ದೇವನಹಳ್ಳಿ : ಬೆಂಗಳೂರು ಗ್ರಾಮಾಂತರ ಜಿಲ್ಲೆಯ 4 ತಾಲೂಕುಗಳಲ್ಲಿ ಮೀನುಗಾರಿಕೆ ಇದೆ. ಸಾಮಾನ್ಯ ವಾಗಿ ಪ್ರತಿದಿನ ಜಿಲ್ಲೆಯಲ್ಲಿ 50-60 ಟನ್ ಮೀನು ಉತ್ಪಾದನೆಯಾಗುತ್ತಿದೆ. ಬೇಸಿಗೆ ಹಿನ್ನೆಲೆಯಲ್ಲಿ ಕೆರೆ ನೀರು ಕುಸಿದು ಮೀನುಗಳಿಗೆ ಹಾನಿಯಾದ ಹಿನ್ನೆಲೆ ಯಲ್ಲಿ ಸಾಕಾಣಿಕೆದಾರರು ಬೇಗನೆ ಮೀನು ಗಳನ್ನು ಹಿಡಿಯುತ್ತಿದ್ದಾರೆ. ಇದರಿಂದ ಬೇಡಿಕೆಗಿಂತ ಪೂರೈಕೆ ಹೆಚ್ಚಾಗುತ್ತಿದೆ. ಇದರಿಂದ ಸಾಕಾಣಿಕೆದಾರರು ಸಾಕಷ್ಟು ನಷ್ಟ ಅನುಭವಿಸುತ್ತಿದ್ದಾರೆ.
ಬಯಲುಸೀಮೆ ಜಿಲ್ಲೆಗಳಲ್ಲಿ ಒಂದಾದ ಬೆಂಗ ಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕಳೆದ ಬಾರಿ ಉತ್ತಮ ಮಳೆಯಾದ್ದರಿಂದ ಕೆರೆಗಳಲ್ಲಿ ನೀರು ಬರುವಂತಾಗಿದೆ. ದೇವನಹಳ್ಳಿ ತಾಲೂಕಿ ನಲ್ಲಿ ನಾಗವಾರ, ಹೆಬ್ಟಾಳ, ಶುದ್ಧಿ ಕರಿಸಿದ ನೀರು ಕೆರೆಗಳಿಗೆ ಬಿಟ್ಟಿದ್ದರಿಂದ ಕೆರೆಗಳಲ್ಲಿ ನೀರು ಇರುವಂತಾಗಿದೆ. ಬೆಂಗಳೂರು ಗ್ರಾಮಾಂ ತರ ಜಿಲ್ಲೆಯ ನಾಲ್ಕು ತಾಲೂಕುಗಳಾದ ದೇವನ ಹಳ್ಳಿ , ಹೊಸಕೋಟೆ, ನೆಲ ಮಂಗಲ ಮತ್ತು ದೊಡ್ಡ ಬಳ್ಳಾಪುರದಲ್ಲಿ ಮೀನು ಗಾರಿಕೆ ಇದೆ. ಬೇಸಿಗೆ ಸೆಖೆ ಜನರನ್ನು ಕಾಡುತ್ತಿದೆ. ಮಾಂಸಾ ಹಾರ ಸೇವನೆಯಿಂದ ಜನರು ಕೊಂಚ ದೂರ ಉಳಿದಿದ್ದಾರೆ. ಮೀನಿನ ಉತ್ಪನ್ನಗಳ ಬಳಕೆ ಕೂಡಾ ಕಡಿಮೆಯಾಗಿದೆ. ಇದರಿಂದ ಬೇಡಿಕೆ ಎಲ್ಲೆಡೆ ಕುಸಿತ ಬಂದಿದೆ. ಬೇಡಿಕೆಗಿಂತ ಪೂರೈಕೆ ಹೆಚ್ಚಿದ ಪರಿ ಣಾಮ ಮೀನಿನ ದರ ಇಳಿಕೆಯಾಗಿದೆ. ಮಳೆಯ ಪರಿಣಾಮ ಕೆರೆ ಗಳಿಗೆ ನೀರು ಬಂದು ಮೀನುಗಾರಿಕೆ ಗರಿಗೆದರಿದ್ದು ಆದರೆ ಈ ಬಾರಿ ಬೇಸಿಗೆಯಲ್ಲಿ ತಾಪ ಮಾನಕ್ಕೆ ಮತ್ಸ್ಯೋದ್ಯಮ ತತ್ತರಿಸಿದೆ. ಕೆರೆಗಳಲ್ಲಿ ನೀರು ಇಳಿದ ಪರಿಣಾಮ ಬೇಗನೆ ಮೀನು ಹಿಡಿಯ ಲಾಗು ತ್ತಿದೆ. ಉತ್ಪಾದನೆ ಹೆಚ್ಚಿ ಬೇಡಿಕೆ ಕುಸಿತವಾಗುತ್ತಿದೆ.
ಮತ್ಸ್ಯದರ್ಶಿನಿ ಮೀನಿನ ಉತ್ಪಾದನೆಗಳ ಕ್ಯಾಂಪಿಂಗ್ ಪ್ರಾರಂಭ: ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ಕೋರ್ಟ್ ರಸ್ತೆಯಲ್ಲಿ ಮೀನುಗಾರಿಕೆ ಇಲಾಖೆ ಸಹ ಯೋಗ ದೊಂದಿಗೆ ಮತ್ಸ್ಯದರ್ಶಿನಿ ಎಂಬ ಮೀನಿನ ಉತ್ಪಾದನೆಗಳ ಕ್ಯಾಂಪಿಂಗ್ ಪ್ರಾರಂಭ ವಾಗಿದೆ. ಈ ಮೂಲಕ ಮೀನುಗಳಿಗೆ ಮಾರುಕಟ್ಟೆ ನೀಡುವ ಜತೆ ಮೀನುಗಳಿಗೆ ಆಹಾರದ ಉತ್ತೇಜನ ನೀಡುವ ಕೆಲಸವಾಗಿದೆ. ಉತ್ತಮ ಸ್ಪಂದನೆ ದೊರೆಯುತ್ತಿದೆ. ಸಿಗಡಿ ಮೀನು ಆರೋಗ್ಯಕ್ಕೆ ಅನುಕೂಲಕರ ಆಹಾರವಾದ್ದರಿಂದ ಬೇಡಿಕೆ ಹೆಚ್ಚಿರುವ ಹಿನ್ನೆಲೆಯಲ್ಲಿ ಸಾಕಾಣಿಕೆ ಹೆಚ್ಚಿದ್ದು ಬೇಸಿಗೆ ಹಿನ್ನೆಲೆಯಲ್ಲಿ ಅದರ ಬೇಡಿಕೆ ಕುಸಿದು ಪ್ರತಿ ಕೆಜಿಗೆ 500-400 ದರ ಇಳಿದಿದೆ.
ಮಳೆಗಾಲ ನಂತರ ಬೇಸಿಗೆ ಕಾಲದವರೆಗೂ ಮೀನು ಗಳಲ್ಲಿ ಹೆಚ್ಚಿನ ತೂಕ ಬರುವಂತೆ ಬೆಳೆಸಲಾಗುತ್ತದೆ. ವಾರಕ್ಕೊಮ್ಮೆ ಮೀನು ಹಿಡಿಯ ಲಾಗುತ್ತದೆ. ಬೇಸಿಗೆ ಕಾಲದಲ್ಲಿ ಮೀನುಗಳು ನೀರಿನ ಪ್ರಮಾಣ ಇಳಿಕೆ ಹಾಗೂ ಬಿಸಿಲಿನ ತಾಪಕ್ಕೆ ಸಾಯುವ ಸಾಧ್ಯತೆ ಇದ್ದು, ಒಂದು ಕೆಜಿಗೂ ಹೆಚ್ಚು ತೂಗುವ ಮೀನು ಹಿಡಿಯಲಾಗುತ್ತದೆ. ವಾರಕ್ಕೆ 2-3 ಬಾರಿ ಮೀನು ಹಿಡಿಯು ವುದರಿಂದ ಉತ್ಪಾದನೆಯಲ್ಲಿ ಹೆಚ್ಚಳವಾಗುತ್ತದೆ. ಸದ್ಯಕ್ಕೆ ಮೀನಿನ ಉತ್ಪಾದನೆ 70 ಟನ್ ದಾಟಿದೆ.
ಬೇಸಿಗೆ ಸಂದರ್ಭದಲ್ಲಿ ತಾಪಮಾನ ಹೆಚ್ಚಾಗುವುದರಿಂದ ಮೀನು ಮಾರಾಟಗಾರರಿಗೆ ಸಾಕಷ್ಟು ತೊಂದರೆ ಎದುರಿಸಬೇಕಾಗುತ್ತದೆ. ಮೀನುಗಳ ದರದಲ್ಲಿ ಕಳೆದ ದಿನಗಳಿಂದ ಕುಸಿತವಾಗಿದೆ. ಸಾಕಷ್ಟು ಪ್ರಮಾಣದಲ್ಲಿ ಮೀನು ಮಾರುಕಟ್ಟೆಗೆ ಬರುತ್ತಿದೆ. ಬೇಸಿಗೆ ಕಾಲದಲ್ಲಿ ಕೆರೆಗಳಲ್ಲಿ ನೀರು ಕಡಿಮೆ ಯಾಗುತ್ತದೆ. ಮೀನು ಮಾರಾಟಕ್ಕೆ ಉತ್ತಮ ಮಾರುಕಟ್ಟೆ ಒದಗಿಸಬೇಕು
. – ಆಂಜಿನಪ್ಪ, ಮೀನು ಮಾರಾಟಗಾರ
ಬೇಸಿಗೆ ಕಾಲದಲ್ಲಿ ಮೀನು ಬೇಡಿಕೆ ಕುಸಿತಗೊಳ್ಳುತ್ತದೆ. ತಾಪಮಾನ ಹೆಚ್ಚಾಗುವುದರಿಂದ ಕೆರೆಗಳಲ್ಲಿ ನೀರು ಇಳಿಮುಖವಾಗುತ್ತದೆ. ವಾರಕ್ಕೆ 2-3 ಬಾರಿ ಕೆರೆಗಳಲ್ಲಿ ಮೀನುಗಳನ್ನು ಹಿಡಿದು ಮಾರಾಟ ಮಾಡಲಾಗುತ್ತದೆ. ಪೂರೈಕೆ ಹೆಚ್ಚಿದೆ. ಜಿಲ್ಲೆಯಲ್ಲಿ ಮೀನು ಮಾರಾಟ ಮತ್ತು ಸಾಕಾಣಿಕೆಗೆ ಹೆಚ್ಚಿನ ಪ್ರೋತ್ಸಾಹ ವನ್ನು ನೀಡಲಾಗುತ್ತಿದೆ.
– ನಾಗರಾಜ್, ಮೀನುಗಾರಿಕೆ ಇಲಾಖೆ ಉಪನಿರ್ದೇಶಕ