Advertisement
ಡೋಪ್ ಟೆಸ್ಟ್ ವೇಳೆ “ಬಿ’ ಸ್ಯಾಂಪಲ್ ಕೂಡ ಪಾಸಿಟಿವ್ ಬಂದ ಕಾರಣ ಕಳೆದ ಶುಕ್ರವಾರ ಸುಮಿತ್ ಮಲಿಕ್ ಅವರಿಗೆ “ಯುನೈಟೆಡ್ ವರ್ಲ್ಡ್ ರೆಸ್ಲಿಂಗ್’ 2 ವರ್ಷಗಳ ನಿಷೇಧ ವಿಧಿಸಿತ್ತು. ಇದನ್ನು ಒಪ್ಪಿಕೊಳ್ಳಲು ಅಥವಾ ಇದರ ವಿರುದ್ಧ ಮೇಲ್ಮನವಿ ಸಲ್ಲಿಸಲು ಒಂದು ವಾರದ ಕಾಲಾವಕಾಶವನ್ನೂ ನೀಡಿತ್ತು. ಇದೀಗ ಸುಮಿತ್ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ.
Related Articles
“ನಾವು ವಾಡಾಕ್ಕೆ ಹೆಚ್ಚಿನ ಮಾಹಿತಿಗಾಗಿ ಮನವಿ ಸಲ್ಲಿಸಿದ್ದೇವೆ. ಸುಮಿತ್ ಮಲಿಕ್ ಅವರ “ಎ’ ಸ್ಯಾಂಪಲ್ ಫಲಿತಾಂಶ ನಗಣ್ಯವೆಂದೇ ಹೇಳಬೇಕು. ಈಗ “ಬಿ’ ಸ್ಯಾಂಪಲ್‌ನ ವಿವರ ಕೇಳಿದ್ದೇವೆ. ಕೊರೊನಾ ಸೋಂಕು ತಗುಲಿದ ವೇಳೆ ಏನೋ ಎಡವಟ್ಟು ಸಂಭವಿಸಿರಬೇಕು. ಸುಮಿತ್ ಖಂಡಿತವಾಗಿಯೂ ಮುಗ್ಧ. ಅವರು ಯಾವ ಕಾರಣಕ್ಕೂ 2 ವರ್ಷಗಳ ನಿಷೇಧಕ್ಕೆ ಅರ್ಹರಲ್ಲ’ ಎಂದು ಭಾರತೀಯ ಕುಸ್ತಿ ಅಸೋಸಿಯೇಶನ್ ಮೂಲವೊಂದು ಹೇಳಿದೆ.
Advertisement