮಹ್ತೋ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಯಿತು. ಆದರೆ ಆದಾಗಲೇ ರಾಕೇಶ್‌ ಅವರು ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ.

ತ್ರಿಪಾಠಿ ಅವರ ಸಹೋದರಿ ಸಬಿತಾ ತಿವಾರಿ ಅವರ ಕಾಲು ಮುರಿತಕ್ಕೆ ಒಳಗಾಗಿದ್ದು, ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ಎಸ್‌ಎನ್‌ಎಂಎಂಸಿಎಚ್ ಎಮರ್ಜೆನ್ಸಿ ಎಚ್‌ಒಡಿ ಡಾ ದಿನೇಶ್ ಕುಮಾರ್ ಗಿಂಡೌರಿಯಾ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next