Advertisement

ಸುಮಲತಾ ಟೂರಿಂಗ್‌ ಟಾಕೀಸ್‌, 18 ಕ್ಕೆ ಶೂಟಿಂಗ್‌ ಬಂದ್‌; ಶಿವರಾಮೇಗೌಡ

09:02 AM Apr 03, 2019 | Vishnu Das |

ಮಂಡ್ಯ : ಜಿದ್ದಾಜಿದ್ದಿನ ಕಣವಾಗಿರುವ ಮಂಡ್ಯ ಲೋಕಸಭಾ ಕ್ಷೇತ್ರ ದೇಶದ ಗಮನ ಸೆಳೆದಿದ್ದು, ಚುನಾವಣಾ ಪ್ರಚಾರದ ಕಾವು ದಿನದಿಂದ ದಿನಕ್ಕೆ ಏರುತ್ತಿದ್ದು ಹೇಳಿಕೆಗಳು ತೀವ್ರಗೊಳ್ಳುತ್ತಿವೆ. ಜೆಡಿಎಸ್‌ ಸಂಸದ ಶಿವರಾಮೇ ಗೌಡ ಅವರು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್‌ ಅವರನ್ನು ಟೂರಿಂಗ್‌ ಟಾಕೀಸ್‌ ಎಂದು ಕರೆದಿದ್ದಾರೆ.

Advertisement

ಚುನಾವಣಾ ಪ್ರಚಾರ ಸಭೆಯಲ್ಲಿ ಜೆಡಿಎಸ್‌ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಶಿವರಾಮೇಗೌಡ ಸುಮಲತಾ ಅವರು ತೀವ್ರವಾಗಿ ಕಿಡಿ ಕಾರಿದ್ದಾರೆ.

ಸುಮಲತಾ ಟೂರಿಂಗ್‌ ಟಾಕೀಸ್‌ ಆಗಿದ್ದು, 18 ರಂದು ಪ್ಯಾಕಪ್‌ ಮಾಡುತ್ತಾರೆ. ಚುನಾವಣೆ ಬಳಿಕ ಸುಮಕ್ಕಾನೂ ಇಲ್ಲ,ಪಮಕ್ಕಾನೂ ಇಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಶಿವರಾಮೇ ಗೌಡ ಅವರು ಸೋಮವಾರ ಸಮಲತಾ ಅವರು ನಾಯ್ಡು, ರಾಕ್‌ಲೈನ್‌ ವೆಂಕಟೇಶ್‌ ಕೂಡ ನಾಯ್ಡು, ದರ್ಶನ್‌ ಕೂಡ ನಾಯ್ಡು, ಮಂಡ್ಯವನ್ನು ನಾಯ್ಡುಮಯ ಮಾಡಬೇಡಿ ಎಂದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next