Advertisement
ಹೌದು, ರಾಜಧಾನಿಯಲ್ಲಿ ಭಯ ಹುಟ್ಟಿಸಿದರುವ ಕೋವಿಡ್ 19 ಸೋಂಕು ಬೆಂಗಳೂರು ಜಲಮಂಡಳಿಯ ಬೇಸಿಗೆ ನಿರ್ವಹಣೆಯನ್ನು ಒಂದಷ್ಟು ಸರಳಗೊಳಿಸಿದೆ. ಪ್ರತಿ ವರ್ಷ ಬೇಸಿಗೆ ಸಂದರ್ಭದಲ್ಲಿ ಅಂತರ್ಜಲ ಬತ್ತಿ ಸಾಮಾನ್ಯ ದಿನಗಳಿಗಿಂತ 5 ಕೋಟಿ ಲೀ. ಹೆಚ್ಚು ನೀರಿನ ಬೇಡಿಕೆ ಇರುತ್ತಿತ್ತು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ.
Related Articles
Advertisement
ನೀರಿನ ಶೇಖರಣೆ ಹೆಚ್ಚಿಸುವ ಲಾಕ್‌ಡೌನ್: ಲಾಕ್ ಡೌನ್ 18 ದಿನಗಳ ಮಾತ್ರವಲ್ಲದೇ ಒಂದು ತಿಂಗಳ ಮುಂದುವರೆಯುವ ಸಾಧ್ಯತೆಗಳಿದ್ದು, ಈ ವೇಳೆಯು ನಿತ್ಯ 10 ಕೋಟಿ ಲೀ.ನಂತೆ ನೀರು ಉಳಿಕೆಯಾದರೆ ಗೃಹಬಳಕೆಯ ಬೇಸಿಗೆ ಹೆಚ್ಚವರಿ 5 ಕೋಟಿ ಲೀ. ನೀರು ಪೂರೈಕೆ ಮಾಡಿ, ಬಾಕಿ ಉಳಿಯುವ ನೀರನ್ನು ಜಲಮಂಡಳಿ ಜಲಾಗಾರಗಳು ಅಥವಾ 145 ಕೋಟಿ ಲೀ.ನಲ್ಲಿ 100 ಅಥವಾ 50 ಕೋಟಿ ಲೀ, ಕಡಿಮೆ ಪಂಪ್ ಮಾಡುವ ಮೂಲಕ ಜಲಾಶಯದಲ್ಲಿಯೇ ಸಂಗ್ರಹಿಸಬಹುದು ಎನ್ನುತ್ತಾರೆ ತಜ್ಞರು.
ನೀರಿನ ಮರುಬಳಕೆಗೆ ಸಮಸ್ಯೆಯಿಲ್ಲ ಕೋವಿಡ್ 19 ಆತಂಕ ಹಿನ್ನೆಲೆ ಕೈತೊಳೆಯಲು ಅಥವಾ ಸ್ವತ್ಛತೆಗೆ ಬಳಸಿದ ನೀರನ್ನು ತ್ಯಾಜ್ಯನೀರು ಸಂಸ್ಕರಣಾ ಘಟಕದ ಮೂಲಕ ಸಂಸ್ಕರಿಸಿ (ಎಸ್‌ಟಿಪಿ)ಮರು ಬಳಕೆ ಮಾಡುಬಹುದೇ ಎಂಬ ಪ್ರಶ್ನೆ ಜನರಲ್ಲಿದೆ. ಈ ಕುರಿತು ನಿಮ್ಹಾನ್ಸ್ ನ್ಯೂರೋವೈರಾಲಜಿ ವಿಭಾಗದ ಮುಖ್ಯಸ್ಥ ಉದಯವಾಣಿಗೆ ಪ್ರತಿಕ್ರಿಯಿಸಿದ್ದು, “ಪೆಟ್ರೋಲಿಯಂ ಯುಕ್ತ ಸ್ಯಾನಿಟೈಸರ್ ಬಳಸಿ ಕೈತೊಳೆದಾಗ ಕೊರೊನಾ ವೈರಾಣು ಇದ್ದರೆ ಸಾಯುತ್ತದೆ. ಯಾವುದೇ ಆತಂಕ ಇಲ್ಲದೇ ಕೈತೊಳದ ನೀರನ್ನು ಸಂಸ್ಕರಿಸಿ ಮರುಬಳಕೆ ಮಾಡಬಹುದು ಎಂದು ತಿಳಿಸಿದ್ದಾರೆ.
ಜಲಮಂಡಳಿ ಮನವಿ : ಜನರು ಜಲಮಂಡಳಿ ನೀರು ಪೂರೈಕೆಯಲ್ಲಿ ಯಾವುದೇ ಸಮಸ್ಯೆಗಳಿದ್ದರೂ ಕಚೇರಿಗೆ ಆಗಮಿಸದೆ ಸಹಾಯವಾಣಿ 1916 ಅಥವಾ ವ್ಯಾಟ್ಸ್ ಆ್ಯಪ್ ಸಂಖ್ಯೆ 8762228888 ಮೂಲಕ ಸಂಪರ್ಕಿಸಲು ಕೋರಿದೆ.
ಲಾಕ್‌ಡೌನಿಂದ ಜಲಮಂಡಳಿ ವಾಣಿಜ್ಯ ಬಳಕೆಗೆ ಪೂರೈಸುತ್ತಿದ್ದ 10 ಕೋಟಿ ಲೀ. ನೀರು ಉಳಿಕೆಯಾಗುತ್ತಿದ್ದು, ಆ ನೀರನ್ನು ಬೇಡಿಕೆ ಇರುವ ವಸತಿ ಪ್ರದೇಶಗಳಿಗೆ ನೀಡಲಾಗುತ್ತಿದೆ. ಈ ಬಾರಿ ಬೇಸಿಗೆ ನೀರಿನ ಸಮಸ್ಯೆ ಉಂಟಾಗುವುದಿಲ್ಲ. –ತುಷಾರ ಗಿರಿನಾಥ್, ನಗರ ಜಲಮಂಡಳಿ ಅಧ್ಯಕ್ಷ
-ಜಯಪ್ರಕಾಶ್ ಬಿರಾದಾರ್