Advertisement

Sulya: ವಾರಂಟ್‌ ಆರೋಪಿ ಪರಾರಿ

12:54 AM Oct 06, 2024 | Team Udayavani |

ಸುಳ್ಯ: ವಾರಂಟ್‌ ಆರೋಪಿಯೋರ್ವ ವೈದ್ಯಕೀಯ ತಪಾಸಣೆ ಸಂದರ್ಭದಲ್ಲಿ ಆಸ್ಪತ್ರೆಯಿಂದಲೇ ಪರಾರಿಯಾಗಿರುವ ಘಟನೆ ಶನಿವಾರ ಸುಳ್ಯದಲ್ಲಿ ನಡೆದಿದೆ.
ಸುಳ್ಯದ ಕಲ್ಲುಗುಂಡಿಯಲ್ಲಿ ಕೆಲವು ವರ್ಷಗಳ ಹಿಂದೆ ನಡೆದಿದ್ದ ಕಳ್ಳತನ ಪ್ರಕರಣದ ಆರೋಪಿ ಕಾರ್ತಿಕ್‌ ಪರಾರಿಯಾದವ.

Advertisement

ಆರೋಪಿಯನ್ನು ಬಂಧಿಸಿರುವ ಪೊಲೀಸರು, ನ್ಯಾಯಾಲಯಕ್ಕೆ ಹಾಜರುಪಡಿಸುವ ಮೊದಲು ಇಬ್ಬರು ಪೊಲೀಸರ ಭದ್ರತೆಯಲ್ಲಿ ಸುಳ್ಯದ ಸರಕಾರಿ ಆಸ್ಪತ್ರೆಗೆ ಆರೋಗ್ಯ ತಪಾಸಣೆಗಾಗಿ ಕರೆ ತಂದಿದ್ದರು. ಈ ವೇಳೆ ಓರ್ವ ಚೀಟಿ ಮಾಡಿಸಲು ತೆರಳಿದ್ದಾಗ ಇನ್ನೋರ್ವ ಸಿಬಂದಿಯೊಂದಿಗಿದ್ದ ಆರೋಪಿ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.

ಆಸ್ಪತ್ರೆಯಿಂದ ಹೊರಬಂದ ಆರೋಪಿ ರಸ್ತೆಗೆ ಬಂದು ಹತ್ತಿರದ ತೋಟಕ್ಕೆ ಜಿಗಿದು ತಪ್ಪಿಸಿಕೊಂಡಿದ್ದಾನೆ. ಪೊಲೀಸರು ಆರೋಪಿಗಾಗಿ ಹುಡುಕಾಟ ಆರಂಭಿಸಿದ್ದು, ತಡರಾತ್ರಿ ವರೆಗೂ ಹುಡುಕಾಟ ಮುಂದುವರಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next