Advertisement

camp ವಾಕ್‌

02:46 AM Mar 23, 2019 | Team Udayavani |

ನಗರದಲ್ಲಿ ನಡೆಯುವ ವಿಭಿನ್ನ ಕ್ಷೇತ್ರಗಳಿಗೆ ಸಂಬಂಧಿಸಿದ ಬೇಸಗೆ ಶಿಬಿರಗಳ ಪಟ್ಟಿಯನ್ನು ಹಿಂದಿನ ವಾರ ನೀಡಿದ್ದೆವು. ಈ ಬಾರಿ, ಬೇಸಗೆಗೆ ಮಕ್ಕಳನ್ನು ಕೂಲಾಗಿಡುವ ಇನ್ನಷ್ಟು ಬೇಸಗೆ ಶಿಬಿರಗಳ ಪಟ್ಟಿ ನಿಮ್ಮ ಮುಂದಿಡುತ್ತಿದ್ದೇವೆ.

Advertisement

ಕುದುರೆ ಬಂತು ನೋಡಣ್ಣ
ಪೌರಾಣಿಕ ಸಿನಿಮಾಗಳಲ್ಲಿ ಕುದುರೆ ಸವಾರಿ ಮಾಡುವ ರಾಜ ಒಂದು ಕಾಲದಲ್ಲಿ ಮಕ್ಕಳ ಕಣ್ಮಣಿಯಾಗಿದ್ದ. ಆತನ ಜಾಗದಲ್ಲಿ ಮಕ್ಕಳು ತಮ್ಮನ್ನು ಕಲ್ಪಿಸಿಕೊಂಡು ಖುಷಿಪಡುತ್ತಿದ್ದರು. ಇಂದು ಪೌರಾಣಿಕ ಸಿನಿಮಾಗಳೇ ಇಲ್ಲದಿರಬಹುದು, ಆದರೆ ಕುದುರೆಗಳಂತೂ ಇವೆ. ಈಗಲೂಕುದುರೆಯನ್ನುನೋಡು ವುದೆಂದರೆ ಮಕ್ಕಳಿಗೆ ಅಚ್ಚುಮೆಚ್ಚು. ಕೆಲ ಪ್ರವಾಸಿ ತಾಣಗಳಲ್ಲಿ ಕುದುರೆ ಮೇಲೆ ಮಕ್ಕಳನ್ನು ಕೂರಿಸಿ ಕುದುರೆ ಮಾಲೀಕ ಅವರನ್ನು ಒಂದು ಸುತ್ತು ಕರೆದುಕೊಂಡು ಹೋಗುತ್ತಾನೆ. ಕುದುರೆಗೆ ಹಗ್ಗ ಕಟ್ಟಿ ಕರೆದುಕೊಂಡು ಹೋಗುವುದಕ್ಕೇ ಮಕ್ಕಳು ಇಷ್ಟೊಂದು ಖುಷಿಪಟ್ಟರೆ ಇನ್ನು ಕುದುರೆ ಸವಾರಿ ಮಾಡಿದರೆ ಇನ್ನೆಷ್ಟು ಖುಷಿ ಪಡುವರೋ? ಬೆಂಗಳೂರು ಹಾರ್ಸ್‌ ರೈಡಿಂಗ್‌ ಸ್ಕೂಲ್‌(ಬಿ.ಎಚ್‌. ಆರ್‌.ಎಸ್‌) ಮಕ್ಕಳಿಗಾಗಿ ಕುದುರೆ ಸವಾರಿ ಕಲಿಸುವ ಬೇಸಗೆ ಶಿಬಿರವನ್ನು ಆಯೋಜಿಸಿದೆ. ಕುದುರೆ ಸವಾರಿಯ ಜೊತೆಗೆ ಇನ್ನಿತರ ಚಟುವಟಿಕೆಗಳನ್ನೂ ಶಿಬಿರ ಒಳಗೊಂಡಿದೆ.

ಸೈಕಲ್‌ ರಿಪೇರಿ ಮಾಡ್ತೀರಾ? “ಏನನ್ನಾದರೂ ಹಾಳುಗೆಡವಿ ರಿಪೇರಿ ಮಾಡದಿದ್ದರೆ ಸಮಾಧಾನವೇ ಇಲ್ಲ’ ಎಂದು ಅಮ್ಮಂದಿರು ಮಕ್ಕಳನ್ನು ದೂರುವುದನ್ನು ನೋಡಿರಬಹುದು. ಮಕ್ಕಳಿಗೆ ರಿಪೇರಿ ಕೆಲಸಗಳಲ್ಲಿ ತೊಡಗಿಕೊಳ್ಳುವುದೆಂದರೆ ಏನೋ ಆನಂದ ಎನ್ನುವುದು ಇದರಿಂದ ತಿಳಿಯುತ್ತದೆ. ರಿಪೇರಿ ಮಾಡುವುದು ತಪ್ಪಲ್ಲ, ತಪ್ಪಾಗಿ ರಿಪೇರಿ ಮಾಡುವುದು ತಪ್ಪು. ಬಹುತೇಕ ಮಕ್ಕಳ ಬಳಿ ಸೈಕಲ್‌ ಇರುತ್ತದೆ. ಸದಾ ಒಂದಲ್ಲ ಒಂದು ಸಣ್ಣಪುಟ್ಟ ತೊಂದರೆಗಲಿಗೆ ಅದು ಈಡಾಗುತ್ತಿರುತ್ತದೆ. ಪ್ರತೀಸಲವೂ ಗ್ಯಾರೇಜಿಗೆ ಕೊಂಡೊಯ್ಯುವ ಬದಲು ಮನೆಯಲ್ಲೇ ರಿಪೇರಿ ಮಾಡುವುದು ಸಾಧ್ಯವಾದರೆ ಚೆನ್ನ ಅಲ್ಲವೆ? ಮಕ್ಕಳಿಗೆ ಸೈಕಲ್‌ ರಿಪೇರಿ ಕಲಿಸುವ ಶಿಬಿರವನ್ನು “ಟ್ರ್ಯಾಕ್‌ & ಟ್ರೇಲ್‌’ ನಡೆಸುತ್ತಿದೆ.

ವೈಶಿಷ್ಟ್ಯ
 ಸೈಕಲ್‌ ತುಳಿಯುವ ತಂತ್ರಗಳು
 ಬಿಡಿಭಾಗಗಳ ಪರಿಚಯ
 ಸೈಕ್ಲಿಂಗ್‌ನ ಪ್ರಯೋಜನ
 ಸಣ್ಣಪುಟ್ಟ ರಿಪೇರಿ
 ನಿರ್ವಹಣಾ ತಂತ್ರಗಳು
 ಟೂಲ್‌ಕಿಟ್‌ ನೀಡುತ್ತಾರೆ

ವಯೋಮಿತಿ: 12ರಿಂದ ಮೇಲ್ಪಟ್ಟು
 ಎಲ್ಲಿ?: ಟ್ರ್ಯಾಕ್‌ & ಟ್ರೇಲ್‌, ನಾಗರಭಾವಿ
ಔಟರ್‌ ರಿಂಗ್‌ ರೋಡ್‌
 ಯಾವಾಗ?: ಮೇ 4- ಮೇ 31
 ಸಂಪರ್ಕ:  9900019180

Advertisement

ಇವು ಜತೆಗಿರಲಿ
 ಬೂಟ್ಸ್‌, ಜೀನ್ಸ್‌ ಪ್ಯಾಂಟ್‌ ತೊಟ್ಟಿರಬೇಕು
ರೈಡಿಂಗ್‌ ಹೆಲ್ಮೆಟ್‌(ಇಲ್ಲದವರಿಗೆ ಶಿಬಿರದಲ್ಲಿ
ಒದಗಿಸಲಾಗುವುದು)

ವಯೋಮಿತಿ: 5 ವರ್ಷ ಮೇಲ್ಪಟ್ಟು
ಎಲ್ಲಿ?: ಬೆಂಗಳೂರು ಹಾರ್ಸ್‌ ರೈಡಿಂಗ್‌ ಸ್ಕೂಲ್‌,
ಅಗ್ರಹಾರ, ಜಕ್ಕೂರು ಪೋಸ್ಟ್‌, ಯಲಹಂಕ
 ಯಾವಾಗ?: ಏಪ್ರಿಲ್‌ 15- 19(ಬ್ಯಾಚ್‌1)
 ಏಪ್ರಿಲ್‌ 22- 26(ಬ್ಯಾಚ್‌2)
ಏಪ್ರಿಲ್‌ 29- ಮೇ 3(ಬ್ಯಾಚ್‌3)
ಸಂಪರ್ಕ:  9535077771

ವೈಶಿಷ್ಟ್ಯ
ಸುರಕ್ಷತಾ ಕ್ರಮಗಳು
ಮೂವಿ ಟೈಮ್‌
 ಮನರಂಜನಾ ಚಟುವಟಿಕೆಗಳು
 ಬ್ರೇಕ್‌ಫಾಸ್‌

ಈಗ ಯೋಗ ! 

ಯೋಗದಿಂದ ದೈಹಿಕ ಸ್ವಾಸ್ಥ್ಯ ಮಾತ್ರವಲ್ಲ, ಮಾನಸಿಕ ಆರೋಗ್ಯವೂ ವೃದಿಟಛಿಯಾಗುವುದು. ಚಿಕ್ಕ ವಯಸ್ಸಿನಲ್ಲೇ ಮಕ್ಕಳಿಗೆ ಯೋಗಾಭ್ಯಾಸ ಮಾಡಿಸಿದರೆ ಅವರ ಭವಿಷ್ಯ ಉತ್ತಮವಾಗಿ ವಿಕಸನಗೊಳ್ಳುವುದು. ಊಧ್ವì ಗ ಶಾಲೆ ಮಕ್ಕಳಿಗಾಗಿ ಯೋಗ ಶಿಬಿರವನ್ನು ಹಮ್ಮಿಕೊಂಡಿದೆ. ಮಕ್ಕಳಿಗೆ ಬೋರಾಗದಂತೆ ಆಟದ ಸಾಮಾನುಗಳು ಮತ್ತು ಮನರಂಜನಾ ಚಟುವಟಿಕೆಗಳ ಮೂಲಕ ಯೋಗ ಕಲಿಸುವುದು ಈ ಶಿಬಿರದ ಹೆಗ್ಗಳಿಕೆ. ಶಿಬಿರದಲ್ಲಿ ಬರಿ ಯೋಗ ಮಾತ್ರವಲ್ಲದೆ ಕಥೆ ಹೇಳುವುದು, ಸಂಗೀತ
ಮುಂತಾದವನ್ನೂ ಕಲಿಸಲಾಗುತ್ತದೆ.

ವಯೋಮಿತಿ: 6- 12
ವೈಶಿಷ್ಟ್ಯ
ಸೂರ್ಯ ನಮಸ್ಕಾರ
ದೇಹದ ಸಮತೋಲನ ಕಾಪಾಡುವ ಆಸನಗಳು
 ಉಸಿರಾಟದ ವ್ಯಾಯಾಮ
 ಏಕಾಗ್ರತೆ ಹೆಚ್ಚಿಸುವ ಕಸರತ್ತು ಇವು ಜತೆಗಿರಲಿ
 ಆರಾಮದಾಯಕ ದಿರಿಸು
 ನೀರಿನ ಬಾಟಲಿ
ಎಲ್ಲಿ?: ಊಧ್ವì ಯೋಗ, 5ನೇ ಕ್ರಾಸ್‌,
ಎಚ್‌ಆರ್‌ಬಿಆರ್‌ ಲೇಔಟ್‌, 3ನೇ ಹಂತ, ಕಲ್ಯಾಣನಗರ
 ಯಾವಾಗ?: ಏಪ್ರಿಲ್‌ 15- 27 | ಸಂಪರ್ಕ:  9606689190

ರಂಗಶಂಕರ ಎಕ್ಸ್‌ಪ್ರೆಸ್‌

ವರ್ಷಪೂರ್ತಿ ರಂಗ ಚಟುವಟಿಕೆಗಳು ನಡೆಯುವ ರಂಗಶಂಕರ ರಂಗಮಂದಿರದಲ್ಲಿ ಮಕ್ಕಳ ರಂಗಭೂಮಿ ಶಿಬಿರ “ರಂಗಶಂಕರ ಸಮ್ಮರ್‌ ಎಕ್ಸ್‌ಪ್ರೆಸ್‌’ ಆಯೋಜನೆಯಾಗಿದೆ. ಮನರಂಜನಾ ಚಟುವಟಿಕೆಗಳ ನ್ನೊಳ ಗೊಂಡ ಕಾರ್ಯಾಗಾರಗಳು ಶಿಬಿರದ ಅಂಗವಾಗಿವೆ. ಮಕ್ಕಳ ಕ್ರಿಯಾಶೀಲತೆಯನ್ನು ಗುರುತಿಸುವ, ಅದನ್ನು ಪೋಷಿಸುವ ನಿಟ್ಟಿನಲ್ಲಿ ಶಿಬಿರದ ವೇಳಾಪಟ್ಟಿಯನ್ನು ರೂಪಿಸಲಾಗಿದೆ. ಅನೀಶ್‌ ವಿಕ್ಟರ್‌, ಸುಜಯ್‌, ಲಕ್ಷಿ ಕರುಣಾಕರಣ್‌, ಪಲ್ಲವಿ ಚಂದರ್‌, ಜ್ಯೋತ್ಸಾ ಬಿ. ರಾವ್‌ ಮತ್ತು ವಿಕ್ರಂ ಶ್ರೀಧರ್‌ ಶಿಬಿರದಲ್ಲಿ
ಪಾಲ್ಗೊಳ್ಳಲಿದ್ದಾರೆ.

ರಂಗಶಂಕರ ಎಕ್ಸ್‌ಪ್ರೆಸ್‌
ವಯೋಮಿತಿ: 8- 13
 ಎಲ್ಲಿ?: ರಂಗಶಂಕರ, ಜೆ.ಪಿ. ನಗರ
 ಯಾವಾಗ?: ಏಪ್ರಿಲ್‌ 1- 14 (ಬ್ಯಾಚ್‌1)
 ಏಪ್ರಿಲ್‌ 22- ಮೇ 5 (ಬ್ಯಾಚ್‌2)
 ಸಂಪರ್ಕ:  0 80-  26592777
 080-  80 26493982

ವೈಶಿಷ್ಟ್ಯ
 ಉತ್ತಮ ರಂಗಸಜ್ಜಿಕೆ
 ಕ್ರಿಯಾತ್ಮಕ ಪದ್ಧತಿ ಬಳಕೆ
ಇವು ಜತೆಗಿರಲಿ  ನೀರಿನ ಬಾಟಲಿ

ಬದುಕೇ ಚದುರಂಗದಾಟ

ಜೀವನವನ್ನು ಚೆಸ್‌ ಆಟಕ್ಕೆ ಹೋಲಿಸಲಾಗುತ್ತದೆ. ಅನಿರೀಕ್ಷಿತ ತಿರುವುಗಳು, ಬಿಡಿಸಿಕೊಳ್ಳಲು ಕಷ್ಟಕರವೆನಿಸುವ ನಡೆಗಳು, ಇವೆಲ್ಲದರಿಂದಾಗಿ ಬದುಕಿಗೂ ಚೆಸ್‌ ಆಟಕ್ಕೂ ಹೋಲಿಕೆ ಕಂಡುಕೊಳ್ಳಬಹುದು. ಚಿಕ್ಕವಯಸ್ಸಿನಲ್ಲೇ ಮಕ್ಕಳಿಗೆ ಚೆಸ್‌ ಆಟ ಕಲಿಸುವುದರಿಂದ ಅವರ ಬುದ್ಧಿ ಮತ್ತೆ ಚುರುಕಾಗುತ್ತದೆ. ಈ ಬಾರಿಯ ಬೇಸಗೆಗೆ ಬೆಂಗಳೂರುನಾರ್ತ್‌ ಚೆಸ್‌ ಫಾರಂ ಮಕ್ಕಳಿಗಾಗಿ ಚೆಸ್‌ ಶಿಬಿರವನ್ನುಹ ಮಿ ¾ಕೊಂಡಿದೆ. ಅಂತಾ ರಾಷ್ಟ್ರೀಯ ಮಟ್ಟದ ತರಬೇತು ದಾರರಿಂದ ಶಿಬಿರಾರ್ಥಿಗಳಿಗೆ ಚೆಸ್‌ ತರಬೇತಿ ನೀಡಲಾಗು ವುದು. ಪ್ರತಿ ಬ್ಯಾಚಿನಲ್ಲೂ 8 ಮಂದಿಗಷ್ಟೇ ಅವಕಾಶ. ಹೆಸರು ನೊಂದಾಯಿಸಲು ಕಡೆಯ ದಿನಾಂಕ ಮಾರ್ಚ್‌ 31.

ವೈಶಿಷ್ಟ್ಯ 
ಅಂತಾರಾಷ್ಟ್ರೀಯ ಚೆಸ್‌ ಸೆಟ್‌ ನೀಡಲಾಗುವುದು
 ತರಬೇತಿ ಪುಸ್ತಕ

ಇವು ಜತೆಗಿರಲಿ ನೀರಿನ ಬಾಟಲಿ

ವಯೋಮಿತಿ: 7ರಿಂದ ಮೇಲ್ಪಟ್ಟು
ಎಲ್ಲಿ?: ಬೆಂಗಳೂರು ನಾರ್ತ್‌ ಚೆಸ್‌ ಫಾರಂ, 5ನೇ
ಕ್ರಾಸ್‌, ಎ.ಎಂ.ಎಸ್‌.ಲೇಔಟ್‌, ವಿದ್ಯಾರಣ್ಯಪುರ
 ಯಾವಾಗ?: ಏಪ್ರಿಲ್‌ 1- 15(ಬ್ಯಾಚ್‌1)
 ಏಪ್ರಿಲ್‌ 16- 30(ಬ್ಯಾಚ್‌2)
 ಮೇ 1- 15(ಬ್ಯಾಚ್‌3)
ಮೇ 16- 30(ಬ್ಯಾಚ್‌4)
 ಸಂಪರ್ಕ:  9148296380,  9845512892

ಹದಿಹರೆಯದವರಿಗಾಗಿ ಬೇಸಗೆ ಶಿಬಿರ ಸಾಮಾನ್ಯವಾಗಿ ಬೇಸಗೆ ಶಿಬಿರ ಎಂದರೆ ಶಾಲೆಗೆ ಹೋಗುವ
ಮಕ್ಕಳನ್ನು ಗಮನದಲ್ಲಿರಿಸಿಕೊಂಡು ಆಯೋಜನೆ ಮಾಡಿರುತ್ತಾ ರೆ. ಅಲ್ಲಿನ ಎಲ್ಲಾ ಚಟುವಟಿಕೆಗಳೂ ಅದೇ ವಯಸ್ಸಿನ ಮಕ್ಕಳನ್ನು ಗಮನದಲ್ಲಿರಿಸಿಕೊಂಡು ಸಿದಟಛಿಪಡಿಸಲಾಗಿರುತ್ತದೆ. ಆ ನಿಟ್ಟಿನಲ್ಲಿ ಹೇಳುವುದಾದರೆ ಇದು ವಿಭಿನ್ನ ಬೇಸಗೆ ಶಿಬಿರ. “ಸ್ಕೂಲ್‌ ಆಫ್ ಮೀನಿಂಗ್‌ಫ‌ುಲ್‌ ಎಕ್ಸ್‌ಪೀರಿಯೆನ್ಸಸ್‌’ ಸಂಸ್ಥೆ ಹದಿಹರೆಯದವರಿಗಾಗಿ ಬೇಸಗೆ ಶಿಬಿರವನ್ನು ಆಯೋಜಿಸಿದೆ. ಅವರ ವ್ಯಕ್ತಿತ್ವ ವಿಕಸನಕ್ಕೆ ಅಗತ್ಯವಿರುವ ಎಲ್ಲಾ ಅಂಶಗಳನ್ನೂ ಗಣನೆಗೆ ತೆಗೆದುಕೊಂಡು ಇಲ್ಲಿನ ಚಟುವಟಿಕೆಗಳನ್ನು ವಿನ್ಯಾಸಗೊಳಿಸಲಾಗಿದೆ. ಡ್ರೋನ್‌, ಭಾಷಣ ಕಲೆ, ವಿಡಿಯೋ ಗೇಮ್‌ ಮೂಲಕ ಕತೆ ಹೇಳುವುದು ಮುಂತಾದ ಸ್ವಾರಸ್ಯಕರ ಆಟಗಳನ್ನು ಇದು
ಒಳಗೊಂಡಿದೆ.

ವೈಶಿಷ್ಟ್ಯ 
ನಾಯಕತ್ವ ಕಲಿಕೆ
 ಕ್ರಿಯಾಶೀಲ ಆಟಗಳು

ಇವು ಜತೆಗಿರಲಿ ನೀರಿನ ಬಾಟಲಿ

ವಯೋಮಿತಿ: 15 - 17
 ಎಲ್ಲಿ?: ಸ್ಕೂಲ್‌ ಆಫ್ ಮೀನಿಂಗ್‌ಫ‌ುಲ್‌
ಎಕ್ಸ್‌ಪೀರಿಯೆನ್ಸಸ್‌, ನಂ.681, 10ನೇ ಮುಖ್ಯರಸ್ತೆ,
ಕೋರಮಂಗಲ
 ಯಾವಾಗ?: ಮಾರ್ಚ್‌ 23- ಏಪ್ರಿಲ್‌ 31
 ಸಂಪರ್ಕ:  7676009639

Advertisement

Udayavani is now on Telegram. Click here to join our channel and stay updated with the latest news.

Next