Advertisement

“ಅಂಬಿ’ಹೊಸ ಲುಕ್‌ಗೆ ಸುಮಲತಾ ಫಿದಾ: ಟ್ವೀಟ್‌

03:35 PM Jul 27, 2018 | Team Udayavani |

ಸುದೀಪ್ ಅವರ ಬ್ಯಾನರ್ ನಲ್ಲಿ ತಯಾರಾಗಿರುವ “ಅಂಬಿ ನಿಂಗೆ ವಯಸ್ಸಾಯ್ತೋ’ ಚಿತ್ರೀಕರಣ ಮುಗಿದಿದ್ದು, ತೆರೆಗೆ ಬರಲು ಸಜ್ಜಾಗಿದೆ. ಸ್ಯಾಂಡಲ್‌ವುಡ್‌ನ‌ಲ್ಲಿ ಬಹು ನಿರೀಕ್ಷೆ ಮೂಡಿಸಿರುವ ಈ ಚಿತ್ರದಲ್ಲಿ ಅಂಬಿ ಅವರ ಯೌವ್ವನದ ಪಾತ್ರದಲ್ಲಿ ಸುದೀಪ್‌ ಅವರು ನಟಿಸುತ್ತಿದ್ದಾರೆ. ಇದರ ಜತೆಗೆ ಅಂಬಿಯ ಲುಕ್‌ ಕೂಡ ವಿಭಿನ್ನವಾಗಿದೆ.

Advertisement

ಈಗಾಗಲೇ ರಿಲೀಸ್‌ ಆಗಿರುವ ಕರ್ಣನ ಲುಕ್‌ ಗಮನ ಸೆಳೆಯುದ್ದು, ಜರ್ಕಿನ್‌ ತೊಟ್ಟು, ಹೆಲ್ಮೆಟ್‌ ಧರಿಸಿ, ಕಣ್ಣಿಗೆ ಕಪ್ಪು ಕನ್ನಡ ಹಾಕಿಕೊಂಡು ಬುಲ್ಲೆಟ್‌ ಬೈಕ್ನಲ್ಲಿ ಸವಾರಿಗೆ ರೆಡಿಯಾಗಿರುವ ಅಂಬಿಯ ಈ ಪೋಸ್ಟರ್‌ ಚಿತ್ರದ ಕುರಿತು ಕುತೂಹಲವನ್ನು ಹೆಚ್ಚಿಸುತ್ತಿದೆ. ಅಲ್ಲದೇ ಈ ಗೆಟಪ್‌ಗೆ ಸ್ಯಾಂಡಲ್‌ವುಡ್‌ ಮಂದಿ ಫಿದಾ ಆಗಿದ್ದಾರೆ.

ಅಷ್ಟೇ ಏಕೆ ಅಂಬಿ ಅವರ ಧರ್ಮಪತ್ನಿ ಸುಮಲತಾ ಕೂಡ ತಮ್ಮ ಪತಿಯ ಲುಕ್‌ಗೆ ಕ್ಲೀನ್‌ ಬೋಲ್ಡ್‌ ಆಗಿದ್ದು, ಹಿಂದೆಂದೂ ನಾನು ಅವರನ್ನೂ ಈ ಲುಕ್‌ನಲ್ಲಿ ನೋಡಿಲ್ಲ. ಈ ಚಿತ್ರವನ್ನು ತೆರೆಯ ಮೇಲೆ ನೋಡಲು ತುಂಬಾ ಉತ್ಸುಕಳಾಗಿದ್ದೇನೆ’ ಎಂದು ಸುಮಲತಾ ಅಂಬರೀಶ್‌ ತಮ್ಮ ಟ್ವಿಟರ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಇನ್ನು “ಅಂಬಿ ನಿಂಗೆ ವಯಸ್ಸಾಯ್ತೋ’ ಚಿತ್ರದ ಆಡಿಯೋ ಶೀಘ್ರದಲ್ಲಿಯೇ ಬಿಡುಗಡೆಯಾಗಲಿದ್ದು, ಚಿತ್ರವನ್ನು ಗುರುದತ್‌ ಗಾಣಿಗ ನಿರ್ದೇಶಿಸುತ್ತಿದ್ದು, ಸುದೀಪ್‌ ಜೊತೆ ಸಹಾಯಕರಾಗಿದ್ದ ಅವರಿಗೆ ಇದು ಮೊದಲ ಸಿನಿಮಾ. ಚಿತ್ರಕ್ಕೆ ಸುದೀಪ್‌ ಅವರ ಚಿತ್ರಕಥೆ ಇದೆ. ಜಾಕ್‌ ಮಂಜು ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

Advertisement

ಚಿತ್ರದಲ್ಲಿ ಅಂಬರೀಶ್‌ ಜೋಡಿಯಾಗಿ ಸುಹಾಸಿನಿ ನಟಿಸುತ್ತಿದ್ದಾರೆ. ಅಂದಹಾಗೆ, “ಅಂಬಿ ನಿಂಗೆ ವಯಸ್ಸಾಯ್ತೋ’ ತಮಿಳಿನ “ಪಾ ಪಾಂಡಿ’ ಚಿತ್ರದ ರೀಮೇಕ್‌. ಚಿತ್ರಕ್ಕೆ ಅರ್ಜುನ್‌ ಜನ್ಯಾ ಸಂಗೀತ, ಜೆಬಿನ್‌ ಜಾಕೋಬ್‌ ಛಾಯಾಗ್ರಹಣ ಚಿತ್ರಕ್ಕಿದೆ.

Advertisement

Udayavani is now on Telegram. Click here to join our channel and stay updated with the latest news.

Next