Advertisement

ಮಂಡ್ಯದಲ್ಲಿ ಸುಮಲತಾ, ಸಿಎಂ ಮಾತಿನೋಕುಳಿ

03:38 PM Jul 16, 2019 | Team Udayavani |

ರಾಜ್ಯದ ಹೈವೋಲ್ಟೇಜ್‌ ಕ್ಷೇತ್ರಗಳಲ್ಲಿ ಒಂದಾದ ಮಂಡ್ಯದಲ್ಲಿ ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಸುಮಲತಾ ಹಾಗೂ ಮೈತ್ರಿ ಅಭ್ಯರ್ಥಿ ನಿಖೀಲ್‌ ಕುಮಾರಸ್ವಾಮಿ ತಂದೆ, ಸಿಎಂ ಕುಮಾರಸ್ವಾಮಿ ನಡುವಿನ ವಾಕ್ಸಮರ ಬುಧವಾರವೂ ಮುಂದುವರಿದಿದೆ. ಜಿಲ್ಲೆಯ ವಿವಿಧೆಡೆ ಪ್ರಚಾರ ನಡೆಸಿದ ಇಬ್ಬರೂ ನಾಯಕರು ಪರಸ್ಪರ ಆರೋಪ-ಪ್ರತ್ಯಾರೋಪ ನಡೆಸಿದ್ದು, ಅದರ ಸಣ್ಣ ಝಲಕ್‌ ಇಲ್ಲಿದೆ.

Advertisement

ಸುಮಲತಾರ ಬಣ್ಣದ ಆಟ ಬಹಳ ದಿನ ನಡೆಯಲ್ಲ

ನಾನು ಕ್ಷೇತ್ರದ ಹಳ್ಳಿ, ಹಳ್ಳಿಗಳಿಗೆ ಹೋಗುತ್ತೇನೆ. ನಿಮ್ಮ ಜೊತೆ ದುಡಿಮೆ ಮಾಡುವವರು ಬೇಕಾ? ಅಥವಾ ಮಜಾ ಮಾಡೋರು ಬೇಕಾ? ಎಂದು ಕೇಳುತ್ತೇನೆ. ಜನರೇ ಈ
ಬಗ್ಗೆ ಉತ್ತರಿಸಲಿ.

ಪಕ್ಷೇತರ ಅಭ್ಯರ್ಥಿ ದುಡ್ಡು ಹಂಚುತ್ತಿದ್ದಾರೆ. ಆ ಹಣ ಅವರುಕಷ್ಟಪಟ್ಟು, ಬೆವರು ಸುರಿಸಿ
ಗಳಿಸಿದ್ದಾ?

ಮಂಡ್ಯ ಜಿಲ್ಲೆಯಲ್ಲಿ 200ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಾಗ ಸುಮಲತಾ
ಎಲ್ಲಿದ್ದರು. ಆಗ ರೈತರ ಕಷ್ಟಕ್ಕೆ ಸ್ಪಂದಿಸಲು ಅವರೇಕೆ ಬರಲಿಲ್ಲ?

Advertisement

ಸುಮಲತಾ ಅವರ ಬಣ್ಣದ ಆಟ ಬಹಳ ದಿನ ನಡೆಯುವುದಿಲ್ಲ.

ಮೈಸೂರಿನ ಯಾವ ಹೋಟೆಲ್‌ನಲಿ ಕುಳಿತು ಹಣ ಕೊಟ್ಟರು. ಅವರಿಗೆ ಯಾರು ಹಣ ಸಂದಾಯ ಮಾಡುತ್ತಿದ್ದಾರೆ ಅಂತೆಲ್ಲಾ ಗೊತ್ತಿದೆ. ನಯಾಪೈಸೆ ಹಣ ಖರ್ಚು ಮಾಡದೆ ಇವರ ಹಿಂದೆ ಜನ ಬರುತ್ತಿದ್ದಾರಾ?.

ಚುನಾವಣೆ ವೇಳೆ ಮತ ಕೇಳಲು ಹಲವಾರು ಎತ್ತುಗಳು ಬರುತ್ತವೆ ಎಂದಿದ್ದೆ. ಅವು ಹೊಲ ಉಳ್ಳೋ ಎತ್ತುಗಳಲ್ಲ, ಶೋಕಿ ಎತ್ತುಗಳು ಎಂದಿದ್ದೆ. ಅವರೇ ಜೋಡೆತ್ತು ಎಂದು
ಹೇಳಿಕೊಂಡವರು.

ನಮ್ಮ ಸರ್ಕಾರ ಯಾವುದೇ ಫೋನ್‌ ಕದ್ದಾಲಿಕೆ ಮಾಡಿಲ್ಲ. ಬೇಕಿದ್ದರೆ ಕೇಂದ್ರ
ಸರ್ಕಾರದಿಂದ ವಿಶೇಷ ತನಿಖೆ ನಡೆಸಲಿ. ತನಿಖೆಗೆ ಸಹಕರಿಸಲು ನಾನು ಸಿದಟಛಿ.

ಸುಮಲತಾ ಅಂಬರೀಶ್‌ ಅವರು ಕೇಂದ್ರ ತಂಡ ಅಥವಾ ಬಿಎಸ್‌ಎಫ್ ಇಲ್ಲದಿದ್ದರೆ ಗಡಿ
ಕಾಯೋ ಯೋಧರನ್ನೇ ಭದ್ರತೆಗೆ ನೇಮಿಸಿಕೊಳ್ಳಲಿ. ತಮ್ಮ ಭದ್ರತೆಗೆ ಸೂಕ್ತ ಕ್ರಮ ತೆಗೆದುಕೊಳ್ಳಲಿ. ಅಗತ್ಯಬಿದ್ದರೆ ಕೇಂದ್ರಕ್ಕೆ ನಾನೇ ಪತ್ರ ಬರೆಯುತ್ತೇನೆ.

ಮಗನಿಗೋಸ್ಕರ ಸಿಎಂಗೆ ಮಂಡ್ಯ ಜನರು ಬೇಕಾ?
ಮಗನಿಗೋಸ್ಕರ ಮಾತ್ರ ಇವರಿಗೆ ಮಂಡ್ಯದ ಜನರು ಬೇಕಾ. ಮಗನನ್ನು ತಿರಸ್ಕರಿಸಿದರೆ ಮಂಡ್ಯ ಜನರು ಇವರಿಗೆ ಬೇಡವೇ?.

ಮಗನನ್ನು ಗೆಲ್ಲಿಸಿದರೆ ಮಂಡ್ಯ ಅಭಿವೃದ್ಧಿ ಮಾಡುತ್ತೇನೆ ಎನ್ನುತ್ತಿದ್ದಾರೆ. ಹಾಗಾದರೆ ಏಳೆಂಟು ಎಂಎಲ್‌ಎ, ಎಂಎಲ್‌ಸಿಗಳು, ಸಚಿವರು ಸಿಎಂಗೆ
ಏಕೆ ಬೇಕು?.

ಅಕ್ರಮವಾಗಿ ಸಾವಿರಾರು ಕೋಟಿ ರೂ.ಹಣ ಮಾಡಿದವರಿಗೆಲ್ಲಾ ಶಾಸ್ತಿ ಆಗಿದೆ. ಇವರಿಗೂ ಜನರು ಉತ್ತರ ಕೊಡುವ ಕಾಲ ಬಂದಿದೆ.

ಡಿಕೆಶಿ ಹಾಗೂ ಕುಮಾರಸ್ವಾಮಿಯವರು ನಿನ್ನೆ- ಮೊನ್ನೆಯವರೆಗೂ ಬೈದಾಡುತ್ತಿದ್ದರು. ಅಸೆಂಬ್ಲಿ  ಯಲ್ಲಿ ಡಿಕೆಶಿ ಟೇಬಲ್‌ ಕುಟ್ಟಿ, ಚುಂಚನಗಿರಿ ಮಠ ಒಡೆದವರು ಎಂದು ಆರೋಪಿಸಿದ್ದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗೂಳಿಗಳಂತೆ ಹೋರಾಟ ಮಾಡುತ್ತಿದ್ದವರು ಇಂದು ನಾವು ಜೋಡೆತ್ತುಗಳು ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ನಿಜವಾದ ಜೋಡೆತ್ತುಗಳು ಯಾವುವು, ಕಳ್ಳೆತ್ತುಗಳು ಯಾವುವು ಎನ್ನುವುದನ್ನು ನಾನು
ಹೇಳುವುದಿಲ್ಲ. ಅದನ್ನು ಜನ ನಿರ್ಧರಿಸುತ್ತಾರೆ.

ಗುಪ್ತಚರ ಇಲಾಖೆಯನ್ನು ಕುಮಾರಸ್ವಾಮಿ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ನಾನೇ ಈ ಬಗ್ಗೆ ದೂರು ನೀಡಿರುವೆ. ನನ್ನಫೋನ್‌  ಕದ್ದಾಲಿಸುತ್ತಿರುವುದು ಗಮನಕ್ಕೆ
ಬಂದಿದ್ದರಿಂದ ದೂರು ಕೊಟ್ಟಿದ್ದೇನೆ.

ಏಪ್ರಿಲ್‌ 1 ಅಥವಾ 2ರಿಂದ ದರ್ಶನ್‌ ಹಾಗೂ ಯಶ್‌ ಪ್ರಚಾರಕ್ಕೆ ಆಗಮಿಸಲಿದ್ದಾರೆ.

ಮಹಿಳೆಯರ ಧ್ವನಿಯಾಗಿ ಸಂಸತ್ತಿನಲ್ಲಿ ಧ್ವನಿ ಎತ್ತಲು ನನಗೆ ಆಶೀರ್ವಾದ ಮಾಡಿ.

ಜೆಡಿಎಸ್‌ನವರಿಗೆ ಈಗಾಗಲೇ ಸೋಲಿನ ವಾಸನೆ ಬಂದಿದೆ. ಹೀಗಾಗಿ, ಅಡ್ಡ ದಾರಿ ಹಿಡಿದು ಮೂವರು ಸುಮಲತಾ ಹೆಸರಿನ ಮಹಿಳೆಯರನ್ನು ಹುಡುಕಿ ಕಣಕ್ಕಿಳಿಸಿದ್ದಾರೆ. ನನ್ನ ಹೆಸರಿನ ನೂರು ಸುಮಲತಾರನ್ನು ಕಣಕ್ಕಿಳಿಸಿದರೂ ನಾನು ಹೆದರುವುದಿಲ್ಲ.

ನಾನೀಗ ಒಬ್ಬಂಟಿಯಲ್ಲ. ಬಿಜೆಪಿ, ರಾಜ್ಯ ರೈತಸಂಘ, ಕಾಂಗ್ರೆಸ್‌ ಕಾರ್ಯಕರ್ತರು, ಇತರ ಪ್ರಗತಿಪರ ಸಂಘಟನೆಗಳು ನನಗೆ ಬೆಂಬಲ ನೀಡಿವೆ. ಬಿ.ಎಸ್‌.ಯಡಿಯೂರಪ್ಪ ನನಗೆ ಆಶೀರ್ವಾದ ಮಾಡಿ ಕಳುಹಿಸಿದ್ದಾರೆ.

ಆಂಜನೇಯ ಪೂಜೆಗೆ ಬಾರದ ಅನಿತಾ
ಮದ್ದೂರು: ತಮ್ಮ ಪುತ್ರನ ಗೆಲುವಿಗೆ ಪ್ರಾರ್ಥಿಸಿ ಅನಿತಾ ಕುಮಾರಸ್ವಾಮಿ ಕಳೆದ ನಾಲ್ಕು ಮಂಗಳವಾರ ಸತತವಾಗಿ ಇಲ್ಲಿನ ಹೊಳೆ ಆಂಜನೇಯಸ್ವಾಮಿ ದೇವಾಲಯಕ್ಕೆ
ಆಗಮಿಸಿ, ಒಂದೂಕಾಲು ರೂಪಾಯಿ ಹರಕೆ ಹೊತ್ತು ವಿಶೇಷ ಪೂಜೆ ಸಲ್ಲಿಸಿ ಗಮನ ಸೆಳೆದಿದ್ದರು. ಆದರೆ, ಐದನೇ ಮಂಗಳವಾರ ಅವರು ಇಲ್ಲಿಗೆ ಆಗಮಿಸಲಿಲ್ಲ. ಪತಿ,
ಮುಖ್ಯಮಂತ್ರಿ ಕುಮಾರಸ್ವಾಮಿ ಜತೆ ಕೇರಳದ ದೇವಾಲಯವೊಂದಕ್ಕೆ ಮಂಗಳವಾರ
ವಿಶೇಷ ಪೂಜೆ ಸಲ್ಲಿಸಲು ತೆರಳಿದ್ದ ಕಾರಣ, ಇಲ್ಲಿಗೆ ಬಂದಿಲ್ಲ ಎನ್ನಲಾಗಿದೆ.

ಚುನಾವಣಾಧಿಕಾರಿಗೆ ದೂರು
ಮಂಡ್ಯ: ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಮೈತ್ರಿಕೂಟದ ಅಭ್ಯರ್ಥಿ ಯಾಗಿ
ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರ ನಿಖೀಲ್‌ ಸ್ಪರ್ಧಿಸಿರುವ ಹಿನ್ನೆಲೆಯಲ್ಲಿ ಸಿಎಂ
ಅವರು, ರಾಜ್ಯ ಪೊಲೀಸ್‌ ಇಲಾಖೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ
ಎಂದು ಸಾಮಾಜಿಕ ಹೋರಾಟಗಾರ ಕೆ.ಆರ್‌.ರವೀಂದ್ರ ಮುಖ್ಯ ಚುನಾವಣಾಧಿಕಾರಿಗೆ
ದೂರು ನೀಡಿದ್ದಾರೆ. ಅಲ್ಲದೆ, ಜಿಲ್ಲಾ ಪೊಲೀಸ್‌ ಅಧೀಕ್ಷಕ ಡಿ.ಶಿವಪ್ರಕಾಶ್‌, ಎಎಸ್ಪಿ
ಬಲರಾಮೇಗೌಡ, ಅಧೀನ ಸಿಬ್ಬಂದಿಯನ್ನು ತಕ್ಷಣವೇ ವರ್ಗಾವಣೆ ಮಾಡುವಂತೆ
ಒತ್ತಾಯಿಸಿದ್ದಾರೆ.

ಕಣದಿಂದ ಹಿಂದಕ್ಕೆ ಸರಿದ ಸುಮಲತಾ ಮಂಜುನಾಥ್‌
ಕೆ.ಆರ್‌.ಪೇಟೆ: ಯಾರದೋ ಮಾತು ಕೇಳಿ ನಾಮಪತ್ರ ಸಲ್ಲಿಸಿದ್ದು, ನನ್ನ ಪತ್ನಿ ಸುಮಲತಾ ಗುರುವಾರ ನಾಮಪತ್ರ ಹಿಂಪಡೆಯಲಿದ್ದಾರೆ ಎಂದು ಮಂಡ್ಯ ಜಿಲ್ಲಾ ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ವರ್ಧಿಸಿರುವ ಸುಮಲತಾ ಪತಿ ಮಂಜುನಾಥ್‌ ಬೂಕನಕೆರೆಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್‌ ಅವರನ್ನು ಭೇಟಿ ಮಾಡಿ ತಿಳಿಸಿದ್ದಾರೆ. ಈ ಮಧ್ಯೆ, “ನಾನು ಪ್ರಚಾರಕ್ಕಾಗಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದೇನೆ. ಯಾವುದೇ ಕಾರಣಕ್ಕೂ ನಾಮಪತ್ರ ವಾಪಸ್‌ ಪಡೆಯುವುದಿಲ್ಲ’ ಎಂದು ಶ್ರೀರಂಗಪಟ್ಟಣ ತಾಲೂಕಿನ ಟಿ.ಹೊಸೂರಿನ ಪಕ್ಷೇತರ ಅಭ್ಯರ್ಥಿ ಸುಮಲತಾ
ಸಿದ್ದೇಗೌಡ ಸ್ಪಷ್ಟಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next